ತಾಯಿಯ ಕೈಯಿಂದ ಜಾರಿದ ಮಗು; ಸಿಡಿದೆದ್ದ ನೆಟ್ಟಿಗರು

 | 
Je

ಟ್ರೋಲ್‌ಗಳು ಮತ್ತು ಸಾಮಾಜಿಕ ನಿಂದನೆಗಳು ಸಾಮಾನ್ಯ ವ್ಯಕ್ತಿಗಳ ಬದುಕಿಗೆ ಹೇಗೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ತಮಿಳುನಾಡಿನ ದುರಂತವೊಂದು ತಾಜಾ ಉದಾಹರಣೆ. ಚೆನ್ನೈನ ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್ ಒಂದರ ಬಾಲ್ಕನಿಯಲ್ಲಿ ಸಿಕ್ಕಿಕೊಂಡಿದ್ದ ಶಿಶುವೊಂದನ್ನು ಅಲ್ಲಿನ ಜನರು ಸಾಹಸಪಟ್ಟು ರಕ್ಷಿಸುವ ವಿಡಿಯೋ ಕಳೆದ ತಿಂಗಳು ವೈರಲ್ ಆಗಿತ್ತು.

 ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ಘಟನೆ ಕಾರಣದಿಂದ ತೀವ್ರ ಅವಮಾನ ಅನುಭವಿಸಿದ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ನಡೆದಿದೆ.ಮಗು ಜೀವಂತವಾಗಿ ಸಿಕ್ಕರೂ ಟ್ರೋಲ್‌ಗಳಿಂದ ವೇದನೆ ಅನುಭವಿಸಿದ ಅದರ 33 ವರ್ಷದ ಅಮ್ಮ, ಕೊಯಮತ್ತೂರಿನಲ್ಲಿನ ತನ್ನ ತಾಯಿ ಮನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಘಟನೆ ಬಳಿಕ ಮಹಿಳೆ ರಮ್ಯಾ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಆಕೆಯ ಕುಟುಂಬಸ್ಥರು ತಿಳಿಸಿರುವುದಾಗಿ ಕೊಯಮತ್ತೂರಿನ ಕರಾಮಡೈ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಏಳು ತಿಂಗಳ ಹೆಣ್ಣು ಮಗು ಆಕಸ್ಮಿಕವಾಗಿ ಬಾಲ್ಕನಿಯಿಂದ ಜಾರಿದ್ದು, ಅಲ್ಲಿನ ನಿವಾಸಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಆ ಮಗುವನ್ನು ಕಾಪಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದ ಜನರು, ನೆರೆಹೊರೆಯವರ ಸಾಹಸವನ್ನು ಕೊಂಡಾಡಿದ್ದರು. 

ಆದರೆ ಇದೇ ವೇಳೆ ಮಗುವಿನ ಹೆತ್ತ ತಾಯಿ ದೂಷಣೆಗೆ ಒಳಗಾಗಿದ್ದರು. ಆಕೆಯ ನಿರ್ಲಕ್ಷ್ಯದಿಂದ ಹೀಗಾಗಿದ್ದು ಎಂದು ಅನೇಕರು ಟೀಕಿಸಿದ್ದರು. ಟ್ರೋಲ್‌ಗಳು, ನಿಂದನೆಗಳನ್ನು ಗಮನಿಸಿದ್ದ ರಮ್ಯಾ, ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಪಾರ್ಟ್‌ಮೆಂಟ್ ವಾತಾವರಣದಿಂದ ನೆಮ್ಮದಿ ಪಡೆಯಲು ಕೊಯಮತ್ತೂರಿನ ತವರು ಮನೆಗೆ ತೆರಳಿದ್ದರು. ಆದರೆ ಅವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.