// custom css

ಬಿಗ್ ಬಾಸ್ ಕೊಟ್ಟ ಕಷ್ಟದ ಟಾಸ್ಕ್ ವಿನ್ ಆಗಿದ್ದು ಯಾರು ಗೊ.ತ್ತಾ, ಫಿದಾ ಆದ ಪ್ರೇಕ್ಷಕರು

 | 
ರ್

ಬಿಗ್‌ಬಾಸ್‌ನಲ್ಲಿ ಏನಾದರೂ ಒಂದು ಟಾಸ್ಕ್ ನಡೆಯುತ್ತಲೇ ಇರುತ್ತಿದ್ದು, ಕೆಲವೊಮ್ಮೆ ಚಾಲೆಂಜಿಂಗ್ ಅಂತ ಅನಿಸಿದರೆ, ಮತ್ತೆ ಕೆಲವೊಮ್ಮೆ ಮಸ್ತ್ ಮಜಾ ಕೊಡುತ್ತೆ. ಈಗಾಗಲೇ ದೊಡ್ಮನೆಯ ಆಟವನ್ನು ಸ್ಪರ್ಧಿಗಳು 50 ದಿನಗಳನ್ನು ಪೂರೈಸಿದ್ದರಿಂದ ಟಾಸ್ಕ್‌ನಲ್ಲಿ ಜೋಷ್‌ನಿಂದ ಭಾಗವಹಿಸುತ್ತಿದ್ದು, ಇದೀಗ ಬಿಗ್‌ಬಾಸ್ ಕೂಡ ಮನೆಯೊಳಗಿರುವ ಸ್ಪರ್ಧಿಗಳು ಟಫ್ ಆಗಿರುವ ಟಾಸ್ಕ್‌ಗಳನ್ನೇ ನೀಡುತ್ತಿದ್ದಾರೆ. 

ನಿನ್ನೆ ಬಿಗ್‌ಬಾಸ್ ಮನೆಯೊಳಗೆ ಬೆಳಗ್ಗೆನೇ ಕೇಕ್ ತಿಂದು ರಸಪ್ರಶ್ನೆ ಆಟದ ಟಾಸ್ಕ್ ಅನ್ನು ನೀಡಲಾಗಿದ್ದು, ಅದರಲ್ಲಿ ಮೈಕಲ್ ಕನ್ನಡದಲ್ಲಿಯೇ ಮಾತಾಡಿ ಬಿಗ್‌ಬಾಸ್ ಮನೆಯ ಸದಸ್ಯರನ್ನು ಹಾಗೂ ವೀಕ್ಷಕರ ಗಮನವನ್ನು ಸೆಳೆದಿದ್ದರು. ಆದರೆ, ಎರಡನೇ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿತ್ತು.ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಬಳಿಕ ಅವರ ಕಾಲಿಗೆ ಹಗ್ಗ ಕಟ್ಟಿ ಬಾಲ್ ಅನ್ನು ನಂಬರ್ ಇರುವ ಜಾಗಕ್ಕೆ ಹಾಕಲಾಗಿತ್ತು. 

ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಬಾಲ್‌ ಎತ್ತಿಕೊಂಡು ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಹಾಕುತ್ತಾರೋ ಆ ತಂಡ ಗೆದ್ದಂತೆ. ಆದರೆ ಈ ಟಾಸ್ಕ್ ಸ್ಪರ್ಧಿಗಳ ಜಿದ್ದಾಜಿದ್ದಿಗೆ ಕಾರಣವಾಗಿದೆ. 
ಟಾರ್ಚರ್ ಸೀಟ್ ಟಾಸ್ಕ್ ಮುಗಿದು ರಾಕ್ಷಸ ಗಂದರ್ವ ರ ಟಾಸ್ಕ್ ಇದೀಗ ಆರಂಭವಾಗಿದೆ. ಇನ್ನು ಟಾರ್ಚರ್ ಸೀಟ್ ಟಾಸ್ಕ್ಅಲ್ಲಿ  ಕಾರ್ತಿಕ ಅವರ ತಂಡ ಕುಶಿಯಲ್ಲಿತ್ತು. ಇದರರ್ಥ ವಿನಯ್ ಗೌಡ ಅವರ ತಂಡ ಸೋತಿದೆ ಎನ್ನಲಾಗಿದೆ.

ಇದೀಗ ಬಿಗ್‌ಬಾಸ್‌ ಒಂಬತ್ತನೇ ವಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು, ಒಂದು ತಂಡ ಗಂಧರ್ವರಾಗಿದ್ದರೆ, ಇನ್ನೊಂದು ತಂಡ ರಾಕ್ಷಸರಾಗಿದ್ದಾರೆ. ಈ ಕಾಲ್ಪನಿಕ ಬಿಗ್‌ಬಾಸ್‌ ಲೋಕಕ್ಕೆ ಕ್ಯಾಪ್ಟನ್ ಸ್ನೇಹಿತ್ ಒಡೆಯನಾಗಿದ್ದು, ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರೇ, ಇತ್ತ ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಈ ಚಟುವಟಿಕೆ ವೇಳೆ ವಿನಯ್‌ ಹಾಗೂ ಕಾರ್ತಿಕ್‌ ಮಧ್ಯೆ ತಳ್ಳಾಟ, ನೂಕಾಟ ನಡೆದಿದ್ದರೇ, ಇನ್ನೊಂದು ಕಡೆ ನಮ್ರತಾ ಹಾಗೂ ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು. 

ಫಿಸಿಕಲ್ ಅಟ್ಯಾಕ್ ಜಾಸ್ತಿಯಾದಾಗ, ಮಧ್ಯಪ್ರವೇಶಿಸಿದ ಬಿಗ್‌ಬಾಸ್‌ ಆಟವನ್ನ ನಿಲ್ಲಿಸಿ ಎಂದು ಘೋಷಿಸಿದರೂ, ಕಾರ್ತಿಕ್, ಸಂಗೀತಾ ಅವರನ್ನ ವಿನಯ್ ಕೆಣಕುತ್ತಲೇ ಇದ್ದರು. ಆಗ ಕಾರ್ತಿಕ್ ನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು? ಎಂದರು. ತನಿಷಾ  ಸಹ ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು ಎಂದು ಸ್ನೇಹಿತ್‌ ಹೇಳಿದರು. ಅದಕ್ಕೆ ಸ್ನೇಹಿತ್ ಇಬ್ಬರೂ ಅಗ್ರೆಸ್ಸಿವ್ ಆಗಿ ಆಡಿದ್ರಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.