ಗೆಳೆಯನೊಂದಿಗೆ ಆ ಕೆಲಸ ಮಾಡುವಂತೆ ಪತ್ನಿಗೆ ಗಂಡನ ಆದೇಶ, ಕೊನೆಗೆ ದಾರಿ ಇಲ್ಲದೆ ಹೆಂಡತಿ ಮಾಡಿದ್ದೇನು ಗೊತ್ತಾ

 | 
ರಪ

ಜಗತ್ತು ಬದಲಾಗಿದೆ ಭಾವನೆಗಳು ಕೂಡ ಸಂಬಂಧಗಳ ಮೌಲ್ಯಗಳು ಕೂಡ ಸ್ನೇಹಿತರ ಜೊತೆ ಖಾಸಗಿ ಕ್ಷಣ ಕಳೆಯಲು ಪತಿಯೇ ತನ್ನ ಪತ್ನಿಗೆ ಒತ್ತಾಯಿಸಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ತನ್ನ ಗೆಳೆಯರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಪತಿರಾಯನೊಬ್ಬ, ಕಟ್ಟಿಕೊಂಡ ಹೆಂಡತಿಗೆ ಒತ್ತಾಯಿಸಿದ್ದಾನೆ. 

ಗಂಡನ ಈ ವಿಚಿತ್ರ ಬೇಡಿಕೆಯಿಂದ ಶಾಕ್​ ಆದ ಪತ್ನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಮೂರು ಜನ ಸ್ನೇಹಿತರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಪತಿ ಒತ್ತಾಯಯಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಅಲ್ಲದೇ ಈ ಹಿಂದೆ ಗಂಡನ ವಾಟ್ಸಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗೂ ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಗಳಿದ್ದವು. 

ಇದನ್ನ ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಸದ್ಯ ಈ ಬಗ್ಗೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲವು ವರ್ಷಗಳ ಹಿಂದೆಯೇ ವಿವಾಹವಾಗಿದ್ದ ಈ ದಂಪತಿಗೆ 11 ವರ್ಷದ ಪುತ್ರನಿದ್ದಾನೆ. ಈ ನಡುವೆ ಈ ರೀತಿ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ನಿರಾಕರಿಸಿದ್ದ ಹಿನ್ನಲೆಯಲ್ಲಿ ಬೆದರಿಕೆ ಹಾಕಿದ್ದಲ್ಲದೇ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಅಲ್ಲದೇ ಬೇರೆ ಬೇರೆ ಲೈಂಗಿಕ ಸೆಕ್ಸ್​ ವರ್ಕರ್​ಗಳೊಂದಿಗೆ ಬೆಲೆ ಬಗ್ಗೆ ಮಾತನಾಡಿರುವ ಚಾಟಿಂಗ್ ಮಾಡಿರುವುದನ್ನು ಕಂಡು ನಾನು ಈ ಬಗ್ಗೆ ಗಂಡನನ್ನು ಕೇಳಿದ್ದೆ. ಆದ್ರೆ, ನನ್ನ ಗಂಟ ಗಲಾಟೆ ಮಾಡಿ ಅದು ನನ್ನ ಇಷ್ಟ. ಏನಾದರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿ ಹೊಡೆದಿದ್ದಾರೆ. 

ಹಾಗೇ ಇದನ್ನು ಪಬ್ಲಿಕ್ ಮಾಡಿದರೆ ನಿನಗೆ ನಿನ್ನ ಮಕ್ಕಳಿಗೆ ಯಾವುದೇ ನೀವನಾಂಶ ಕೊಡುವುದಿಲ್ಲ. ಆಗ ನೀನು ನಿನ್ನ ಮಕ್ಕಳು ಬೀದಿಗೆ ಬೀಳುತ್ತೀರಾ ಎಂದು ಹೆದರಿಸಿದ್ದಾರೆ. ಆದರೂ ಸಹ ಈ ಬಗ್ಗೆ ನಮ್ಮ ತಂದೆ-ತಾಯಿ ಹೇಳಿದ್ದೆ. ಅವರು ಎಲ್ಲರನ್ನೂ ಸೇರಿಸಿ ಬುದ್ಧಿವಾದ ಹೇಳಿದ್ದರು. ಆದರೂ ಅವರು ಮೊದಲಿನಂತೆ ಮತ್ತೆ ಹಳೇ ಚಾಳಿ ಮುಂದುವರೆಸಿ ನನ್ನ ಸರಿಯಾಗಿ ನೋಡಿಕೊಳ್ಳದೇ ಕಡೆಗಣಿಸಿದ್ದು, ಆಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ತಂದೆ-ತಾಯಿಯೊಂದಿಗೆ ವಾಸವಿದ್ದೆ.

ಆ ಸಮಯದಲ್ಲಿ ಮತ್ತೆ ಹಿರಿಯರೆಲ್ಲ ಸೇರಿ ರಾಜಿ ಪಂಚಾಯಿತಿ ಮಾಡಿಸಿದ್ದರು. ಬಳಿಕ ಬೆಂಗಳೂರಿನ ಆರ್​ಎಂ ಜೆಡ್​ ಲ್ಯಾಟಿಟ್ಯೂಡ್​ನಲ್ಲಿ ಪ್ಲ್ಯಾಟ್​ ಖರಿದೀಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಆದರೂ ಸಹ ಗಂಡ ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಆಗಾಗ ಮನೆಗೆ ಬಂದು ನೀನು ನನ್ನ ಇತರೆ ಸ್ನೇಹಿತರೊಂದಿಗೆ ಲೈಂಗಿಕ ಸಂಭೋಗ ಮಾಡುವಂತೆ ಹೇಳಿದ್ದ. 

ಇದಕ್ಕೆ ನಾನು ಒಪ್ಪದೇ ಇದ್ದಾಗ ನನ್ನೊಂದಿಗೆ ಗಲಾಟೆ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ನಿನ್ನ ಜೀವನಕ್ಕೆ ಯಾವುದೇ ಹಣಕಾಸಿನ ಸಹಾಯ ಮಾಡುವುದಿಲ್ಲ ಎಂದು ಹದರಿಸಿ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.