ಹೋಟೆಲ್ ಊಟಕ್ಕೆ ಎಂದು ಮ್ಯಾನೇಜರ್ ಮನೆಗೆ ಕರೆದುಕೊಂಡು ಹೋಗಿ ಮ.ಜಾ ಮಾಡಿದ ಸಂಸ್ಥೆಯ ಮುಖ್ಯಸ್ಥ, ಸಂತ್ರಸ್ತೆಯ ದೂರು

 | 
Hs

ಯಾರು ಯಾರನ್ನೂ ನಂಬದಂತಹ ಸಂದರ್ಭಗಳು ಎದುರಾಗಿವೆ ಹೌದು ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್‌ 31ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ  ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಡಿಸೆಂಬರ್‌ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ ನಿವಾಸಿ ಸೈಯದ್ ಅಕ್ರಂ ಬಂಧಿತ ಆರೋಪಿ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.

ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31 ಡಿಸೆಂಬರ್‌ 2023 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ಊಟ ಮಾಡಲು ಹೋಟೆಲ್ ಗೆ ಹೋಗೋಣವೆಂದು ಹೇಳಿದ್ದಾರೆ. ಬಳಿಕ ತನ್ನ ಬೈಕಿನಲ್ಲಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಮಾಡಿದ್ದಾರೆ. 

ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುದಾಗಿ ಬೆದರಿಕೆಯನ್ನು ಹಾಕಿದ್ದಾರೆ.ಘಟನೆ ನಡೆದ ಎರಡು ದಿನಗಳ ಬಳಿಕ ಜನವರಿ 2ರಂದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಸೈಯದ್‌ ಅಕ್ರಂ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗಾಗಿಯೆ ಹೇಳಿದ್ದು ಯಾರನ್ನೂ ನಂಬಬೇಡಿ ನಂಬಿ ಕರೆದಲ್ಲಿ ಹೋಗಬೇಡಿ ಎಂದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.