ಪತ್ನಿಯ ಜೊತೆ ಮಾತನಾಡುತ್ತ ಪುಟ್ಟ ಮ ಗುವಿನ ಮೇಲೆ ಕಾರು ಚಲಾಯಿಸಿದ ಡ್ರೈವರ್, ಮುಂದೆನಾಯ್ತು ಗೊ.ತ್ತಾ

 | 
Hb

ಒಮ್ಮಮ್ಮೆ ಯಮ ಯಾವ ರೂಪದಲ್ಲಿ ಬರುತ್ತಾನೋ ತಿಳಿಯುವುದಿಲ್ಲ. ಹೌದು ಚಾಲಕನೊಬ್ಬನ ನಿರ್ಲಕ್ಷ್ಯದಿಂದ ಎರಡೂವರೆ ವರ್ಷದ ಅಮಾಯಕ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಮೃತ ಮಗುವಿನ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಗುವಿನ ಜೀವ ಕಿತ್ತುಕೊಂಡ ಇನ್ನೋವಾ ಕಾರು ಚಾಲಕ ವೃತ್ತಿಯಲ್ಲಿ ವೈದ್ಯ ಎನ್ನಲಾಗಿದ್ದು, ಜೀವ ನೀಡುವ ವೈದ್ಯನೇ ಅಮಾಯಕ ಮಗುವಿನ ಪಾಲಿಗೆ ಯಮನಾಗಿದ್ದಾನೆ ಎಂದು ಸ್ಥಳೀಯರು ಮಮ್ಮಲ‌ ಮರುಗುತ್ತಿದ್ದಾರೆ.

ಮುಂದೆ ಬಾಲಕ ನಿಂತಿದ್ದನ್ನ ನೋಡದೆ ಕಾರು ಹರಿಸಿದ ಚಾಲಕ ಅದೊಂದು ಸಣ್ಣ ಕುಟುಂಬ, ನಾವಿಬ್ಬರು ಒಂದು ನಮ್ಮಿಬ್ಬರಿಗೆ ಒಂದು ಅಂತ ಬಹಳ ಅನ್ಯೋನ್ಯವಾಗಿ ಒಬ್ಬನೇ ಮಗನನ್ನ ಮುದ್ದಾಡುತ್ತಾ.. ಆ ಮಗು ಮಾಡುವ ತುಂಟಾಟವನ್ನ ಸಂಭ್ರಮಿಸುತ್ತಾ ಇದ್ದ ಕುಟುಂಬಕ್ಕೆ ಉಸಿರು ಕಟ್ಟುವಂತಾಗಿದೆ. ಅಮ್ಮನ ಪ್ರೀತಿ, ತಂದೆಯ ಕೈ ಬೆರಳು ಹಿಡಿದು ನಡೆಯಬೇಕಿದ್ದ ಕಂದಮ್ಮ ಪೋಷಕರನ್ನ ಬಿಟ್ಟು ಯಮರಾಯ ಕರೆದ ಅಂತ ಹೋಗಿ ಬಿಟ್ಟಿದೆ.

ಎರಡೂವರೆ ವರ್ಷದ ಮಗುವಿನ ಮೇಲೆ ಹರಿದ ಕಾರು ಮೊಗದಲ್ಲಿ ದಿವ್ಯ ತೇಜಸ್ಸುನೊಂದಿಗೆ ಕಳೆ ಇರುವ ಈ ಮಗು ಹೆಸರು ಬಸವಚೇತನ. ಈ ಪುಟ್ಟ ಮಗುವಿಗೆ ಬರಿ ಎರಡೂವರೆ ವರ್ಷ. ಬೀದರ್ನ ಹಾರೊಗೇರಿ‌ ನಿವಾಸಿ ಸತೀಶ ಪಾಟೀಲ್ ಹಾಗೂ ಸಂಗೀತಾ ಎಂಬ ದಂಪತಿಗೆ ಜನಿಸಿರೋ ಮಗು. ನಮ್ಮ ಮಗು. ಇದುವೇ ನಮ್ಮ ಜೀವನದ ನಗು ಅಂತ ಬದುಕುತ್ತಿದ್ದ ಕುಟುಂಬ. ಈ ಕುಟುಂಬ ಈಗ, ಕ್ಷಣಕ್ಷಣಕ್ಕೂ ಆ ಯಮಧರ್ಮ ರಾಜನನ್ನ ಧರ್ಮ ಎಲ್ಲಿದೆ ನನ್ನಪ್ಪಾ ಅಂತ ಹಿಡಿಶಾಪ ಹಾಕುತ್ತಾ ಮಗುವನ್ನ ಕಳೆದುಕೊಂಡ ನೋವಿನಲ್ಲಿ ಕೊರಗುತ್ತಿದ್ದಾರೆ. ಕಾರಣ ಆಟವಾಡುತ್ತ ರಸ್ತೆ ಬದಿಯಲ್ಲಿ‌ ಬಂದಿದ್ದ ಮಗು ಮೇಲೆ ಇನ್ನೋವಾ ಕಾರೊಂದು ಹರಿದಿದೆ.

ಎರಡೂವರೆ ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು, ಮಗು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೀದರ್ ‌ನಗರದಲ್ಲಿ ನಡೆದಿದೆ. ಬೀದರ್ ‌ನಗರದ ಹಾರೋಗೆರಿ ಬಳಿ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಮುಂಭಾಗದಲ್ಲಿ‌ ಎರಡೂವರೆ ವರ್ಷದ ಬಾಲಕ ಬಸವಚೇತನ ಆಟವಾಡುತ್ತಾ ಮೈನ್ ರೋಡ್ ಬಳಿಗೆ ಬಂದು ಬಿಟ್ಟಿದೆ. ಇನ್ನೋವಾ ಕಾರು ಬರುತ್ತಿದ್ದ ವೇಳೆ ರಸ್ತೆ ದಾಟಲು ಮಗು ಯತ್ನಿಸಿದೆ. ಮಗು ರಸ್ತೆ ದಾಟಿದೆ ಎಂದು ತಿಳಿದು ಕಾರು ಚಾಲಕ ಮುಂದಕ್ಕೆ ಬಂದಿದ್ದಾನೆ.

ಕಾರು ಮುಂದಕ್ಕೆ ಬಂದಿದ್ದನ್ನ ನೋಡಿ ಬಾಲಕ ಅಲ್ಲೇ ಮಧ್ಯ ನಿಂತು ಬಿಟ್ಟಿದ್ದಾನೆ. ಮುಂದೆ ಬಾಲಕ ನಿಂತಿದ್ದನ್ನ ನೋಡದೆ ಇನ್ನೋವಾ ಚಾಲಕನ ಮೇಲೆ ಕಾರು ಹರಿಸಿ ಬಿಟ್ಟಿದ್ದಾನೆ. ಮಗುವಿನ ಮೇಲೆ ಕಾರು ಹರಿದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆಟವಾಡುತ್ತಾ ರಸ್ತೆಗೆ ಬಂದ ಮಗುವಿನ ತಪ್ಪೋ. ಇಲ್ಲ ಇನ್ನೋವಾ ಕಾರು ಚಾಲಕನ ತಪ್ಪೋ. ಇಲ್ಲ, ಕರುಣೆ ಇಲ್ಲದ ಆ ಯಮರಾಜನ ತಪ್ಪೋ ಗೊತ್ತಿಲ್ಲ. ಕುಟುಂಬ ಕಣ್ಣೀರಿನಲ್ಲಿ ಮಿಂದಿರೋದು ಮಾತ್ರ ಸುಳ್ಳಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.