ಕಾತಿ೯ಕ್ ಮನೆಯಲ್ಲಿ ತನಿಷಾಗೆ ಭಜ೯ರಿ ಸನ್ಮಾನ, ಮನಸ್ಸಿನಲ್ಲಿಯೇ ಬೈದುಕೊಂಡ ಸಂಗೀತಾ
ಬಿಗ್ ಬಾಸ್ ಕನ್ನಡ 10 ವಿಜೇತ ಕಾರ್ತಿಕ್ ಮಹೇಶ್ ಮನಗೆ ತನಿಷಾ ಕುಪ್ಪಂಡ ಅವರು ಆಗಮಿಸಿದ್ದಾರೆ. ತನಿಷಾ ಅವರ ಕಾಲು ತೊಳೆದು ಅವರನ್ನು ಬರ ಮಾಡಿಕೊಳ್ಳಲಾಗಿದೆ. ಕಾರ್ತಿಕ್ ಅವರ ತಂಗಿ ತೇಜಸ್ವಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದಕೂಡಲೇ ಮೈಸೂರಿಗೆ ತೆರಳಿ ಕಾರ್ತಿಕ್ ಕೂಡ ಮಗುವನ್ನು ಎತ್ತಿ ಆಡಿಸಿದ್ದರು. ಕಾರ್ತಿಕ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅವರ ತಂಗಿಯ ಹೆರಿಗೆ ಆಗಿತ್ತು.
ದೊಡ್ಮನೆಯಲ್ಲಿದ್ದಾಗ ಕಾರ್ತಿಕ್ ಅವರು ಪದೇ ಪದೇ ತಂಗಿಗೆ ಹೆರಿಗೆ ಆಯ್ತಾ? ತಂಗಿ ಆರೋಗ್ಯವಾಗಿದ್ದಾಳಾ ಅಂತ ಪ್ರಶ್ನೆ ಮಾಡಿದ್ದರು. ಆ ನಂತರ ಕಾರ್ತಿಕ್ ತಂಗಿಗೆ ಹೆರಿಗೆ ಆಗಿರುವ ವಿಷಯ ರಿವೀಲ್ ಆಗಿತ್ತು. ಆಗ ತನಿಷಾ ಕುಪ್ಪಂಡ ಅವರು ಮೊದಲು ಕಾರ್ತಿಕ್ ತಂಗಿ ಮಗನಿಗೆ ಬೆಳ್ಳಿಯ ಉಡುಗೊರೆ ನೀಡಿದ್ದರು.
ಬಿಗ್ ಬಾಸ್ ಮನೆಯಿಂದಾಚೆ ಬಂದಿರುವ ತನಿಷಾ ಕುಪ್ಪಂಡ ಅವರು ಬಿಡುವು ಮಾಡಿಕೊಂಡು, ಮೈಸೂರಿನಲ್ಲಿರುವ ಕಾರ್ತಿಕ್ ತಂಗಿ ಮನೆಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ, ಮಗುವಿಗೆ ಚಿನ್ನದ ಉಂಗುರವನ್ನು ಹಾಕಿದ್ದಾರೆ. ತನಿಷಾ ಅವರನ್ನು ನೋಡಿ ಕಾರ್ತಿಕ್ ತಾಯಿ ಮೀನಾಕ್ಷಿ, ತಂಗಿ ತೇಜಸ್ವಿನಿ ಫುಲ್ ಖುಷಿ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ತನಿಷಾ ಕುಪ್ಪಂಡ ಅವರದ್ದು ಗಟ್ಟಿ ಸ್ನೇಹ. ಅಸಮರ್ಥರಾಗಿ ಬಿಗ್‌ಬಾಸ್ ಪ್ರವೇಶಿಸಿ ಎಲ್ಲರ ಮನಗೆದ್ದಿತ್ತು ಈ ಜೋಡಿ. ಬಿಗ್‌ಬಾಸ್‌ನಲೇ ಕಾರ್ತಿಕ್ ತಂಗಿ ಮಗನಿಗೆ ಬೆಳ್ಳಿ ಚೈನ್ ನೀಡಿದ್ದರು ತನಿಷಾ. ಈಗ ಕಾರ್ತಿಕ್ ತಂಗಿ ತೇಜಸ್ವಿನಿ ಮನೆಗೆ ತೆರಳಿ ಪುಟಾಣಿಗೆ ಚಿನ್ನದ ಉಂಗುರ ತೊಡಿಸಿ ಸಂಭ್ರಮಿಸಿದ್ದಾರೆ. ಕಾರ್ತೀಕ್ ಅಮ್ಮ ತನಿಷಾ ಗುಣಕ್ಕೆ ಮಾರುಹೋಗಿ ಸನ್ಮಾನ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.