ಚಿಕ್ಕಪ್ಪನನ್ನೇ ಮೀರಿಸಿ Bodybuilding ಮಾಡುತ್ತಿರುವ ಶೌರ್ಯ, ಮಿಸ್ಟರ್ ಇಂಡಿಯಾ ಆಗುವ ಲಕ್ಷಣ ಎದ್ದು ಕಾಣುತ್ತದೆ

 | 
Bji
ಅಬ್ಬಬ್ಬಾ.. ಈತ ಸ್ಯಾಂಡಲ್​ವುಡ್​ ಸ್ಟಾರ್​ ನಟನ ಮಗ. ಹೀಗೆ ಜಿಮ್​ನಲ್ಲಿ ಜಬರ್ದಸ್ತ್ ವರ್ಕೌಟ್ ಮಾಡಿ ಎಲ್ಲರ ಕಣ್ಮನ ಸೆಳೆದಿದ್ದಾನೆ. ಈತ ಯಾರು ಅಂತ ಗೆಸ್​ ಮಾಡಬಲ್ಲಿರಾ? ಈತ ಬೇರೆ ಯಾರು ಅಲ್ಲ ಚಿನ್ನಾರಿ ಮುತ್ತನ ಮುದ್ದಿನ ಮಗ ಶೌರ್ಯ. ಹೌದು, ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಅವರ ಮುದ್ದಿನ ಮಗ ಶೌರ್ಯ ಜಿಮ್​ನಲ್ಲಿ ಮಸ್ತ್ ವರ್ಕೌಟ್​ ಮಾಡಿದ್ದಾನೆ. ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಟ ವಿಜಯ್​ ರಾಘವೇಂದ್ರು ಕೂಡ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ, ಇತ್ತೀಚೆಗಷ್ಟೇ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ವಿಜಯ್ ಐಎಸ್​ಸಿ 12ನೇ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಈ ವಿಚಾರವನ್ನು ಹೇಳಿಕೊಂಡು ನಟ ಸಂಭ್ರಮಿಸಿದ್ದರು. ಇದೇ ಖುಷಿಯಲ್ಲಿ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿದ್ದರು.
ಬಹುಶಃ ಅಪ್ಪ-ಚಿಕ್ಕಪ್ಪನಂತೆ ಶೌರ್ಯ ಕೂಡ ಸಿನಿಮಾಗೆ ಬರ್ತಾರೆ ಅನಿಸುತ್ತದೆ. ಅದಕ್ಕೋ ಏನೋ? ಈ ತಯಾರಿ ಅನ್ನುವ ಕುತೂಹಲ ಕೂಡ ಶುರು ಆಗಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಹೇಳಿಕೊಂಡಿಲ್ಲ. ಸ್ವತಃ ವಿಜಯ್ ರಾಘವೇಂದ್ರ ಕೂಡ ಏನು ಬರೆದುಕೊಂಡಿಲ್ಲ. ಆದರೆ, ಶೌರ್ಯ ಜಿಮ್ ಅಲ್ಲಿ ಪೋಸ್ ಕೊಟ್ಟಿರೋ ಒಂದಷ್ಟು ಫೋಟೋಗಳು ಹೆಚ್ಚು ಕುತೂಹಲ ಮೂಡಿಸುತ್ತಿವೆ.
ಶೌರ್ಯ ರಾಘವೇಂದ್ರ ಜಿಮ್‌ ಅಲ್ಲಿ ಚೆನ್ನಾಗಿಯೇ ವರ್ಕೌಟ್ ಮಾಡ್ತಿದ್ದಾರೆ. ದೇಹ ನೋಡಿದ್ರೇನೆ ಅದು ತಿಳಿಯುತ್ತದೆ. ಇದೇ ರೀತಿ ಮಾಡ್ತಾ ಹೋದ್ರೆ, ಸಖತ್ ಆಗಿಯೇ ಆಗುತ್ತದೆ. ಒಳ್ಳೆ ಟ್ರೈನರ್ ಗೈಡ್ ಮಾಡ್ತಿದ್ದಾರೆ ಅನಿಸುತ್ತದೆ. ಬೈಸೆಪ್ಸ್ ನೋಡಿದ್ರೆ ಎಲ್ಲವೂ ಅರ್ಥ ಆಗುತ್ತದೆ.ಶೌರ್ಯ ರಾಘವೇಂದ್ರ ಇನ್ನೂ ಓದುತ್ತಿದ್ದಾರೆ. ಮಾತು ತುಂಬಾನೆ ಕಡಿಮೆ. 
ಅಮ್ಮ ಸ್ಪಂದನಾ ತರ ಅಂತಲೇ ಹೇಳಬಹುದು. ಸೈಲೆಂಟ್ ಆಗಿಯೇ ಇರ್ತಾರೆ. ಅಮ್ಮ ತೀರಿ ಹೋದಾಗಲೂ ಅಷ್ಟೆ. ಎಲ್ಲೂ ಮಾತ್ ಆಡಿದ್ದೇ ಇಲ್ಲ. ರಿಯಾಲಿಟಿ ಶೋಗಳಲ್ಲಿ ಬಂದಾಗಲೂ ಅಷ್ಟೆ. ಅಪ್ಪ ವಿಜಯ್ ರಾಘವೇಂದ್ರ ಅವರೇ ಮಾತನಾಡಿದ್ದಾರೆ ಹೊರತು ಇವರು ತುಂಬಾನೇ ಸೈಲೆಂಟ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub