ನನ್ನನ್ನು ಗರ್ಭಿಣಿ ಮಾಡಿ ಕೈಕೊಟ್ಟ ಗಂಡ, ನನ್ನ ಮಗಳ ಮುಖ ಕೂಡ ನೋಡಿಲ್ಲ ಆತ; ವಾಣಿಶ್ರೀ

 | 
ಕ್
ನಟಿ ವಾಣಿಶ್ರೀ ಎಂದೊಡನೆ ಧಾ
ರವಾಹಿ ಪ್ರೀಯರಿಗೆ ತಟ್ಟಂತೆ ಮುಖವೊಂದು ಕಣ್ಮುಂದೆ ಬಂದಿರುತ್ತದೆ. ಹೌದು ನಟಿ ವಾಣಿಶ್ರೀ, ಕನ್ನಡದ ಹಲವು ಧಾರಾವಾಹಿಗಳು ಮತ್ತು ಸಿನಿಮಾದಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದಾರೆ. ವಾಣಿಶ್ರೀ ಅವರು ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಕಿರುತೆರೆ ವೀಕ್ಷಕರಿಗೆ ಇವರು ಚಿರಪರಿಚಿತರು. ವಾಣಿಶ್ರೀ ಅವರ ಗಂಡ ಯಾರು ಅನ್ನೋ ಕುತೂಹಲ ಹಲವರಿಲ್ಲಿತ್ತು. ಈ ಬಗ್ಗೆ ಮೊದಲ ಬಾರಿಗೆ ವಾಣಿಶ್ರೀ ಮನಬಿಚ್ಚಿ ಮಾತನಾಡಿದ್ದು, ಡಿವೋರ್ಸ್‌ ಆಗಿದ್ದೇಕೆ ಎಂಬುದನ್ನು ರಿವೀಲ್‌ ಮಾಡಿದ್ದಾರೆ.
ನಟಿ ವಾಣಿಶ್ರೀ 90ಕ್ಕೂ ಅಧಿಕ ಸಿನಿಮಾಗಳು ಮತ್ತು 300ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ʻಬಿಗ್‌ ಬಾಸ್‌ ಕನ್ನಡ ಸೀಸನ್‌ 4ರಲ್ಲಿʼ ವಾಣಿಶ್ರೀ ಸ್ಪರ್ಧಿಸಿದ್ದರು. ಒಂದು ಕಾಲದಲ್ಲಿ ಬಹಳ ಪೀಕ್‌ನಲ್ಲಿದ್ದ ಸಮಯದಲ್ಲೇ ವಾಣಿಶ್ರೀ ಮದುವೆಯಾದರು. ಮದುವೆಯಾದ ಕೆಲವೇ ವರ್ಷಕ್ಕೆ ಗಂಡನಿಂದ ಡಿವೋರ್ಸ್‌ ಪಡೆದಿದ್ದರು. ವಾಣಿಶ್ರೀ ಅವರ ಗಂಡ ಯಾರು? ಡಿವೋರ್ಸ್‌ ಪಡೆದಿದ್ದಾರಾ? ಹಾಗಾದರೆ ಯಾಕೆ? ಅನ್ನೋ ಪ್ರಶ್ನೆ ಹಲವರಲ್ಲಿತ್ತು. ಇಂತಹ ಪ್ರಶ್ನೆಗಳಿಗೆ ನಟಿ ವಾಣಿಶ್ರೀ ಇದೀಗ ಉತ್ತರಿಸಿದ್ದಾರೆ.
ವಾಣಿಶ್ರೀ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಆ ಸಮಯದಲ್ಲೇ ಮದುವೆ ಆಫರ್‌ ಬಂದಿತ್ತು. ಮದುವೆಯ ನಂತರ ಅಂದುಕೊಂಡಂತೆ ಗಂಡನಿಂದ ವಾಣಿಶ್ರೀ ಅವರಿಗೆ ಪ್ರೀತಿ ಸಿಕ್ಕಿಲ್ಲ, ಅದರ ಹಿಂದೆ ಇದ್ದ ಕಹಿ ಸತ್ಯವನ್ನು ಇದೀಗ ವಾಣಿಶ್ರೀ ಅವರು ರಿವೀಲ್‌ ಮಾಡಿದ್ದಾರೆ. ಪ್ರೀತಿ ವಿಶ್ವಾಸಕ್ಕೆ ಬೆಲೆ ಇಲ್ಲದಿರುವ ವ್ಯಕ್ತಿಯನ್ನು ಮದುವೆಯಾಗಿದ್ದೆ. ಅವರಿಗೆ ಜಾಮೀನು ರಹಿತ ವಾರೆಂಟ್‌ ಇತ್ತು. ನನ್ನನ್ನು ಮದುವೆಯಾಗುವುದಕ್ಕೂ ಎರಡು ವರ್ಷದ ಮೊದಲೇ ಅವರು ಇನ್ನೊಬ್ಬರನ್ನು ಮದುವೆಯಾಗಿದ್ದರು.
ಅದು ಅವರು ಓಡಿಹೋಗಿ ಮಂಗಳೂರು ಕುದ್ರೋಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಸರ್ಟಿಫಿಕೇಟ್‌ನಲ್ಲಿ ಇಬ್ಬರ ಸಹಿ ಮತ್ತು ಪಂಡಿತರ ಸಹಿ ಇದೆ. ಅದೆಲ್ಲಾ ಪ್ರೂಫ್‌ ನನ್ನ ಹತ್ತಿರ ಈಗಲೂ ಇದೆ ಎಂದು ಇತ್ತೀಚೆಗೆ ʻನ್ಯೂಸೋ ನ್ಯೂಸುʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಾಣಿಶ್ರೀ ಹೇಳಿದ್ದಾರೆ.ವಿಷಯ ಗೊತ್ತಾದಗ ಜಗಳವಾಡದೇ ಮನೆ ಬಿಟ್ಟು ಬಂದೆ. ನನ್ನ ಮಗಳು ಖುಷಿ ಆಗ ಐದು ತಿಂಗಳ ಮಗು. ಇಲ್ಲಿಯವರೆಗೂ ನನ್ನ ಮಗಳು ಖುಷಿಯನ್ನು ಅವರು ನೋಡಲೇ ಇಲ್ಲ. ಒಂದು ದಿನ ಖುಷಿಯನ್ನು ಸ್ಕೂಲ್‌ನಿಂದ ಕರೆದುಕೊಂಡು ಹೋಟೆಲ್‌ ಒಂದಕ್ಕೆ ಹೋಗಿದ್ದೆ. 
ಅಲ್ಲಿ ನಾನು ಅವರನ್ನು ನೋಡಿದೆ. ಅವರು ಅಲ್ಲಿ ಕೂತಿದ್ದರು. ಖುಷಿ ಅವಾಗ ಎರಡರಿಂದ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಅವಾಗ ನಿಮ್ಮಪ್ಪ ಅಲ್ಲಿ ಇದ್ದಾರೆ ಬೇಕಾದರೆ ಅವರನ್ನು ಹೋಗಿ ನೋಡಿಕೊಂಡು ಬಾ ಎಂದು ನಾನೇ ಅವಳನ್ನು ಕಳುಹಿಸಿದೆ. ಅವಳು ಹೋಗಿ ಅವರ ಅಪ್ಪನನ್ನು ನೋಡಿಕೊಂಡು ಬಂದಳು, ಆದ್ರೆ ಏನೂ ಕೂಡ ಹೇಳಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.