ಧನ್ವರ್ ಮುಖದಲ್ಲಿ ಕಣ್ಣೀ ರು; ಬಾಸ್ ಒಳಗಡೆ ನ ರಕ ಅನುಭವಿಸ್ತಿದ್ದಾರೆ

 | 
He

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್, ಅರೆಸ್ಟ್ ಆಗಿದ್ದಾರೆ. ಈ ಕೇಸ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಬಂಧನಕ್ಕೊಳಗಾಗಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ನಟ ಧನ್ವೀರ್ ಮಾತನಾಡಿಸಿಕೊಂಡು ಬಂದಿದ್ದಾರೆ. ನಮ್ಮಣ್ಣ ಅದೇ ಜೋಶ್‌ನಲ್ಲಿ ಇದ್ದಾರೆ ಎಂದು ಧನ್ವೀರ್ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ಹೊರಬಂದ ಧನ್ವೀರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣನನ್ನು ಭೇಟಿಯಾಗಿ ಬಂದೆ, ಆರಾಮಾಗಿ ಇದ್ದಾರೆ. ನಮ್ಮಿಬ್ಬರ ನಡುವೆ ಅಲ್ಲಿ ನಡೆದ ಮಾತುಕತೆಯನ್ನು ಮಾಧ್ಯಮಗಳ ಎದುರು ಹೇಳಿಕೊಳ್ಳಲು ಆಗುವುದಿಲ್ಲ. ನಾವು ಡಿ ಬಾಸ್ ಅಂತ ಕರೆಯುವಾಗ ಆ ವ್ಯಕ್ತಿ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. 

ಅಭಿಮಾನಿಗಳು ಯಾರೂ ಕುಗ್ಗುವಂತಹ ಅವಶ್ಯಕತೆ ಇಲ್ಲ. ನಮ್ಮಣ್ಣ ಇನ್ನೂ ಅದೇ ಜೋಶ್‌ನಲ್ಲಿ ಇದ್ದಾರೆ ಎಂದು ಧನ್ವೀರ್ ತಿಳಿಸಿದ್ದಾರೆ. ಹಲವು ಕಡೆ ನಾನು ಕೇಳಿದ್ದೇನೆ. ಯಾರೂ ಮಾತಾಡ್ತಿಲ್ಲ.. ಮಾತಾಡ್ತಿಲ್ಲ.. ಅಂತ ಹೇಳ್ತಾ ಇದ್ದಾರೆ. ಆದರೆ ಇದು ಮಾತಾಡುವ ಸನ್ನಿವೇಶ ಅಲ್ಲ. ಇದು ನ್ಯಾಯಾಂಗ ಬಂಧನದಲ್ಲಿದೆ. ಅದಕ್ಕೆ ಅಂತಾನೇ ಪೊಲೀಸ್ ಇದ್ದಾರೆ, ಕಾನೂನು ಇದೆ. ಅವರು ತನಿಖೆ ಮಾಡುತ್ತಾರೆ.

ನಾವು ಮಾತಾಡಿದ ಮಾತ್ರಕ್ಕೆ ಎಲ್ಲವೂ ಬಗೆಹರಿಯುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಧನ್ವೀರ್ ಪ್ರತಿಕ್ರಿಯಿಸಿದ್ದಾರೆ. ತಪ್ಪಾಗಿದೆಯೋ, ಇಲ್ಲವೋ ಅದು ಭಗವಂತನಿಗೆ ಗೊತ್ತು. ಮಾತನಾಡುವ ಸಂದರ್ಭದಲ್ಲಿ ಮಾತನಾಡಬೇಕು. ಎಲ್ಲ ಸಂದರ್ಭದಲ್ಲೂ ಮಾತನಾಡುವುದಕ್ಕೆ ಆಗುವುದಿಲ್ಲ. 

ಇವತ್ತಲ್ಲ, ಮುಂದೆ ಯಾವತ್ತಾದರೂ ಸರಿಯೇ, ನಾನು ದರ್ಶನ್ ಅಣ್ಣನನ್ನು 'ನಮ್ಮಣ್ಣ' ಅಂತ ಹೇಳಿಕೊಳ್ಳುವುದಕ್ಕೆ ಯಾವತ್ತಿಗೂ ಹಿಂಜರಿಯುವುದಿಲ್ಲ. ನನಗೆ ಯಾವ ಹೆದರಿಕೆಯೂ ಇಲ್ಲ ಎಂದು ಧನ್ವೀರ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.