ಗಂಡೂ ಹೆಣ್ಣೂ ಎಂದು ಪರೀಕ್ಷೆ ಮಾಡಿದ ಅಧಿಕಾರಿಗಳು, ನಂತರ ಏನಾಯಿತು ಗೊ.ತ್ತಾ

 | 
B
ಬದುಕು ಅಂದುಕೊಂಡಂತೆ ನಡೆಯದಿದ್ದಾಗ ನಾವೆಲ್ಲ ಸೋತು ಶರಣಾಗಿ ದುಃಖ ಪಡುತ್ತೇವೆ. ನೋವಿನಿಂದ ಕಂಗಾಲಾಗಿ ಬೇಸರ ಪಡುತ್ತೇವೆ. ನಮ್ಮಷ್ಟು ಕಷ್ಟ ಯಾರಿಗೂ ಇಲ್ಲ ಎಂದು ದೇವರನ್ನು ಬೈಯುತ್ತೇವೆ. ನಮ್ಮ ಕೆಟ್ಟ ಅದೃಷ್ಟವನ್ನು ಹಳಿಯುತ್ತೇವೆ. ಆದರೆ ಇಲ್ಲೊಬ್ಬ ಸಾಧಕಿ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಹೌದು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾವಣೆಗೊಂಡು ಸಾಧನೆ ಮಾಡಿದ ಕಥೆಯಿದು.
ಪ್ರಿತಿಕಾ ಯಶಿನಿ ಇವರು ಮೂಲತಃ ತಮಿಳುನಾಡಿನ ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಡ್ರೈವರ್ ಆಗಿ ಕೆಲಸ ಮಾಡಿದ್ರೆ ಇವರ ತಾಯಿ ಟೈಲರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಆರಕ್ಕೇರದ ಮೂರಕ್ಕಿಳಿಯದ ಕುಟುಂಬದಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದರು. ಬಾಲ್ಯದಲ್ಲಿ ಗಂಡಾಗಿದ್ದ ಇವರ ಹೆಸರು ಪ್ರದೀಪ್ ಕುಮಾರ್ ಎಂದಾಗಿತ್ತು. ಬಾಲ್ಯದಲ್ಲಿ ಹೇಳಿಕೊಳ್ಳುವಂತಹ ಅಷ್ಟೇನೂ ಬದಲಾವಣೆಗಳಿರಲಿಲ್ಲ. ಆದರೆ ಐದನೇ ತರಗತಿ ಓದುವಾಗ ಒಂದಿಷ್ಟು ಬದಲಾವಣೆಗಳು ಅವರಿಗೆ ಅರಿವಾಗ ತೊಡಗಿತು.
ಆಗ ಇವರಿಗೆ ಹೆಣ್ಣು ಮಕ್ಕಳ ಬಟ್ಟೆ , ಮೇಕಪ್ ಮೇಲೆ ಆಸಕ್ತಿ ಮೂಡ ತೊಡಗಿತಂತೆ ಅದರಿಂದಾಗಿ ಇವರ ಸ್ನೇಹಿತರು, ಹಾಗೂ ಸುತ್ತಮುತ್ತಲಿನವರು ಇವರನ್ನು ಕಂಡು ನಗುತ್ತಿದ್ದರಂತೆ. ಟೀಚರ್ಸ್ ಇವರನ್ನ ಟೀಸ್ ಮಾಡುತ್ತಿದ್ದರಂತೆ . ಇದರಿಂದ ಏನನ್ನೂ ಅರಿಯದ ಇವರ ತಂದೆತಾಯಿಗಳು ಇವರನ್ನು ಇರೋ ಬರೋ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರಂತೆ . ಮಂತ್ರವಾದಿಯ ಬಳಿಗೆ ಕರೆದು ಕೊಂಡು ಹೋಗಿ ತೋರಿಸುತ್ತಿದ್ದರಂತೆ.
ಅದು ಪ್ರಿತಿಕಾ ಅವರಿಗೆ ಎಂಬತ್ತನೇ ತರಗತಿಗೆ ಹೋದಾಗ ದೇಹದಲ್ಲಾದ ಬದಲಾವಣೆ ಅರಿವಾಯಿತು ಅಲ್ಲಿಂದ ಮುಂದೆ ಪೂರ್ತಿ ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಮನೆಯ ಜನರಿಗೆ ತನ್ನಿಂದ ನೋವಾಗಬಾರದುಎಂದು ಮನೆಯಿಂದ ಹೊರಗೆ ಹೋಗಿ ಚೆನ್ನೈ ಅಲ್ಲಿ ವಾಸ ಮಾಡುತ್ತಾರೆ. ಇತರ ಮಂಗಳಮುಖಿಯರು ಇವರಿಗೆ ಭಿಕ್ಷಾಟನೆ ಮಾಡಲು ಹಾಗೂ ವೈಶ್ಯಾವಾಟಿಕೆ ಮಾಡಲು ಹೇಳಿದಾಗ ಪೋಲಿಸ್ ಉದ್ಯೋಗ ನನ್ನ ಕನಸು ಎಂದು ಕೆಲವು ಎನ್ಜಿಓ ಅಲ್ಲಿ ಕಾರ್ಯ ನಿರ್ವಹಿಸಿ ಹಾಸ್ಟೆಲ್ ವಾರ್ಡನ್ ಆಗಿ ಸೇರಿ ಹಣ ಗಳಿಸಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ ಅದು ರಿಜೆಕ್ಟ್ ಆಗುತ್ತದೆ.
ಅದಕ್ಕೆ ಮುಖ್ಯ ಕಾರಣ ಇವರು ಮೇಲ್ ಮತ್ತು ಫೀಮೇಲ್ ಕಾಲಂ ಇವರು ಭರ್ತಿ ಮಾಡಿರುವುದಿಲ್ಲ ಹಾಗಾಗಿ ಅದು ಹಾಗೆಯೇ ಉಳಿಯುತ್ತದೆ. ತೃತೀಯ ಲಿಂಗಿಗಳಿಗಲ್ಲ ಎನ್ನುವ ರೀತಿಯಲ್ಲಿ ಮಾತನಾಡಿಕೊಂಡು ನಗುತ್ತಾರೆ. ಕೆಲವರು ಅಪಹಾಸ್ಯ ಮಾಡ್ತಾರೆ. ಆದರೆ ಪ್ರಿತಿಕಾ ಯಶಿನಿ ಹೋರಾಡಿ ಪೋಲೀಸ್ ಇನಿಸ್ಪೆಕ್ಟರ್ ಆಗ್ತಾರೆ.ಯಾಶಿನಿ ಅವರು ಧರ್ಮಪುರಿ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಯಾಶಿನಿ ಅವರ ಗೆಲುವು ದೇಶದ ಟ್ರಾನ್ಸ್‌ಜೆಂಡರ್‌ಗಳ ಅಭಿವೃದ್ಧಿಯಲ್ಲಿ ಬಹುದೊಡ್ಡ ಮೈಲಿಗಲ್ಲು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.