ಶ್ರೀರಸ್ತು ಶುಭಮಸ್ತು ಜೋಡಿಯ ಮದುವೆ ವಾರ್ಷಿಕೋತ್ಸವನ್ನು ಆಚರಿಸಿದ ಕ್ಷಣ ನೋಡಿ ಫಿದಾ ಆದ ಜನ

 | 
Hu

ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡುವವರಿಗೆ ನಟಿ ದೀಪಾ ಕಟ್ಟೆ ಅಂದ್ರೆ ಯಾರು ಅಂತ ಗೊತ್ತಿರತ್ತೆ.ಇದೀಗ ಅವರು ಇಂದು ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅವರು ಈ ಸುಂದರ ಸಮಯ ಕಳೆಯುತ್ತಿದ್ದಾರೆ. ದೀಪಾ ಅವರು ರಕ್ಷಿತ್‌ ಉಪಾಧ್ಯಾಯ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ದೀಪಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೋರ್ಸ್‌ ಮಾಡುವಾಗ ದೀಪಾಗೆ ರಕ್ಷಿತ್‌ ಎನ್ನುವವರ ಪರಿಚಯ ಆಗಿತ್ತು. ಆಮೇಲೆ ಅವರಿಬ್ಬರಿಗೂ ಒಂದೇ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಈ ಜೋಡಿ ಒಟ್ಟಿಗೆ 5 ವರ್ಷ ಕೆಲಸ ಮಾಡಿತ್ತು. ಆಮೇಲೆ ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಸಿಕ್ಕಿ, ಅಲ್ಲಿ ಬ್ಯುಸಿಯಾದರು. ಒಟ್ಟೂ 6 ವರ್ಷಗಳ ಪರಿಚಯ ಇದ್ದ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ದೀಪಾ ಕಟ್ಟೆ ಅವರು ಶಿವಮೊಗ್ಗದವರು. ರಕ್ಷಿತ್ ಅವರು ಉಜಿರೆಯವರು. ಉಜಿರೆಯಲ್ಲಿ ಈ ಮದುವೆ ನಡೆದಿದೆ. ಕುಟುಂಬದವರೇ ಖುಷಿಯಿಂದ ಮದುವೆ ಮಾಡಿದ್ದರು. ಮಿಥುನರಾಶಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ದೀಪಾ ಕಟ್ಟೆ ಅವರು ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅವರ ಮಗಳ ಪಾತ್ರದಲ್ಲಿ ದೀಪಾ ನಟಿಸುತ್ತಿದ್ದಾರೆ. ಕೊಂಚ ನೆಗೆಟಿವ್ ಶೇಡ್ ಇರುವ ಪಾತ್ರ ಇದಾಗಿದೆ.

ಮಲೆನಾಡ ಬೆಡಗಿ ದೀಪಾ ಕಟ್ಟೆ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸೀರಿಯಲ್ ನಲ್ಲಿ ನಟಿಸುವ ಆಸೆ ಹೊಂದಿದ್ದಾರೆ.ನಟಿಯ ವೈವಾಹಿಕ ಜೀವನ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.