ಮದುವೆಯಾದ ಎರಡೇ ತಿಂಗಳಿಗೆ ಗ.ರ್ಭಿಣಿಯಾದ ಸುದೀಪ್ ಜೊತೆ ನಟಿಸಿದ ನಟಿ

 | 
ರ

ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪಾಲ್  ಮೊದಲ ಪತಿಗೆ ವಿಚ್ಛೇದನ ನೀಡಿದ ನಂತರ ಜೀವನ ಅತಂತ್ರವಾಗಿತ್ತು. ಹಾಗಾಗಿ ಕೆಲಕಾಲ ಸಿನಿಮಾಗಳಿಂದ ದೂರವಾಗಿ ಭಕ್ತಿಯ ಹಾದಿ ಹಿಡಿದಿದ್ದರು. ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದರು. ಸ್ವಲ್ಪ ಸಮಯದ ನಂತರ, ನಿರ್ದೇಶಕರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಂತಿಮವಾಗಿ, ಈಗ ಅವರು ತಾಯಿಯಾಗಲಿದ್ದಾರೆ.

ಕಳೆದ ನವೆಂಬರ್​ನಲ್ಲಷ್ಟೇ ಎರಡನೇ ಮದುವೆಯಾಗಿದ್ದ ಬಹುಭಾಷಾ ನಟಿ ಅಮಲಾ ಪೌಲ್, ವಿವಾಹವಾದ 2 ತಿಂಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಾವೂ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.ಕನ್ನಡ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ತಾವು ತಾಯಿಯಾಗುತ್ತಿರುವ ಶುಭಸುದ್ದಿಯನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 3 ವಿಶೇಷ ಫೋಟೋಗಳನ್ನ ಶೇರ್​ ಮಾಡಿಕೊಂಡು ತಿಳಿಸಿದ್ದಾರೆ.

ಇನ್ನು ನಿರ್ದೇಶಕ ಜಗತ್ ದೇಸಾಯಿ ಅವರನ್ನು ಎರಡನೇ ಮದುವೆಯಾದ ಅಮಲಾಪಾಲ್, ಸಮುದ್ರ ತೀರದಲ್ಲಿ ತಮ್ಮ ಮತ್ತು ಪತಿ ಇರುವ ಮೂರು ಫೋಟೋಗಳನ್ನು ಸಾಂಕೇತಿಕವಾಗಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹುಟ್ಟಲಿರುವ ಮಗುವಿನ ಬಗ್ಗೆ ಕಾಮೆಂಟ್ ಮಾಡಿದ್ದಾಳೆ, ನಾವು ಒನ್ ಪ್ಲಸ್ ಒನ್ ಈಕ್ವಲ್ ತ್ರೀ (1+1=3) ಆಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಮಲಾ ಪೌಲ್ ಇತ್ತೀಚೆಗೆ ತಮ್ಮ ಪತಿ ಜಗತ್ ದೇಸಾಯಿ ಅವರೊಂದಿಗೆ ಕ್ರಿಸ್ಮಸ್ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದರು. ಅದರ ನಂತರ ಅವರು ಹೊಸ ವರ್ಷವನ್ನು ಆಚರಿಸಿದ್ದರು. ಇದೀಗ ಗರ್ಭಿಣಿಯಾಗಿರುವ ಅವರು ನೆಟಿಜನ್‌ಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಟಿ ಅಮಲಾಪಾಲ್ ಮಲೆಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. 

ಆದರೆ, ಆಕೆ ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ, ವಿವಾಹವಾಗಿದ್ದರು. ಆದರೆ ಮದುವೆಯ ನಂತರ ವಿಚ್ಛೇದನ ಪಡೆದು ಇದೀಗ ಹೊಸ ಬದುಕಿನ ಸಂತಸದ ಗಳಿಗೆಯಲ್ಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.