ಚಾನಲ್ ಮುಖ್ಯಸ್ಥ 5 ಸ್ಟಾರ್ ಹೋಟೆಲ್ ಬುಕ್ ಮಾಡ್ತಿನಿ ಅಂದ; ಆಮೇಲೆ ಆಗಿದ್ದೇ ಬೇರೆ ಎಂದ ಕನ್ನಡ ನ ಟಿ

 | 
Gui

ನಟಿ ವರಲಕ್ಷ್ಮಿ ಅಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಆದರೆ ಮಾಣಿಕ್ಯ ಸಿನೆಮಾ ಹೀರೋಯಿನ್ ಅಂದ್ರೆ ನೆನಪಾಗಬಹುದು. ನೀಳಕಾಯದ ಚಲುವೆ ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಹಲವಾರು ಫ್ಯಾನ್ ಗಳನ್ನು ಹೊಂದಿದ್ದಾರೆ.ಇವರಿಗೆ ಕೆಲ ದಿನಗಳ ಹಿಂದಷ್ಟೇ  ಮದುವೆ ಇತ್ತೀಚೆಗೆ ನಿಶ್ಚಯವಾಗಿತ್ತು. 

ನಟ ಶರತ್‌ ಕುಮಾರ್ ಹಾಗೂ ನಟಿ ರಾಧಿಕಾ ಶರತ್‌ಕುಮಾರ್ ಪುತ್ರಿ ವರಲಕ್ಷ್ಮಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಮಿಂಚಿದ್ದರು. ಇನ್ನುಳಿದಂತೆ ತಮಿಳು, ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಆಕೆ ಮಿಂಚಿದ್ದಾರೆ.

ಇದೀಗ ಕೆಲ ವರ್ಷಗಳ ಹಿಂದೆ ತಮಗಾದ ಕಹಿ ಅನುಭವದ ಬಗ್ಗೆ ವರಲಕ್ಷ್ಮಿ ಶರತ್‌ಕುಮಾರ್ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಆ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದರೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಇದೇ ಕಾರಣಕ್ಕೆ ಸಾಕಷ್ಟು ಅವಕಾಶಗಳು ನನ್ನ ಕೈತಪ್ಪಿದವು ಎಂದು ಆಕೆ ಹೇಳಿಕೊಂಡಿದ್ದಾರೆ. ಸ್ಟಾರ್ ನಟನ ಮಗಳಾಗಿದ್ದರೂ ತಮ್ಮ ಸಿನಿಜರ್ನಿ ಅಷ್ಟು ಸುಲಭವಾಗಿರಲಿಲ್ಲ ಎಂದು ಆಕೆ ತಿಳಿಸಿದ್ದಾರೆ.

ಒಮ್ಮೆ ಒಂದು ದೊಡ್ಡ ಚಾನೆಲ್ ಹೆಡ್ ಕೆಲಸದ ವಿಚಾರವಾಗಿ ನಮ್ಮ ಮನೆಗೆ ಬಂದಿದ್ದರು. ಕೆಲಸ ಮುಗಿದ ಮೇಲೆ ಮತ್ತೆ ಭೇಟಿ ಆಗೋಣ ಎಂದರು. ನಾನು ಯಾಕೆ ಎಂದು ಕೇಳಿದೆ. ಬೇರೆ ವಿಚಾರಕ್ಕೆ ಎಂದರು. ಅಗಲೇ ನನಗೆ ಅರ್ಥವಾಯಿತು ಸುಮ್ಮನೆ ಎದ್ದು ಬಂದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.