ಇಸ್ರೇಲ್ ಭಾರತೀಯರ ಮೇಲೂ ಬಾಂ.ಬ್ ದಾ.ಳಿ

ಯಹೂದಿ ದೇಶವಾದ ಇಸ್ರೇಲ್ ಮೇಲೆ ಪ್ಯಾಲಸ್ತೀನ್‌ನ ಹಮಾಸ್ ಉಗ್ರರು ನಡೆಸಿರುವ ದಾಳಿಯಲ್ಲಿ ಈವರೆಗೆ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಗಳು ಕೇಳಿ ಬರುತ್ತಿವೆ. ಇಸ್ರೇಲ್ ದೇಶದ ಪ್ರಜೆಗಳು ಹಾಗೂ ಹಮಾಸ್ ಇಸ್ಲಾಮಿಕ್ ಉಗ್ರರೂ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಈವರೆಗೆ ಮೃತಪಟ್ಟಿರುವ ಲೆಕ್ಕ ಸಿಗುತ್ತಿದೆ.
ಹಮಾಸ್ ಉಗ್ರರ ಈ ಕೃತ್ಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ರೋಶ ವ್ಯಕ್ತಪಡಿಸಿದ್ದು, ಸುದೀರ್ಘ ಹಾಗೂ ಕಠಿಣ ಯುದ್ಧಕ್ಕೆ ಹಮಾಸ್ ನಾಂದಿ ಹಾಡಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ದಿನವನ್ನು ಕರಾಳ ದಿನ ಎಂದು ಕರೆದಿರುವ ಬೆಂಜಮಿನ್ ನೆತನ್ಯಾಹು, ಈ ದಾಳಿಯನ್ನು ದಿಟ್ಟವಾಗಿ ಎದುರಿಸಲು ಹಾಗೂ ಹಮಾಸ್‌ನ ಸಾಮರ್ಥ್ಯವನ್ನು ನಾಶ ಮಾಡಲು ಇಸ್ರೇಲ್ ಸೇನೆ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದ ಹೇಳಿದ್ದಾರೆ.
ಇಸ್ರೇಲ್ ಜನಕ್ಕೆ ಕರಾಳ ದಿನಗಳನ್ನು ತಂದಿರುವ ಉಗ್ರರಿಗೆ ನಾವು ಕಹಿ ಪಾಠವನ್ನು ಕಲಿಸಲಿದ್ದೇವೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಪ್ಯಾಲಸ್ತೀನ್ ಉಗ್ರರು ಇಸ್ರೇಲ್ ಸೈನ್ಯದ ಹಲವು ಟ್ಯಾಂಕರ್ ಹಾಗೂ ಯುದ್ಧೋಪಕರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಡಜನ್‌ಗಟ್ಟಲೆ ಸೈನಿಕರೂ ಉಗ್ರರ ವಶದಲ್ಲಿ ಇದ್ದಾರೆ. ಉಗ್ರರು ಮನೆಗಳ ಒಳಗೆ ನುಗ್ಗಿ ಜನರಿಗೆ ಥಳಿಸುತ್ತಿದ್ದಾರೆ.
ಸಾಮೂಹಿಕವಾಗಿ ಹತ್ಯೆ ಮಾಡುತ್ತಿದ್ದಾರೆ. ನೂರಾರು ಮಂದಿ ಇಸ್ರೇಲ್ ದೇಶದ ಗಡಿ ಬೇಲಿಯನ್ನು ಕಿತ್ತೊಗೆದು ನುಗ್ಗುತ್ತಿದ್ದಾರೆ. ಹೀಗಾಗಿ, ಇಸ್ರೇಲ್ ದೇಶದೊಳಗೇ ಬೀದಿ ಬೀದಿಗಳಲ್ಲಿ ಉಗ್ರರು ಹಾಗೂ ಸೇನೆ ನಡುವೆ ಕಾಳಗ ನಡೆಯುತ್ತಿದೆ. ಈ ಮಧ್ಯೆ ಜೆರುಸಲೆಂಗೆ ಯಾತ್ರೆಗೆಂದು ತೆರಳಿರುವ ಮೇಘಾಲಯದ 27 ಮಂದಿ, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಸಂಘರ್ಷದ ನಡುವೆ ಸಿಕ್ಕಿಬಿದ್ದಿದ್ದಾರೆ. ಜೆರುಸಲೆಂಗೆ ಪವಿತ್ರ ಯಾತ್ರೆ ಕೈಗೊಂಡಿದ್ದ ಮೇಘಾಲಯದ 27 ನಾಗರಿಕರು, ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಉದ್ವಿಗ್ನತೆ ಕಾರಣದಿಂದ ಬೆಥ್ಲಹೆಮ್‌ನಲ್ಲಿ ಸಿಲುಕಿದ್ದಾರೆ.
ಅವರು ಸುರಕ್ಷಿತವಾಗಿ ಮನೆಗೆ ಬರುವಂತೆ ನೋಡಿಕೊಳ್ಳುವಂತೆ ನಾನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಸಂಪರ್ಕದಲ್ಲಿ ಇದ್ದೇನೆ ಎಂದು ಮೇಘಾಲಯ ಸಿಎಂ ಕಾನ್ರಾಡ್ ಕೆ ಸಂಗ್ಮಾ ತಿಳಿಸಿದ್ದಾರೆ.
ಗಾಜಾದಿಂದ ಹಮಾಸ್ ಉಗ್ರರ ದಾಳಿಯ ಬಳಿಕ ಇಸ್ರೇಲ್‌ನಲ್ಲಿರುವ ಭಾರತದ ಪ್ರಜೆಗಳಿಗೆ ಇಸ್ರೇಲ್ ರಾಯಭಾರ ಕಚೇರಿ ಎಚ್ಚರಿಕೆ ಸಂದೇಶ ನೀಡಿದೆ.
ಇಸ್ರೇಲ್‌ನಲ್ಲಿರುವ ಪ್ರಜೆಗಳು ಜಾಗರೂಕತೆಯಿಂದ ಇರಬೇಕು ಹಾಗೂ ಸುರಕ್ಷತೆಯ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಅದು ತಿಳಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.