ಹನಿಮೂನ್ ಮುಗಿದ ಕುಶಿಯ ಬೆನ್ನಲ್ಲೇ ತನಿಷಾ ಅಂಗಡಿಯಲ್ಲಿ ಹೆಂಡತಿಗೆ ಚಿನ್ನ ಖರೀದಿಸಿದ ತರುಣ್
Oct 14, 2024, 20:39 IST
|
ಕನ್ನಡ ನಿರ್ದೇಶಕ ತರುಣ್ ಸುಧೀರ್ - ಕನ್ನಡ ನಟಿ ಸೋನಲ್ ಮಂಥೆರೊ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ - ಸೋನಲ್ ಮಂಥೆರೊ ವಿವಾಹ ಮಹೋತ್ಸವ ಜರುಗಿತು. ಮದುವೆಯಾದ ಬಳಿಕ ಮೊದಲು ದುಬೈಗೆ ತೆರಳಿದ್ದ ನವದಂಪತಿ ಇದೀಗ ಮಾಲ್ದೀವ್ಸ್‌ನಲ್ಲಿದ್ದಾರೆ.ಹನಿಮೂನ್ ನಿಮಿತ್ತ ಮಾಲ್ದೀವ್ಸ್‌ಗೆ ಹೋಗಿ ಬಂದಿದ್ದಾರೆ.
ತರುಣ್ ಸುಧೀರ್ - ಸೋನಲ್ ಮಂಥೆರೊ ಕಡಲ ತೀರದಲ್ಲಿನ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನ ಕಂಡ ನೆಟ್ಟಿಗರಿಗೆ ಸೋನಲ್ ಮಂಥೆರೊ ಅವರ ತಾಳಿ ಮೇಲೆ ಕಣ್ಣಿದೆ. ಕರಿಮಣಿ ಮಾಂಗಲ್ಯಸರವನ್ನ ಸೋನಲ್ ಮಂಥೆರೊ ಧರಿಸಿದ್ದು, ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತರುಣ್ ಹುಟ್ಟುಹಬ್ಬದ ನಿಮಿತ್ತ ನವಜೋಡಿ ಮಾಲ್ಡೀವ್‌ಗೆ ತೆರಳಿದ್ದರು. ಅಲ್ಲೇ ಪತಿಯ ಹುಟ್ಟುಹಬ್ಬವನ್ನು ನಟಿ ಆಚರಿಸಿದ್ದಾರೆ. ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು.
ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದರು.ಮದುವೆಯಾದ ಮೇಲೆ ಕೆಲವು ರಿಯಾಲಿಟಿ ಶೋಗೆ ಬಂದಿರುವ ಈ ಸ್ಟಾರ್ ಜೋಡಿಗೆ ಹಲವು ಸರ್‌ಪ್ರೈಸ್‌ಗಳನ್ನು ವೇದಿಕೆಯಲ್ಲಿ ಪಡೆದಿದೆ.
ಸ್ಪೆಷಲ್ ಗೆಸ್ಟ್ ಆಗಿರುವ ತರುಣ್ ಹಾಗೂ ಸೋನಲ್‌ಗೆ ಡಿಕೆಡಿ ತಂಡ ಬಿಗ್ ಸರ್‌ಪ್ರೈಸ್ ಕೊಟ್ಟಿದೆ. ತರುಣ್ ಅವರಿಗೆ ಅವರ ತಂದೆ ದಿವಂಗತ ಸುಧೀರ್ ಅವರಿಂದಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮದುವೆಯ ಶುಭಾಶಯ ಕೋರಲಾಗಿದೆ. ಇನ್ನು ಹಬ್ಬದ ನಿಮಿತ್ತ ಹೆಂಡತಿಗೆ ಚಿನ್ನ ಕೊಡಿಸಲು ತರುಣ್ ಸುಧೀರ್ ಹೆಂಡತಿಯೊಂದಿಗೆ ತೆರಳಿದಾಗ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.