ಮನಸ್ಸಿನಲ್ಲಿ ನೋವಿಟ್ಟುಕೊಂಡು ಮಾತನಾಡಿದ ತರುಣ್ ತಾಯಿ;
Aug 11, 2024, 19:20 IST
|
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಇಂದು ಬೆಂಗಳೂರಿನ ನಡೆದಿದೆ. ನಿನ್ನೆ ಅಂದ್ರೆ ಆಗಸ್ಟ್ 10ರಂದು ರಿಸೆಪ್ಷನ್ ನಡೆದಿತ್ತು. ಇಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.
ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ಸೋನಲ್ಗೆ ತಾಳಿ ಕಟ್ಟಿದ ಸುಧೀರ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಸೋನಲ್ ಮೊಂಥೆರೋ ಅವರ ಹುಟ್ಟೂರು ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮುಂದಿನ ತಿಂಗಳು ನಡೆಯಲಿದೆ. ಇಂದು ಸೋನಲ್ ಅವರ ಹುಟ್ಟುಹಬ್ಬವಾಗಿರುವುದು ಕೂಡ ವಿಶೇಷವೇ.
ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ನಿರ್ಮಾಣ ಮಾಡಲಾಗಿತ್ತು. ಕಲಾಂಜನಿ ವೆಡ್ಡಿಂಗ್ಸ್ ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ಹಾಕಲಾಗಿತ್ತು.
ಮದುವೆಗೂ ಮುನ್ನ ತಮ್ಮ ಭಾವಿ ಸೊಸೆ ಸೋನಲ್ ಮತ್ತು ಮಗ ತರುಣ್ ಕುರಿತು ತರುಣ್ ತರುಣ್ ಸುಧೀರ್ ಅವರ ಅಮ್ಮ ಮಾಲತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಚಿತ್ರರಂಗನೇ ನನ್ನ ಉಸಿರು, ಸಿನಿಮಾನೇ ಜೀವನೇ ಅಂತಿದ್ದ. ಮದುವೆಯ ಬಗ್ಗೆ ಮಾತೇ ಆಡುತ್ತಿರಲಿಲ್ಲ. ಮನೆಯಲ್ಲಿಯೂ ಜಾಸ್ತಿ ಮಾತನಾಡುವವನಲ್ಲ, ಊಟ ಆಯ್ತಾ, ಊಟ ಹಾಕು, ಊಟ ಮುಗೀತು ಇಷ್ಟೇ ಹೇಳ್ತಿದ್ದ.
ಕೇಳಿದ್ರೆ ಚಿತ್ರಗಳಲ್ಲಿ ವಿನಲ್ಗಳಿಗೆ ಹೆಚ್ಚು ಡೈಲಾಗ್ ಇರಲ್ಲ. ಎಸ್ ಬಾಸ್, ನೋ ಬಾಸ್, ಓಕೆ ಬಾಸ್ ಈ ಮೂರೇ ಡೈಲಾಗ್ ಇರ್ತದೆ ಅನ್ನುತ್ತಿದ್ದ. ಇವನು ಮದುವೆನೇ ಆಗಲ್ವೇನೋ ಅಂತ ಬೇಸರವಾಗಿತ್ತು. ಆದರೆ ಈಗ ಮದುವೆಯಾಗಬೇಕು, ಸಂಸಾರ ಮಾಡಬೇಕು ಎನ್ನುವ ಜವಾಬ್ದಾರಿ ಬಂದಿರೋದು ಖುಷಿಯ ವಿಷಯವಾಗಿದೆ. ಒಂದೇ ಒಂದು ನೋವು ಅಂದ್ರೆ ಯಜಮಾನರು ಇಲ್ಲ ಅನ್ನೋದಷ್ಟೇ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.