ಮದುವೆ ಮಂಟಪದಲ್ಲಿ ಅದನ್ನು ಕೇಳಿದ ವಧು; ತಕ್ಷಣ ಮದುವೆ ಬೇಡ ಎಂದ ವರ
ವರದಕ್ಷಿಣೆ ನಿಷೇಧವಾದ್ರು ಎಷ್ಟೋ ಕಡೆಗಳಲ್ಲಿ ಇನ್ನೂ ಇದೆ. ಹೌದು ವರದಕ್ಷಿಣೆ ಕೊಡಲಿಲ್ಲ ಎಂದು ಮದುವೆ ದಿನವೇ ವರನೊಬ್ಬ ಮದುವೆ ಬೇಡ ಎಂದಿದ್ದಾನೆ. ಮದುವೆ ಬೇಡ ಎನ್ನಲು ಮೊದಲು ಕಾರಣ ಕೊಟ್ಟಿದ್ದು, ವರನ ಕಡೆಯವರಿಗೆ ಸಿಹಿತಿಂಡಿ ನೀಡಿಲ್ಲದ ಕಾರಣ ಹೇಳಿ ನನಗೆ ಈ ಮದುವೆ ಬೇಡ ಎಂದು ಗಲಾಟೆ ಮಾಡಿದ್ದಾನೆ.
ಅಷ್ಟಕ್ಕೂ ಇವೆಲ್ಲ ನಡೆದಿದ್ದು ದೂರದ ಯಾವುದೋ ಊರಿನಲ್ಲಲ್ಲ ಬದಲಿಗೆ ಕೊಡಗು ಜಿಲ್ಲೆಯಲ್ಲಿ ಸೋಮವಾರ ಪೇಟೆಯ ಜಾನಕಿ ಕನ್ವೆನ್ಶನ್ ಹಾಲ್‌ನಲ್ಲಿ ಘಟನೆ ನಡೆದಿದೆ. ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿ ಮತ್ತು ತುಮಕೂರು ಜಿಲ್ಲೆಯ ಯುವಕ ನೊಂದಿಗೆ ಮೇ 5ರಂದು ಮದುವೆ ನಿಶ್ಚಯಾಗಿವಾಗಿತ್ತು. ಆದರೆ ರಾತ್ರೋ ರಾತ್ರಿ ವರ ಉಂಗುರ ಕಳಚಿಕೊಟ್ಟು ಹೋಗಿದ್ದಾನೆ.
ವಿವಾಹಕ್ಕೂ ಮೊದಲು ವರನ ಕಡೆಯವರಿಂದ ವರದಕ್ಷಿಣೆ ಕೊಡುವಂತೆ ಒತ್ತಾಯವು ಕೇಳಿ ಬಂದಿತ್ತು ಎನ್ನಲಾಗಿದೆ. ಚಿನ್ನಾಭರಣ ಮತ್ತು ಬೆಂಗಳೂರಿನಲ್ಲಿ ಸೈಟ್ ಕೊಡುವಂತೆ ವರನ ಪೋಷಕರು ಒತ್ತಾಯಿಸಿದ್ದರು. ಮದುವೆ ದಿನ ಚಿನ್ನ ಕೊಟ್ಟಿಲ್ಲ ಎಂದು ಊಟದ ನೆಪ ಹೇಳಿ ಗಲಾಟೆ ತೆಅಗೆದು ಮದುವೆ ಬೇಡ ಎಂದು ಬಿಟ್ಟು ಹೋಗಿದ್ದಾರೆ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ.
ವರನ ಕಡೆಯವರು ಶನಿವಾರ ಸಂಜೆಯೇ ತುಮಕೂರಿನಿಂದ ಮಂಟಪಕ್ಕೆ ಆಗಮಿಸಿದ್ದರು. ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ, ಎಂದು ಸಣ್ಣ ಗಲಾಟೆ ತೆಗೆದಿದ್ದಾರೆ. ನಂತರ ಈ ಮದುವೆ ಗಲಾಟೆಯು ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ, ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.