ಮಾಧ್ಯಮಗಳ ಪ್ರಶ್ನೆಗೆ ಎದ್ದು ಬಿದ್ದು ಓಡಿ ಹೋದ ಲಾಯರ್;

 | 
ಗಾ

ನಿನ್ನೆಯಷ್ಟೇ ಹೊರದೇಶದಿಂದ ಭಾರತಕ್ಕೆ ಆಗಮಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಎಸ್ಐಟಿ ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣರನ್ನು  ಭೇಟಿಯಾಗುವ ಅನುಮತಿ ಸಿಕ್ಕ ಬಳಿಕ ಅವರ ವಕೀಲ ಜಿ ಅರುಣ್  ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಪ್ರಜ್ವಲ್ ಮಾಧ್ಯಮದವರಿಗೆ ಮೀಡಿಯ ಟ್ರಯಲ್  ನಡೆಸದಂತೆ ವಿನಂತಿ ಮಾಡಿಕೊಂಡಿದ್ದಾರೆ ಮತ್ತು ತನ್ನ ವಿರುದ್ಧ ನಕಾರಾತ್ಮಕ ಪ್ರಚಾರ ನಡೆಸದಂತೆ ಆಗ್ರಹಿಸಿದ್ದಾರೆ ಎಂದು ವಕೀಲ ಅರುಣ್ ಹೇಳಿದರು. ವಕೀಲನಾಗಿ ತನ್ನ ಕೆಲಸ ನ್ಯಾಯಾಲಯದಲ್ಲಿ ಮಾಡುವುದಾಗಿ ಹೇಳಿದ ಅರುಣ್, ಮಾಧ್ಯಮದವರೂ ತಮ್ಮ ಕೆಲಸ ಮಾಡಲಿ ಅದರೆ ಪ್ರಜ್ವಲ್ ಬಗ್ಗೆ ನೆಗೆಟಿವ್ ವಿಚಾರಗಳನ್ನು ವರದಿ ಮಾಡೋದು ಬೇಡ ಎಂದು ಅರುಣ್ ಹೇಳಿದ್ದಾರೆ .

ತಾನೀಗ ಎಸ್ಐಟಿ ಟೀಮಿಗೆ ಶರಣಾಗಿ ವಿಚಾರಣೆ ಮತ್ತು ತನಿಖೆ ಎದುರಿಸಲು ಸಿದ್ಧನಿದ್ದೇನೆ ಮತ್ತು ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಅಂತ ಅವರು ಹೇಳಿದ್ದಾರೆಂದು ವಕೀಲ ಅರುಣ್ ಹೇಳಿದರು. ಹೊಳೆನರಸೀಪುರದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಮತ್ತು ತಾನು ಅವರಿಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ತಿಳಿಸಿರುವುದಾಗಿ ಅರುಣ್ ಹೇಳಿದರು. ಪ್ರಜ್ವಲ್ ಗೆ ಜಾಮೀನು ಕೋರಿ ಸಲ್ಲಿಸಿದ ಮನವಿ ಕೋರ್ಟ್ ಮುಂದಿದೆ, ವಿಚಾರಣೆ ಇಷ್ಟರಲ್ಲೇ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ನಾವೂ ಕಾನೂನು ಹೋರಾಟ ಮಾಡುತ್ತೇವೆ‌. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತದೆ‌. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕುತ್ತೇವೆ. ಸದ್ಯಕ್ಕೆ ಬೇಲೆ ಅಪ್ಲಿಕೇಷನ್ ಪೆಂಡಿಂಗ್ ನಲ್ಲಿ ಇದೆ. ಅದರ ಬಗ್ಗೆ ಮಾತನಾಡುವುದಿಲ್ಲ. ತನಿಖೆಗೆ ಸಹಕಾರ ಕೊಡುತ್ತೇವೆ ಎಂದಿದ್ದಾರೆ.ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿ, ಹೌದು ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಭೇಟಿ ಮಾಡಿದ್ದೀನಿ. 

ಈ ವೇಳೆ ರಾತ್ರಿ ಬಂದಿದ್ದೀನಿ, ತನಿಖೆಗೆ ಸಹಕಾರ ನೀಡುತ್ತೇನೆ. ಸ್ವಯಂ ಪ್ರೇರಿತವಾಗಿಯೇ ಸೆರಂಡರ್ ಆಗಿದ್ದೀನಿ ಎಂದಿದ್ದಾರೆ. ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.