ದ್ವಾರಕೀಶ್ ವಾಸ ಮಾಡುವ ಭವ್ಯ ಬಂಗಲೆ ಇಡೀ ಕರ್ನಾಟಕದಲ್ಲಿ ಎಲ್ಲೂ ಇಲ್ಲ; ಇದು ಮನೆನಾ ಅರಮನೆ

 | 
Yeu

ಮದುವೆಯಾಗಿ ಮಕ್ಕಳಾದ ಮೇಲೆ ಇನ್ನೊಂದು ಮದುವೆ ಅಷ್ಟೊಂದು ಸುಲಭವಲ್ಲ. ಅದೂ ಪ್ರೀತಿಸಿ ಮದುವೆಯಾಗುವುದೆಂದರೆ ಅದೊಂದು ಅಪರೂಪದಲ್ಲೊಂದು ಪ್ರಕರಣವಾಗುವುದು ಖಚಿತ. ಅಂಥದ್ದೇ ಅಪರೂಪದ ವ್ಯಕ್ತಿಯಾಗಿದ್ದು ನಟ ದ್ವಾರಕೀಶ್​. ಸಿನಿಮಾ ನಟನಾಗಿ. ನಿರ್ಮಾಪಕನಾಗಿದ್ದುಕೊಂಡು ಸಿನಿಮಾ ಕತೆಯ ರೀತಿಯಲ್ಲೇ ತಮ್ಮ ಜೀವನವನ್ನು ಸಾಗಿಸಿದ್ದರು ಸ್ಯಾಂಡಲ್​ವುಡ್​ನ ಕುಳ್ಳ. ಆದರೆ ನನ್ನ ಬದುಕಲ್ಲಿ ಎಲ್ಲವೂ ಸುಖಾಂತ್ಯವಾಗಿ ಎಂದು ನಗುತ್ತಿದ್ದರು ಹಾಸ್ಯ ನಟ  ದ್ವಾರಕೀಶ್.

ನಟನಾಗಿ , ನಿರ್ಮಾಪಕನಾಗಿ , ನಿರ್ದೇಶಕನಾಗಿ  ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು. ಅದನ್ನು ಸುಖಾಂತ್ಯಗೊಳಿಸಲು ಪ್ರಯತ್ನಿಸಿದ್ದರು.

ವಯಸ್ಸಿನಲ್ಲಿ ದೊಡ್ಡವರೂ, ಸಂಬಂಧಿಯು ಆಗಿದ್ದ ಅಂಬುಜಾ ಅವರನ್ನು ಪ್ರೀತಿಸಿ 1967 ಏಪ್ರಿಲ್ 26ರಂದು ದ್ವಾರಕೀಶ್ ಕೈ ಹಿಡಿದಿದ್ದು, 5 ಗಂಡು ಮಕ್ಕಳ ತಂದೆಯಾದರು. ಇದಾಗಿ ಕೆಲವು ವರ್ಷಗಳ ಬಳಿಕ ಅಕ್ಕನ ಮಗಳಿಗೆ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಶೈಲಜಾ ಅವರು ದ್ವಾರಕೀಶ್‌ ಬಳಿ ಬಂದಿದ್ದರು. ಅವರನ್ನು ಮದುವೆಯಾಗುವ ತೀರ್ಮಾನ ಮಾಡಿದರು.

ಹೆಂಡತಿಯ ಒಪ್ಪಿಗೆ ಪಡೆದರು. ಎಲ್ಲರೂ ಶುಭ ಹಾರೈಸಿದರು. ಬಳಿಕ ಎಲ್ಲರ ಸಮ್ಮುಖದಲ್ಲೂ ಶೈಲಜಾ ಅವರನ್ನು ಮದುವೆಯಾಗಿರುವುದಾಗಿ ದ್ವಾರಕೀಶ್ ನೆನಪಿಸಿಕೊಂಡಿದ್ದರು. ದ್ವಾರಕೀಶ್ ಅವರಿಗೆ ಎರಡನೇ ಮದುವೆಯಾದಾಗ ಅವರಿಗೆ 51 ವರ್ಷ. ಮೊದಲ ಹೆಂಡತಿಯ ಒಪ್ಪಿಗೆ ಪಡೆದು ಅವರು ಎರಡನೇ ಮದುವೆಯಾದರೂ ಇದು ಆಗ ಸಾಕಷ್ಟು ವಿವಾದ ಎಬ್ಬಿಸಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.