ಟೀಚರ್ ಕೆಲಸಕ್ಕೆಂದು ಯುವತಿಯನ್ನು ಕರೆದುಕೊಂಡು ಹೋಗಿ ದಿನನಿತ್ಯ ಬಲಾತ್ಕಾರ ಮಾಡುತ್ತಿದ್ದ ಮೌಲ್ವಿ

 | 
ರಕ

ಇತ್ತಿಚಿಗೆ ಎಲ್ಲರಂದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಆದರೂ ಕೂಡಾ ನಮ್ಮ ಜನ ಇನ್ನು ಎಚ್ಚೆತ್ತು ಕೊಂಡಿಲ್ಲ ಹೌದು ಇದೀಗ ಟೀಚರ್ ಕೆಲಸಕ್ಕೆಂದು ಯುವತಿಯೊಬ್ಬಳನ್ನು ನಂಬಿಸಿ ಮಧ್ಯಪ್ರದೇಶಕ್ಕೆ  ಕರೆದೊಯ್ದು ನಿರಂತರ ಅತ್ಯಾಚಾರ ಎಸಗಿದ್ದ ಮೌಲ್ವಿಯೊಬ್ಬನನ್ನು ಹುಬ್ಬಳ್ಳಿ ಪೊಲೀಸರು  ಖಂಡ್ವಾ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗುಲಾಮ ಜಿಲಾನಿ ಅಜಹರಿ ಎಂದು ಗುರುತಿಸಲಾಗಿದೆ. ಈತ ದೇಶದ ಖ್ಯಾತ ಮೌಲ್ವಿ ಎನ್ನಲಾಗಿದೆ. ಆರೋಪಿಯನ್ನು ಮಧ್ಯಪ್ರದೇಶದ ಖಂಡ್ವಾ ಎಂಬಲ್ಲಿ ಬಂಧಿಸಲಾಗಿದ್ದು, ಪೊಲೀಸರು ಹುಬ್ಬಳ್ಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಹೆಣ್ಣಿಗೆ ಮೋಸಮಾಡಿ ಬಳಸಿಕೊಂಡು ನೆಮ್ಮದಿಯಾಗಿ ಇನ್ನೊಬ್ಬಳ ಜೊತೆ ಇದ್ದ ಮಲ್ವಿ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿ ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 

ಅಲ್ಲದೇ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ಹುಬ್ಬಳ್ಳಿಯಲ್ಲಿರುವ ಯುವತಿಯ ಮನೆಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಯಾವ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗಪಡಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಿ ಯುವತಿ ಕಣ್ಣೀರಿಟ್ಟಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.