ಸೋನಲ್ ಮುಂದೆ ಅಪ್ಪಟ ತುಳು ಭಾಷೆಯಲ್ಲಿ ಮಾತಾನಾಡಿದ ತರುಣ್ ಸುಧೀರ್

 | 
ರಗ
ನಿರ್ದೇಶಕ ತರುಣ್ ಸುಧೀರ್ , ನಟಿ ಸೋನಲ್ ಮೊಂಥೆರೋ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಹಿಂದೂ ಸಂಪ್ರದಾಯದ ಬಳಿಕ ಸೋನಾಲ್ ಅವರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನ ಕುಲಶೇಖರ ದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ವಿವಾಹವಾದರು.
 ರಿಂಗ್ ಬದಲಿಸುವ ಮೂಲಕ ತರುಣ್ ಸೋನಲ್‌ರನ್ನು ಎರಡನೇ ಬಾರಿ ವರಿಸಿದ್ದಾರೆ. ಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ನವ ಜೋಡಿಗಳು ಕಾಲಿರಿಸಿದ್ದಾರೆ. ಇನ್ನು ಹೆಂಡತಿಯನ್ನು ಮೆಚ್ಚಿಸಲು ತುಳು ಭಾಷೆಯಲ್ಲಿ ಮಾತನಾಡಲು ಕೂಡ ಪ್ರಯತ್ನಿಸಿದ್ದಾರೆ.
ಮದುವೆ ಸಮಾರಂಭವು ಕ್ರಿಶ್ಚಿಯನ್‌ ಸಂಪ್ರದಾಯದಂತೆ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯಿತು. ಬಳಿಕ ಮಂಗಳೂರಿನ ಎಂಜಿ ರೋಡ್‌ನಲ್ಲಿರುವ ಟಿಎಂಎ ಪೈ ಹಾಲ್‌ನಲ್ಲಿ ರಿಸೆಪ್ಶನ್ ಭಾರೀ ಗ್ರ್ಯಾಂಡ್‌ ಆಗಿ ನಡೆಯಿತು. ಬಿಳಿ ಬಣ್ಣದ ಸೂಟ್ ನಲ್ಲಿ ತರುಣ್ ಮಿಂಚಿದ್ರೆ, ಬಿಳಿ ಗೌನ್ ನಲ್ಲಿ ಸೋನಲ್ ಕಣ್ಮನ ಸೆಳೆದರು.
ಐಷಾರಾಮಿ ಕಾರುಗಳಿಂದ ನವಜೋಡಿ ಹಾಲ್ ಮುಂಭಾಗ ಇಳಿಯುತ್ತಿದ್ದಂತೇ ಸಂಗಡಿಗರ ಡ್ಯಾನ್ಸ್ ಕೂಡಾ ಜೋರಾಗಿಯೇ ಇತ್ತು. ಸೋನಲ್ ಮತ್ತು ತರುಣ್ ಬ್ಯಾಂಡ್ ಬೀಟ್‌ಗೆ ಹೆಜ್ಜೆ ಹಾಕಿದರು. ಬಳಿಕ ಟಿಎಂಎ ಪೈ ಹಾಲ್ ನ ಮುಂಭಾಗ ತರುಣ್ ತಂದೆ ಸುಧೀರ್ ಅವರ ಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದುಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.