ಮಾಲ್ಡೀವ್ಸ್ ನಲ್ಲಿ‌‌ ಹದಿಮೂನ್ ಮುಗಿಸಿ ಬಂದ ತಕ್ಷಣ ಕೈಯಲ್ಲಿ ಮಗು ಎತ್ತುಕೊಂಡ ತರುಣ್ ಸೋನಲ್

 | 
Jd
ಕನ್ನಡ ಚಿತ್ರರಂಗದ ನಟಿ ಸೋನಲ್ ಮೊಂಥೆರೋ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಬರ್ಟ್‌ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ಸೋನಲ್ ಮೊಂಥೆರೋ ಕರಾವಳಿ ಭಾಗದವರು. ಮೂಲತಃ ಮಂಗಳೂರಿನವರಾದ ಸೋನಲ್ ಮೊದಲು ತುಳು ಚಿತ್ರಗಳಲ್ಲಿ ನಟಿಸಿದ್ದರು. ತುಳು ಭಾಷೆಯ ಎಕ್ಕ ಸಕ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 
ಪಿಲಿಬೈಲ್‌ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿ ಬಳಿಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಕನ್ನಡ ನಟಿ ಸೋನಲ್ ಮೊಂಥೆರೋ ಅವರು ತರುಣ್ ಸುಧೀರ್ ಅವರನ್ನು ಮದುವೆಯಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಬಾರಿ ಅವರು ದುಬೈಗೆ ಹೋಗಿದ್ದಾರೆ, ಅಲ್ಲಿ ಅವರ ಅಕ್ಕನ ಮನೆಗೆ ಭೇಟಿ ನೀಡಿ ಅವರ ಮಗುವಿನ ಜೊತೆ ಒಂದಷ್ಟು ಸಮಯ ಕಳೆದಿದ್ದಾರೆ.
ಸೋನಲ್ ಮೊಂಥೆರೋ ಹಾಗೂ ತರುಣ್ ಸುಧೀರ್ ಅವರು ಮಗುವನ್ನು ಮುದ್ದಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿರುವ ಈ ಜೋಡಿ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ಹೋಗಿ ಬಂದಿದ್ದಾರೆ.ಸೋನಲ್ ಅವರ ಅಕ್ಕ ದುಬೈನಲ್ಲಿ ಇರುತ್ತಾರೆ. ಅಲ್ಲಿ ಅವರು ಅಕ್ಕನ ಮಗು ಜೊತೆ ಸಮಯ ಕಳೆದಿದ್ದಾರೆ.
ಸೋನಾಲ್ ಮಾಂಥೆರೋ ಹೆಚ್ಚಾಗಿ ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ಪ್ರಚಾರವಿದ್ದಾಗ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಾರೆ ಈ ಕಾರಣಕ್ಕೆ ಸೋನಾಲ್ ಮಾಂಥೆರೋ ತಮ್ಮ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಎಲ್ಲೂ ಕೇಳಿ ಬಂದಿಲ್ಲ. 
ಈ ನಟಿ ತಂದೆ ಕೂಡ ಒಬ್ಬ ಒಳ್ಳೆಯ ಹಾಡುಗಾರ. ಇಬ್ಬರು ಅಕ್ಕಂದಿರು ನ್ಯಾಶನಲ್ ಲೆವೆಲ್ಸ್ ಸಿಂಗರ್ಸ್ ಎಂದೇ ಗುರುತಿಸಿ ಕೊಂಡಿದ್ದಾರೆ. ಒಟ್ಟಿನಲ್ಲಿ ಇವರ ಕುಟಂಬದ ಸದಸ್ಯರು ಕೂಡ ಕಲಾರಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.