ಹಿಂದೂ ಹೆಣ್ಣುಮಗಳು ಸೌಜನ್ಯ ದೌರ್ಜನ್ಯಕ್ಕೆ ಮೌನವಾಗಿದ್ದ ಮಾಧ್ಯಮಗಳು, ಇವತ್ತು ಉಡುಪಿ ಘಟನೆಗೆ ಯಾಕಿಷ್ಟು ಪ್ರಚಾರ

 | 
Bd

ಉಡುಪಿ: ಸ್ನೇಹಿತರೆ ನಮಸ್ಕಾರ, ಮೊನ್ನೆಯಷ್ಟೆ ಸೌಜನ್ಯ ಕೇಸ್ ವಿಚಾರ ಮತ್ತೆ ಹೊರಬಂದಿತ್ತು. ನಿರ್ದೋಷಿ ಸಂತೋಷ್ ರಾವ್ ಅವರನ್ನು ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿಟ್ಟು ಆರೋಪಿ ಎಂದು ಫಿಕ್ಸ್ ಮಾಡಲಾಗಿತ್ತು. 

ಆದರೆ ತುಳುನಾಡಿನ ಹಿಂದೂ ಹೋರಾಟಗಾರ ತಿಮರೋಡಿ ಅವರ ಹೋರಾಟದ ಮೂಲಕ ಸಂತೋಷ್ ರಾವ ಅವರು ನಿರ್ದೋಷಿ ಎಂದು CBI ತೀರ್ಪು ದಾಖಲೆ ಒದಗಿಸಿದ ಬಳಿಕ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಬಿಡುಗಡೆ ಮಾಡಿದೆ. ಆದರೆ ಸಂತೋಷ್ ರಾವ್ ಬಿಡುಗಡೆಯಾದ ಬಳಿಕ ಇಡೀ ಕರುನಾಡಿನಲ್ಲಿ ಸೌಜನ್ಯ ಅವರನ್ನು ಕೊ ಲೆ ಮಾಡಿದ್ದು ಯಾರು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. 

ರಾಜ್ಯದ ಮಾಧ್ಯಮ ಹಾಗೂ ಕೆಲ ಫೇಸ್ ಬುಕ್ ಪೇಜ್ ಗಳು ಈ ಬಗ್ಗೆ ಮೌನವಾಗಿತ್ತು. ಕೇವಲ ತಿಮರೋಡಿ ಹಾಗೂ ಸೌಜನ್ಯ ಕುಟುಂಬಸ್ಥರು ಮಾತ್ರ ಈ ಕೊ ಲೆ ಗೆ ಹೋರಾಟ ನಡೆಸಿದರು. ಇವರ ಜೊತೆಗೆ ಕೆಲ ಯೂಟ್ಯೂಬ್ ವಾಹಿನಿಗಳು ಕೂಡ ಬೆಂಬಲಕ್ಕೆ ನಿಂತಿತ್ತು. ಆದರೂ ಕೂಡ ಕನ್ನಡದ ಮಾಧ್ಯಮ ಹಾಗೂ ಕೆಲ ಹಿಂದೂ ಪೇಸ್ ಬುಕ್ ಪೇಜ್ ಗಳು ಮಾತ್ರ ಮೌನವಾಗಿ ನೋಡುತ್ತಿತ್ತು ಯಾಕೆ? 

ಸೌಜನ್ಯ ಹಿಂದೂ ಹೆಣ್ಣುಮಗಳು ಅಲ್ವಾ? ಆಕೆ ಕೂಡ ಹೆಣ್ಣು ಅಲ್ವಾ? ಸೌಜನ್ಯ ಈ ನಾಡಿನ ಹೆಣ್ಣುಮಗಳು ಅಲ್ವಾ? ಯಾಕೆ ಈ ವಿಚಾರಕ್ಕೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಮಾಧ್ಯಮಗಳು ಮೌನ? ಕೋರ್ಟ್ ತಡೆಯಾಜ್ಞೆ ನೀಡುವ ಮುನ್ನ ಸೌಜನ್ಯ ವಿಚಾರ ಯಾಕೆ ಮಾಧ್ಯಮ ಪ್ರಸಾರ ಮಾಡಿಲ್ಲ. 

ಇವತ್ತು ಉಡುಪಿಯಲ್ಲಿ ಹಿಂದೂ ಹೆಣ್ಣುಮಕ್ಕಳ ಶೌಚಾಲಯದ ವಿಡಿಯೋ ವೈರಲ್ ಆಗಿದ್ದಕ್ಕೆ, ಇಡೀ ಕರುನಾಡಿನ ಮಾದ್ಯಮಗಳು ದೊಡ್ಡ ಮಟ್ಟದಲ್ಲಿ ಪ್ರಸಾರ ಮಾಡುತ್ತಿದೆ. ಜೊತೆಗೆ ಹಿಂದೂ ಪೇಸ್ ಬುಕ್ ಪೇಜ್ ಗಳು ಕೂಡ ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಉಡುಪಿಯಲಿ ಆದ ವಿಚಾರ, ಪ್ರಸಾರ ಮಾಡಬಾರದು ಎಂಬುವುದು ನಮ್ಮ ಉದ್ದೇಶ ಅಲ್ಲ. ಆದರೆ ಮುಗ್ಧ ಹೆಣ್ಣುಮಗಳು ಸೌಜನ್ಯ ವಿಚಾರದಲ್ಲಿ ಯಾಕೆ ಈ ಹಿಂದುತ್ವದ ಮುಖಂಡರು ಬಂದಿಲ್ಲ? ಸೌಜನ್ಯ ಹಿಂದೂ ಅಲ್ವಾ? ಹಾಗಾದರೆ ಇಲ್ಲಿ ಹಿಂದೂ ಮುಸ್ಲಿಂ ವಿಚಾರವಲ್ಲ. ಒಟ್ಟಾರೆಯಾಗಿ ತಮ್ಮ ತಮ್ಮ ಅಧಿಕಾರ ಹಾಗೂ ಧರ್ಮದ ಮೂಲಕ ಜನರ ನಡುವೆ ಜಗಳ ತಂದು ತಮಾಷೆ ನೋಡುವುದು ನಡೆಯುತ್ತಿದೆಯಾ? (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.