ಮಂಗ್ಲಿ‌ ಬರ್ತಡೆ ಪಾರ್ಟಿಯಲ್ಲಿ ಮಾದಕದ್ರವ್ಯ, ಮ‌ ಜಾ ಉಡಾಯಿಸುವುದನ್ನು ನೋಡಿ ಅಧಿಕಾರಿಗಳೇ ಶಾ ಕ್

 | 
Bs
ಕನ್ನಡ ಹಾಗೂ ತೆಲುಗು ಸೇರಿ ಹಲವು ಸಿನಿಮಾಗಳಲ್ಲಿ ಸೂಪರ್‌ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಗಾಯಕಿ ಮಂಗ್ಲಿಗೆ ಪೊಲೀಸರು ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಸಿನಿಮಾ ಹಾಗೂ ತೆಲುಗಿನ ಜಾನಪದ ಗಾಯಕಿ ಮಂಗ್ಲಿ ರೆಸಾರ್ಟ್ ಒಂದರಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿಯನ್ನು ನೀಡಿದ್ದರು. ಈ ವೇಳೆ ಪೊಲೀಸರು ಮಾಹಿತಿ ಆಧಾರ ಮೇಲೆ ದಾಳಿ ನಡೆಸಿದ್ದು, ಆ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ.
ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ತೆಲುಗು ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದು, ತಡರಾತ್ರಿ ಮಂಗ್ಲಿ ಬರ್ತ್‌ಡೇ ಪಾರ್ಟಿ ನಡೆಯುವಾಗ ದಿಢೀರನೇ ಪೊಲೀಸರು ದಾಳಿ ಮಾಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 50 ಮಂದಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದೇಶಿ ಮದ್ಯ ಮತ್ತು ಗಾಂಜಾ ಪತ್ತೆಯಾಗಿದ್ದು, ಜನಪ್ರಿಯ ಗಾಯಕಿ ಮಂಗ್ಲಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಚೆವೆಲ್ಲಾ ಪೊಲೀಸರು ನಿನ್ನೆ ರಾತ್ರಿ ತ್ರಿಪುರಾ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಪೂರ್ವಾನುಮತಿ ಇಲ್ಲದೆ ಪಾರ್ಟಿ ನಡೆಸಲಾಗಿದೆ, ಅಕ್ರಮವಾಗಿ ವಿದೇಶಿ ಮದ್ಯವನ್ನು ನೀಡಲಾಗುತ್ತಿದೆ ಮತ್ತು ಒಬ್ಬ ವ್ಯಕ್ತಿ ಗಾಂಜಾ ಸೇವಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪೂರ್ವಾನುಮತಿ ಪಡೆಯದೆ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮತ್ತು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಗತ್ಯ ಅನುಮತಿಗಳಿಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಖ್ಯಾತ ಗಾಯಕಿ ಮಂಗ್ಲಿ ಬರ್ತ್​ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿ ಶಾಕ್ ನೀಡಿದ್ದಾರೆ. ಈ ವೇಳೆ ಗಾಂಜಾ, ವಿದೇಶಿ ಮದ್ಯ ಪತ್ತೆ ಆಗಿದೆ. ಈ ಪಾರ್ಟಿ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಪೊಲೀಸರು ದಾಳಿ ಮಾಡಿದ್ದು, ಪಾರ್ಟಿ ವೇಳೆ ಮಂಗ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಪಾರ್ಟಿಯ ವಿಡಿಯೋ ಚಿತ್ರೀಕರಣ ಮಾಡದಂತೆ ಪೊಲೀಸರಿಗೆ ಮಂಗ್ಲಿ ಆವಾಜ್ ಹಾಕಿರೋ ವಿಡಿಯೋ ವೈರಲ್ ಆಗಿದೆ. ಮಂಗ್ಲಿ ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ವೇಳೆ ಹಲವರು ಮಾದಕ ದ್ರವ್ಯ ಸೇವಿಸಿರೋದು ಪತ್ತೆ ಆಗಿದೆ. ಹಾಗಾಗಿ ಮಂಗ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub