ಮಂಜುಳಾ ಅವರು ಸು ಸೈಡ್ ಮಾಡಿಕೊಳ್ಳಲು ಅದೇ ಕಾರಣವಂತೆ; ಆ ಕಾಲದಲ್ಲಿ ಎಲ್ಲವೂ‌ ಕೊಟ್ಟರೆ ಸಿನಿಮಾ ಅವಕಾಶ ಇರುತ್ತಿತ್ತು

 | 
Jd
ಖ್ಯಾತ ನಟಿ ಮಂಜುಳಾ ಅವರು ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.1970 ಹಾಗೂ 1980ರ ದಶಕದಲ್ಲಿ ನಟಿಸಿದ್ದ ಖ್ಯಾತ ನಟಿ. ಕನ್ನಡ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದ ನಟಿ ಮಂಜುಳಾ ಅವರು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ನಟಿ ಕಲ್ಪನಾ ಅವರು ಉತ್ತುಂಗದಲ್ಲಿದ್ದಾಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಂಜುಳಾ, ಮಿನುಗುತಾರೆ ಕಲ್ಪನಾರ ಸ್ಟಾರ್‌ಡಮ್‌ಗೆ ಪೆಟ್ಟು ಕೊಟ್ಟ ನಟಿ ಎನ್ನಬಹುದು. ನಿಧಾನವಾಗಿ ನಟಿ ಕಲ್ಪನಾ ಕೈಯನ್ನು ಬರಿದು ಮಾಡುತ್ತ ಸ್ಟಾರ್ ನಟಿಯಾಗಿ ಬೆಳೆದ ಮುಂಜುಳಾ ಅವರು ದುರಂತ ಸಾವು ಕಂಡಿದ್ದು ಸ್ವಯಂಕೃತ ಅಪರಾಧ ಎನ್ನಲಾಗಿದೆ.
08 ನವೆಂಬರ್ 1954ರಂದು ತುಮಕೂರಿನಲ್ಲಿ ಜನಿಸಿದ್ದ ಮಂಜುಳಾ ಅವರು 1965ರಲ್ಲಿ ಪ್ರಭಾತ್ ಕಲಾವಿದರು ಎಂಬ ನಾಟಕ ಕಂಪನಿಯಲ್ಲಿ ನಟನೆ ಶುರು ಮಾಡಿದ್ದರು. 1966ರಲ್ಲಿ ಮನೆ ಕಟ್ಟಿ ನೋಡು ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಮಂಜುಳಾ. ಬಳಿಕ 1972ರಲ್ಲಿ 'ಯಾರ ಸಾಕ್ಷಿ' ಚಿತ್ರದ ಮೂಲ;ಕ ನಾಯಕಿ ನಟಿಯಾಗಿ ವೃತ್ತಿಜೀವನ ಆರಂಭಿಸಿದ ಮಂಜುಳಾ ಅವರು ಸಾಯುವವರೆಗೂ ನಟಿಸುತ್ತಲೇ ಇದ್ದರು.
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಜೋಡಿಯಾದಿ ಬಜಾರಿ ಪಾತ್ರ ಮಾಡಿದ್ದರು ನಟಿ ಮಂಜುಳಾ. ಅವರು ಆ ಪಾತ್ರದಲ್ಲಿ ಅದೆಷ್ಟು ಖ್ಯಾತಿ ಪಡೆದಿದ್ದರು ಎಂದರೆ ಯಾರಾದರೂ ಸ್ವಲ್ಪ ಗಂಡುಬೀರಿ ತರ ಅಡಿದರೆ ಸಾಕು, ಅವರಿಗೆ ಮಂಜುಳಾ ಎಂದೇ ಆಗಿನ ಕಾಲದಲ್ಲಿ ಕರೆಯುತ್ತಿದ್ದರು. 'ನನ್ನ ನೀನು ಗೆಲ್ಲಲಾರೆ..' ಎಂಬ ಹಾಡಂತೂ ಇಂದಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. 1972-1986ರ ಅವಧಿಯಲ್ಲಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ನಟಿ ಮಂಜುಳಾಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದ ಎಂಬ ವದಂತಿ ಇದೆ. ತಮಿಳುನಾಡಿನ ಎಂ ಕರುಣಾನಿಧಿ ಅವರ ಅಕ್ಕನ ಮಗ ಅಮೃತಂ ಜತೆ ನಟಿ ಮಂಜುಳಾ ಮದುವೆ ಆಗಿದ್ದರು ಎಂದು ಹಲವರು ಹೇಳುತ್ತಾರೆ. ಆದರೆ ಇದು ನಿಜವೋ ಸುಳ್ಳೋ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಮದುವೆ ಜೀವನದಲ್ಲಿ ಗಂಡ-ಹೆಂಡತಿ ನಡುವೆ ಜಗಳ, ಭಿನ್ನಾಭಿಪ್ರಾಯ ಶುರುವಾಗಿತ್ತು. ಇದೇ ಕಾರಣಕ್ಕೆ ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ ಸೇರಿಕೊಂಡಿದ್ದರು ಎಂಬ ಬಹು ದೊಡ್ಡ ವದಂತಿ ಇದೆ. 
ಬಳಿಕ ನಟಿ ಮಂಜುಳಾ ಒಬ್ಬಂಟಿಯಾದರು. ಆ ನಂತರ ಚಾಮರಾಜನಗರದ ಹುಡುಗನೊಬ್ಬನ ಜೊತೆ ಪ್ರೇಮವಾಯಿತು. ಆದರೆ ಆತ ಮದುವೆಯಾಗಲು ನಿರಾಕರಿಸಿದ್ದ ಎಂದು ಹೇಳಲಾಗುತ್ತದೆ.ಪ್ರೀತಿಸಿದವನ ಮೋಸದಿಂದ ಬೇಸತ್ತ ನಟಿ ಮಂಜುಳಾ ತಾವೇ ಗ್ಯಾಸ್ ಲೀಕ್ ಮಾಡಿ ಬೆಂಕಿ ಹೊತ್ತಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು ಎನ್ನಲಾಗಿದೆ. ಮೈ ಸುಟ್ಟಿ ಆಸ್ಪತ್ರೆಯಲ್ಲಿ ನರಳಿ ಕೊನೆಗೆ ಪ್ರಾಣ ಬಿಟ್ಟಿದ್ದಾರೆ ಎನ್ನುವ ಮಾತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.