ಈ‌ ನ ಟಿಯ ಹಿನ್ನಲೆ ಕೇಳಿ ತ ಲೆಕೆಡಿಸಿಕೊಂಡ ಕನ್ನಡಿಗರು;

 | 
Js

ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ನಿನಗಾಗಿ ಕೂಡಾ ಒಂದು. ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯ ಭೂಮಿಕೆಯಲ್ಲಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿನಗಾಗಿ ಧಾರಾವಾಹಿಯಲ್ಲಿ ನಾಯಕಿ ಸೂಪರ್ ಸ್ಟಾರ್ ರಚನಾ ಅಮ್ಮ ವಜ್ರೇಶ್ವರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪರಿಚಿತರಾಗಿದ್ದಾರೆ ಸೋನಿಯಾ ಪೊನ್ನಮ್ಮ.

ಗತ್ತಿನ ಮಹಿಳೆಯಾಗಿ ಸೋನಿಯಾ ಪೊನ್ನಮ್ಮ ನಿನಗಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಈ ವಜ್ರೇಶ್ವರಿ ಪಾತ್ರ ಖಳನಾಯಕಿಯಾಗಿ ಗುರುತಿಸಿಕೊಂಡಿದೆ. ತನ್ನ ಸ್ವಾರ್ಥಕ್ಕಾಗಿ ಸ್ವಂತ ಮಗಳನ್ನೇ ಬಳಸುತ್ತಿರುತ್ತಾಳೆ. ಸೂಪರ್ ಸ್ಟಾರ್ ಆಗಿರುವ ತನ್ನ ಮಗಳನ್ನು ಮುಂದಿಟ್ಟುಕೊಂಡು ಕೋಟಿಗಟ್ಟಲೇ ಹಣ ಗಳಿಸಬೇಕು ಎಂಬುದೇ ಆಕೆಯ ದೂರಲೋಚನೆ. 

ಮಗಳ ಮುಂದೆ ಒಳ್ಳೆಯವಳಂತೆ ನಟಿಸಿ, ಆಕೆಗೆ ಮೋಸ ಮಾಡುವ ಈಕೆಯ ಬುದ್ದಿ ಮಗಳಿಗೆ ಯಾವಾಗ ಅರಿವಾಗುತ್ತದೆ ಅನ್ನೋದನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ.ಮೂಲತಃ ಮಂಜಿನ ನಗರಿ ಮಡಿಕೇರಿಯ ಸೋನಿಯಾ ಪೊನ್ನಮ್ಮ ಅವರು ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಭರತನಾಟ್ಯ ಮಾತ್ರವಲ್ಲದೇ ಕಥಕ್ ನೃತ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಸೋನಿಯಾ ಅವರು ದೂರದರ್ಶನದ ಎ ಗ್ರೇಡ್ ಕಲಾವಿದೆಯೂ ಹೌದು. 

ಕೇವಲ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು.ನಿನಗಾಗಿ ಧಾರಾವಾಹಿಯಲ್ಲಿ ಖಳನಾಯಕಿ ವಜ್ರೇಶ್ವರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೋನಿಯಾ ಪೊನ್ನಮ್ಮಗೆ ಇದು ಎರಡನೇ ಧಾರಾವಾಹಿ. ಅರೇ! ಇವರನ್ನು ಇದಕ್ಕಿಂತ ಮೊದಲು ಬೇರೆ ಯಾವ ಧಾರಾವಾಹಿಯಲ್ಲಿ ನೋಡಲಿಲ್ಲವಲ್ಲ ಎಂದು ನೀವು ಊಹಿಸುತ್ತಿದ್ದರೆ ನಿಮ್ಮ ಊಹೆ ನಿಜ. ಯಾಕೆಂದರೆ ಆಕೆ ಮೊದಲ ಬಾರಿಗೆ ಬಣ್ಣ ಹಚ್ಚಿ ಬರೋಬ್ಬರಿ 22 ವರ್ಷ ಕಳೆದಿದೆ.

ಹೌದು, 22 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಕೊಡವ ಧಾರಾವಾಹಿಯೊಂದರಲ್ಲಿ ಈಕೆ ನಟಿಸಿದ್ದರು. ಇನ್ನು ಪತಿಯೊಡನೆ ದೂರದ ಸಿಂಗಾಪುರದಲ್ಲಿ ನೆಲೆಸಿರುವ ಈ ನಟಿ ವಜ್ರೇಶ್ವರಿ ಪಾತ್ರಕ್ಕೆ ಆಯ್ಕೆಯಾದುದು ಕೂಡಾ ರೋಚಕ ಸಂಗತಿ. ಡ್ಯಾನ್ಸ್ ಕಾರ್ಯಕ್ರಮದ ಸಲುವಾಗಿ ಸೋನಿಯಾ ಅವರು ಆಗಾಗ ಸಿಂಗಾಪುರದಿಂದ ಬೆಂಗಳೂರಿಗೆ ಬರುತ್ತಿದ್ದರಂತೆ.

ಆ ಸಮಯದಲ್ಲಿ ನಿನಗಾಗಿ ಧಾರಾವಾಹಿಯ ಆಡಿಶನ್‌ನಲ್ಲಿ ಭಾಗವಹಿಸುವಂತೆ ನಿರ್ಮಾಪಕರಿಂದ ಕರೆ ಬಂದಿತಂತೆ. ಆಡಿಶನ್‌ಗೆ ಹೋದ ಆಕೆ ವಜ್ರೇಶ್ಚರಿ ಪಾತ್ರಕ್ಕೆ ಆಯ್ಕೆ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.