'ಆ ಒಂದು ಕೆಲಸದಿಂದ ನನ್ನ ಜೀವನವೇ ಹಾಳಾಯ್ತು' ಸಿಂಧು ಮೆನನ್

 | 
ಕಕ

ಮುದ್ದು ಮುಖದ ಚಲುವೆ ಸಿಂಧು ಮೆನನ್ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಕನ್ನಡ ಚಿತ್ರರಂಗದಲ್ಲಿ ಪರಭಾಷಾ ನಟಿಯರು ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡು ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ನಟಿಯರಲ್ಲಿ ಕೆಲವರು ಕನ್ನಡದಲ್ಲಿಯೇ ನೆಲೆಯೂರಿದ್ದರೆ, ಇನ್ನೂ ಕೆಲವರು ಕನ್ನಡದ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ, ಗಮನ ಸೆಳೆದು ನಂತರ ಚಿತ್ರರಂಗವನ್ನು ತೊರೆದು ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

 ಕೆಲವು ನಟಿಯರು ಮಾತ್ರ, ಕನ್ನಡದಲ್ಲಿ ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದರು ಕೂಡ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ. ಅಂತವರಲ್ಲಿ ನಟಿ ಸಿಂಧು ಮೆನನ್ ಕೂಡ ಒಬ್ಬರು.ಸಿಂಧು ಮೆನನ್ ಅವರು ಜನಿಸಿದ್ದು1985 ನೆ ಇಸವಿ, ಬೆಂಗಳೂರಿನಲ್ಲಿ. ಕನ್ನಡದಲ್ಲಿ ದೇವರಾಜ್ ಅಭಿನಯದ ಹುಲಿಯ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 

ಕಿಚ್ಚ ಸುದೀಪ್ ಅವರ ಜೊತೆಗೆ ನಂದಿ, ದರ್ಶನ್  ಅವರ ಜೊತೆಗೆ ಧರ್ಮ ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡರು ಸಿಂಧು ಮೆನನ್. ಯಾರೇ ನೀ ಹುಡುಗಿ, ಖುಷಿ, ಮಾರಿ ಕಣ್ಣು ಹೋರಿಮ್ಯಾಗೆ, ಜೇಷ್ಠ ಮೊದಲಾದ ಕನ್ನಡದ ಹೆಸರಾಂತ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸಿಂಧು ಮೆನನ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಮಲಯಾಳಂ, ತೆಲುಗು ಮೊದಲಾದ ಚಿತ್ರರಂಗದಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ.

ವಾಸ್ತವವಾಗಿ ಕನ್ನಡಕ್ಕಿಂತಲೂ ಮಲಯಾಳಂ ಸಿನಿಮಾದಲ್ಲಿಯೇ ನಟಿಸಿದ್ದು ಹೆಚ್ಚು. ಒಟ್ಟಾರೆಯಾಗಿ ಸುಮಾರು 60ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಸಿಂಧು ಮೆನನ್ ಅಭಿನಯಿಸಿದ್ದಾರೆ.ಬೆಂಗಳೂರಿನವರಾದ ಸಿಂಧು ಮೆನನ್ ಮಲಯಾಳಂ ಚಿತ್ರ ರಂಗಕ್ಕೆ ಹೆಚ್ಚು ಚಿರಪರಿಚಿತ. ಚಿತ್ರರಂಗದಲ್ಲಿ ಡಿಮ್ಯಾಂಡ್ ಹೊಂದಿರುವಾಗಲೇ ಸಿಂಧು ಮೆನನ್ ಅವರು 2010ರಲ್ಲಿ, ತಮಿಳು ಸಿನಿಮಾ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಪ್ರಭು ಎನ್ನುವವರ ಜೊತೆಗೆ ವಿವಾಹವಾಗುತ್ತಾರೆ. 

ಸಿಂಧು ಮೆನನ್ ಅವರು ಸದ್ಯ, ಪತಿ ಇಬ್ಬರೂ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳ ಜೊತೆಗೆ ಯುಕೆಯಲ್ಲಿ ತಮ್ಮ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.