ಸಿನಿಮಾದಲ್ಲಿ ವಿಲನ್ ಆಗಿದ್ದ ನಟ ರೀಯಲ್ ಲೈಫ್ ನಲ್ಲಿ ಕೂಡ ದೊಡ್ಡ ವಿಲನ್

ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವತ್ಥ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹಾಸನದ ಬಡಾವಣೆ ಠಾಣೆ ಪೊಲೀಸರು ನೀನಾಸಂ ಅಶ್ವತ್ಥ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಜಡ್ಜ್ ಎದುರು ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶೇ. 25ರಷ್ಟು ಹಣವನ್ನು ಪಾವತಿ ಮಾಡಿದ್ದಾರೆ. ಹಾಗಾಗಿ ನೀನಾಸಂ ಅಶ್ವತ್ಥ್ ಅವರಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಇನ್ನುಳಿದ ಹಣವನ್ನು ಪಾವತಿಸಲು ಅವರು ಸಮಯಾವಕಾಶ ಕೋರಿದ್ದಾರೆ. ನಟ ನೀನಾಸಂ ಅಶ್ವತ್ಥ್ ಅವರು ಹಾಸನದ ರೋಹಿತ್ ಎಂಬುವವರಿಂದ ಹಸು ಖರೀದಿ ಮಾಡಿದ್ದರು. ಆಗ 1.5 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡಿದ್ದರು. ಆದರೆ ಹಣ ಪಡೆಯಲು ರೋಹಿತ್ ಅವರು ಬ್ಯಾಂಕ್ಗೆ ಹೋದಾಗ ಚೆಕ್ಬೌನ್ಸ್ ಆಗಿರುವುದು ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಹಾಸನದ ಜೆಎಮ್‌ಎಫ್‌ಸಿ ಕೋರ್ಟ್‌ನಲ್ಲಿ ರೋಹಿತ್ ಅವರು ಕೇಸ್ ಹಾಕಿದ್ದರು. ಈ ಪ್ರಕರಣದಲ್ಲಿ ನೀನಾಸಂ ಅಶ್ವತ್ಥ್ ಅವರು ಕೋರ್ಟ್ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ನ್ಯಾಯಾಲದ ಮುಂದೆ ಹಾಜರುಪಡಿಸಿದಾಗ ನೀನಾಸಂ ಅಶ್ವತ್ಥ್ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶೇಕಡ 25ರಷ್ಟು ಹಣವನ್ನು ನೀಡಿದ್ದಾರೆ.
ಇನ್ನುಳಿದ ಮೊತ್ತ ಪಾವತಿ ಮಾಡಲು ಜಡ್ಜ್ ಬಳಿ ಸಮಯಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನೀನಾಸಂ ಅಶ್ವತ್ಥ್ ಅವರಿಗೆ ಜಾಮೀನು ನೀಡಲಾಗಿದೆ. ಅವರನ್ನು ಬಿಡುಗಡೆ ಮಾಡಲಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.