ಅಂಬುಲೆನ್ಸ್ ಸೈರನ್ ಹಾಕಿಕೊಂಡು ಒಳಗಡೆ ನರ್ಸ್ ಹಾಗೂ ಚಾಲಕ ಮಾ ಡಿದ್ದೇನು ಗೊ.ತ್ತಾ

 | 
ಕಿ

ಈ ಘಟನೆ ಕೇಳಿದ ಮೇಲೆ ನೀವು ನಿಜಕ್ಕೂ ನೀವು ಇದು ಕಲಿಯುಗ ಅನ್ನದಿದ್ರೆ ಹೇಳಿ. ಹೌದು ಈ ಘಟನೆಗೆ ವಿವರವನ್ನು ಕೇಳಿದ ಮೇಲೆ ನಿಮಗೆ ಪ್ರಪಂಚದಲ್ಲಿ ಎಂತೆಂಥ ಜನರು ಇರುತ್ತಾರೆ ಎಂದು ಅನಿಸದೆ ಇರುವುದಿಲ್ಲ.

ಹೌದು ಆಂಬುಲೆನ್ಸ್ ಚಾಲಕರು ವಾಹನದಲ್ಲಿ ರೋಗಿ ಇಲ್ಲದಿದ್ದರೂ ಕೂಡ ಈ ತುರ್ತು ಸೈರನ್ ಆನ್ ಮಾಡಿ ಟ್ರಾಫಿಕ್ ಕ್ಲಿಯರೆನ್ಸ್ ಪಡೆಯುವ ಸಲುವಾಗಿ ಈ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಹಲವು ಬಾರಿ ದೂರು ಬಂದಿರುವ ವಿಷಯ. ಇಲ್ಲೊಬ್ಬ ಚಾಲಕ ಈ ರೀತಿ ಮಾಡಿದ್ದಕ್ಕಾಗಿ ಸರಿಯಾದ ಶಿ’ಕ್ಷೆ ಪಟ್ಟಿದ್ದಾನೆ.

ಹೈದರಾಬಾದ್ ನ ಬಶೀರಬಾದ್ ಟ್ರಾಫಿಕ್ ಪೊಲೀಸ್ ಆಂಬ್ಯುಲೆನ್ಸ್ ಚಾಲಕನೊಬ್ಬ ರೋಗಿ ಇದ್ದಿದ್ದರೂ ಕೂಡ ಸೈರನ್ ಆನ್ ಮಾಡಿಕೊಂಡು ಟ್ರಾಫಿಕ್ ಕ್ಲಿಯರೆನ್ಸ್ ಪಡೆದು ಬಳಿಕ ರಸ್ತೆ ಬಳಿ ಬಜ್ಜಿ ತಿಂದು ಜ್ಯೂಸ್ ಕುಡಿತಿದ್ದನ್ನು ಕಂಡು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವಿವರ ನೋಡುವುದಾದರೆ ಬಶೀರಾಬಾದ್ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಗಾಡಿ ಒಳಗಡೆ ಇಬ್ಬರು ನರ್ಸ್ ಗಳನ್ನು ಕೂರಿಸಿಕೊಂಡು ರೋಗಿ ಇಲ್ಲದಿದ್ದರೂ ತುರ್ತು ಸೈರಲ್ ಆನ್ ಮಾಡಿ ಬಂದಿದ್ದಾನೆ.

ಆಂಬುಲೆನ್ಸ್ ನೋಡಿದ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಆತ ಟ್ರಾಫಿಕ್ ಬೂತ್ ಇದ್ದ 100ಮೀ. ಮುಂದೆ ಬಂದು ರಸ್ತೆಯಲ್ಲಿ ಆಂಬುಲೆನ್ಸ್ ನಿಲ್ಲಿಸಿ ಅಂಗಡಿ ಒಂದರಲ್ಲಿ ನರ್ಸ್ ಗಳು ಹಾಗೂ ಇನ್ನಿತರ ಜೊತೆ ಬಜ್ಜಿ ತಿಂದು ಜ್ಯೂಸ್ ಕುಡಿಯುತ್ತಾ ನಿಂತಿದ್ದಾನೆ. ಅದನ್ನು ಗಮನಿಸಿದ ಆ ಟ್ರಾಫಿಕ್ ಪೊಲೀಸ್ ಬಂದು ಒಳಗೆ ರೋಗಿ ಇದ್ದಾರಾ ಇಲ್ಲವಾ ಎಂದು ಪರೀಕ್ಷಿಸಿದ್ದಾರೆ ಮತ್ತು ರೋಗಿ ಇಲ್ಲದಿದ್ದರೂ ಸೈರನ್ ಆನ್ ಮಾಡಿಕೊಂಡು ಬಂದಿದ್ದಕ್ಕಾಗಿ ಚಾಲಕನಿಗೆ ಸರಿಯಾಗಿ ಪ್ರಶ್ನಿಸಿದ್ದಾರೆ.

ತಡ ಬಡಾಯಿಸಿದ ಚಾಲಕ ತಮ್ಮ ನರ್ಸ್ ಗೆ ಆರೋಗ್ಯ ಸರಿ ಇಲ್ಲ ಎಂದು ಸಮಜಾಯಿಸಿಕೊಡಲು ಪ್ರಯತ್ನಪಟ್ಟಿದ್ದಾನೆ. ಆಂಬುಲೆನ್ಸ್ ಎಮರ್ಜೆನ್ಸಿ ಸೈರನ್ ಅನ್ನು ಈ ರೀತಿ ದುಬಾರಿಪಯೋಗ ಪಡಿಸಿಕೊಳ್ಳುತ್ತಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡು ಮೋಟಾರ್ ವಾಹನ ಕಾಯ್ದೆ ನಿಯಮ ಉಲ್ಲಂಘನೆ ಮಾಡಿಕೊಂಡಿದ್ದಕ್ಕಾಗಿ 1000ರೂ. ದಂಡ ವಸೂಲಿ ಮಾಡಿದ್ದಾರೆ. 

ಟ್ರಾಫಿಕ್ ಪೋಲಿಸ್ ಬಾಡಿ ಕ್ಯಾಮರಾದಲ್ಲಿ ಆತ ಸೈರನ್ ಉಪಯೋಗಿಸಿಕೊಂಡು ಬಂದಿರುವುದು ಹಾಗೂ ರಸ್ತೆ ಬಳಿ ನಿಲ್ಲಿಸಿ ಸ್ನಾಕ್ಸ್ ತಿನ್ನುತ್ತಿರುವುದು ಸೆರೆಯಾಗಿತ್ತು.
2 ನಿಮಿಷದ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿದೆ. ಘಟನೆಯ ಗಂಭೀರತೆಯನ್ನು ಅರಿತ ತೆಲಂಗಾಣ DGP ಅಂಜನಿ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಈ ರೀತಿ ವಿನಂತಿಸಿಕೊಂಡಿದ್ದಾರೆ. 

ಆಂಬ್ಯುಲೆನ್ಸ್ ಸೇವೆಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮನವಿ ಮಾಡುತ್ತಾರೆ. ನಿಜವಾದ ತುರ್ತುಸ್ಥಿತಿಗಳಿಗೆ ಮಾತ್ರ ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್‌ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.