ಶಂಕರ್ ನಾಗ್ ಸಾ.ವಿನ ಹಿಂದೆ ದೊಡ್ಡ ಕುತಂತ್ರ, ಆ ಲಾರಿ ಯಾರ ಒಡೆತನದಲ್ಲಿ ಇತ್ತು ಗೊ.ತ್ತಾ

 | 
Dfc

ಜೋಕುಮಾರಸ್ವಾಮಿ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಅದನ್ನು ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು ಶಂಕರ್. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಯಮಸ್ವರೂಪಿಯಾಗಿ ಬಂದ ಲಾರಿಗೆ ಶಂಕರ್ ನಾಗ್‌ ಕಾರು ಡಿಕ್ಕಿಯಾಗಿತ್ತು. 

ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಅಲ್ಲಿ ನಿಂತಿದ್ದು ಹಾಳಾದ ಲಾರಿ ಇದು ಸಹಜ ಸಾವಲ್ಲ ಎಂಬ ಊಹಾಪೋಹಗಳಿದೆ. ಶಂಕರ್ ನಾಗ್ ಅವರ ವೃತ್ತಿಜೀವನ ನೋಡಿದ ಎಂಥವರಿಗಾದರೂ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ. ಯಾಕೆಂದರೆ, ಅವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದು 1978ರಲ್ಲಿ. 'ಒಂದಾನೊಂದು ಕಾಲದಲ್ಲಿ..' ಅವರ ಮೊದಲ ಸಿನಿಮಾ. 1990ರಲ್ಲಿ ಅವರು ನಿಧನರಾದರು. 

ಆ 12 ವರ್ಷಗಳ ಕಡಿಮೆ ಅವಧಿಯಲ್ಲಿ ಅವರು ನಟಿಸಿದ್ದ ಸಿನಿಮಾಗಳ ಸಂಖ್ಯೆ 90ಕ್ಕೂ ಅಧಿಕ! ಜೊತೆಗೆ ರಂಗಭೂಮಿ, ಸಿನಿಮಾ ನಿರ್ಮಾಣ, ಸ್ಟುಡಿಯೋ.. ಹೀಗೆ ಹತ್ತಾರು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದ ಮಿಂಚಿನ ವೇಗದ ವ್ಯಕ್ತಿತ್ವ ಶಂಕರ್ ನಾಗ್ ಅವರದ್ದಾಗಿತ್ತು. ಅವರ ಆಲೋಚನೆಗಳು ಯಾವಾಗಲೂ ಹತ್ತಿಪ್ಪತ್ತು ವರ್ಷ ಮುಂದೆ ಇರುತ್ತಿದ್ದವು. 1978ರಲ್ಲಿ 'ಒಂದಾನೊಂದು ಕಾಲದಲ್ಲಿ..' ಚಿತ್ರದ ಮೂಲಕ ಸಿನಿಮಾರಂಗಕ್ಕೆ ನಟನಾಗಿ ಕಾಲಿಡುವ ಶಂಕರ್, ಮರುವರ್ಷವೇ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಾರೆ. 

ತಮ್ಮ 26ನೇ ವಯಸ್ಸಿಗೆ 'ಮಿಂಚಿನ ಓಟ' ಸಿನಿಮಾ ಮಾಡುತ್ತಾರೆ. ಮೊದಲ ಯತ್ನದಲ್ಲೇ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಆ ಸಿನಿಮಾ ಪಡೆದುಕೊಳ್ಳುತ್ತದೆ. ಆನಂತರ ಅವರ ನಿರ್ದೇಶನದ 'ನೋಡಿ ಸ್ವಾಮಿ ನಾವಿರೋದೇ ಹೀಗೆ', 'ಆ್ಯಕ್ಸಿಡೆಂಟ್' ಸಿನಿಮಾಗಳಿಗೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ಒಟ್ಟು ಅವರು 9 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಡಾ. ರಾಜ್‌ಕುಮಾರ್ ಅವರಿಗೆ 'ಒಂದು ಮುತ್ತಿನ ಕಥೆ' ಸಿನಿಮಾ ನಿರ್ದೇಶಿಸಿದ್ದರು ಶಂಕರ್ ನಾಗ್‌. 

ಇದರ ಮಧ್ಯೆ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರು.ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಶಂಕರ್ ಮಿಂಚಿನ ವೇಗದಲ್ಲೇ ತಮ್ಮ ಬದುಕಿನ ಪಯಣ ಮುಗಿಸಿದ್ದು ಬೇಸರದ ಸಂಗತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.