ಗಂಡನ ಸುಖಕ್ಕಾಗಿ ಬಹುಕೋಟಿ ವೆಚ್ಚದ ಮನೆ ನಿರ್ಮಾಣ ಮಾಡಿದ ತಾರಾ, ಒಳಗೆ ಸ್ವರ್ಗದಂತಿದೆ
Jan 19, 2025, 18:11 IST
|

ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಇನ್ಮೇಲೆ ಡಾ ತಾರಾ ಅನೂರಾಧಾ! ಹೌದು.. ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಪರಿಗಣಿಸಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಟಿ ತಾರಾ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಗೌರವ ಡಾಕ್ಟರೇಟ್ ಪಡೆದ ಖುಷಿಯಲ್ಲಿ ನಟಿ ತಾರಾ ತಮ್ಮ ನಿವಾಸದಲ್ಲಿ ವಿಶೇಷ ಔತಣಕೂಟ ಆಯೋಜಿಸಿದ್ದರು.ಡಾ ತಾರಾ ಅನೂರಾಧಾ ಆದ ಸಂತಸದಲ್ಲಿ ಮನೆಯಲ್ಲಿ ಹೋಮ - ಹವನವನ್ನೂ ಹಮ್ಮಿಕೊಂಡಿದ್ದರು.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಜಯಮಾಲಾ, ಶ್ರುತಿ, ಸುಧಾರಾಣಿ, ಪದ್ಮಾ ವಾಸಂತಿ, ಹೇಮಾ ಚೌಧರಿ, ಸುಮಿತ್ರಾ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ, ಅಂಜಲಿ ಸುಧಾಕರ್, ಪೂಜಾ ಗಾಂಧಿ, ಅನು ಪ್ರಭಾಕರ್ ಮುಂತಾದ ನಟಿಯರು ಔತಣಕೂಟದಲ್ಲಿ ಪಾಲ್ಗೊಂಡರು ಡಾ ತಾರಾ ಅವರಿಗೆ ಶುಭಕೋರಿದರು.ಪೂಜೆ ನೆರವೇರಿಸಲಾಗಿದೆ. ಬಳೆ ಶಾಸ್ತ್ರ ಕೂಡ ಮಾಡಿದ್ದಾರೆ. ಇನ್ನು ಭಾವನಾ ರಾವ್ ಹಾಗೂ ಸುಧಾರಾಣಿ ಮಗಳು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಸದ್ಯ ಸೀರಿಯಲ್ ಗಳಲ್ಲಿ ಮಿಂಚುತ್ತಿರುವ ಅಂಜಲಿ ಸುಧಾಕರ್ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ತಾರಾ ಮನೆಯಲ್ಲಿ ಕಳೆದ ಸುಂದರ ಕ್ಷಣಗಳು, ಸ್ನೇಹವೆಂದರೆ ಜೀವನದ ಅತ್ಯಮೂಲ್ಯ ಉಡುಗೊರೆ ಎಂದು ಬರೆದುಕೊಂಡಿದ್ದಾರೆ.ನಟಿ ಭಾವನಾ ರಾವ್ ಹಾಗೂ ಸುಧಾರಾಣಿ ಪುತ್ರಿ ನಿಧಿ ನಧೀಂ ಧೀಂ ತನ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಮಾಡಿದ್ದಾರೆ. ಇವರ ನೃತ್ಯದ ವಿಡಿಯೋವನ್ನು ನಟಿ ಸುಧಾರಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗ್ತಿದೆ.
ಉಂಡು ಹೋದ ಕೊಂಡು ಹೋದ, ಮಾಲಾಶ್ರೀ ಮಾಮಾಶ್ರೀ, ತುಂಬಿದ ಮನೆ, ಪ್ಯಾರಿಸ್ ಪ್ರಣಯ, ನಮ್ಮ ಬಸವ, ಹೆಬ್ಬೆಟ್ ರಾಮಕ್ಕ, ಟಗರು ಪಲ್ಯ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಇದ್ದಾರೆ. ಈ ವೇಳೆ ಅನುದಾನ ಸೇರಿದಂತೆ ಇತರೆ ವಿಚಾರಗಳ ಕುರಿತು ನಾನು ವಿಜಯಪುರದ ಮಹಿಳಾ ವಿವಿ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ವಿವಿಗೆ ಹೆಚ್ಚು ಅನುದಾನ ಸಿಗಬೇಕೆಂದು ಒತ್ತಾಯ ಮಾಡಿದ್ದರು ತಾರಾ.
ಈ ಮುಂಚೆ ನಟಿ ತಾರಾ ಸಂಕ್ರಾಂತಿ ಹಬ್ಬದ ದಿನ ಬಿಗ್ ಬಾಸ್ ಮನೆಗೂ ತೆರಳಿ ಅಲ್ಲಿ ಸ್ಪರ್ಧಿಗಳಿಗೆ ಎಳ್ಳು ಬೆಲ್ಲ ನೀಡಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಜೊತೆಗೆ ಹಬ್ಬದ ದಿನ ಎಲ್ಲರೂ ಒಳ್ಳೆಯ ಮಾತುಗಳನ್ನು ಆಡುವಂತೆ ಹೇಳಿದ್ದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.