ಮುದ್ದಾದ ಆಂಟಿಯ ಮೇಲೆ ಆಸೆ ಪಟ್ಟ ದೈವ ನರ್ತಕ, ಉತ್ತರ ಕನ್ನಡದ ಜನ ತತ್ತರ

 | 
ೀೂ

ವಯುಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬಳಿ ಬಂದಿದ್ದ ವಿವಾಹಿತ ಮಹಿಳೆಗೆ ದೈವದ ಹೆಸರಿನಲ್ಲಿ ಮದುವೆಯಾಗುವುದಾಗಿ ದೈವ ನರ್ತಕ ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಂಬಾರಕೊಡ್ಲೆಯಲ್ಲಿ ನಡೆದಿದೆ. ಬೆಳಗಾವಿಯಿಂದ ಅಂಕೋಲಕ್ಕೆ ತನ್ನ ವಯುಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬೆಳಗಾವಿ ಮೂಲದ ಮಹಿಳೆ ಬಳಿ ಬಂದಿದ್ದರು. ಈ ವೇಳೆ ಮದುವೆಯಾದ ಮಹಿಳೆಯನ್ನ ತಾನೇ ವರಿಸುವುದಾಗಿ ದೈವ ನರ್ತಕ ಪಾತ್ರಿ ವಾಗ್ದಾನವಿತ್ತಿದ್ದಾರೆ. ಇದೀಗ ಕಾಂತಾರ ಸ್ಟೈಲ್‌ನಲ್ಲಿ ಮದುವೆಯಾಗುವುದಾಗಿ ದೈವ ನರ್ತಕ ಹೇಳಿದ ವಿಡಿಯೋ ವೈರಲ್‌ ಆಗುತ್ತಿದೆ. 

ಇನ್ನು ವಿಡಿಯೋದಲ್ಲಿ, ದೈವ ನರ್ತಕ, ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲದೆ, ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ.. ಇದು ಸತ್ಯ ಸತ್ಯ ಎಂದು ನರ್ತಕ ಹೇಳಿದ್ದಾರೆ.
ಆಕೆಯನ್ನು ವರಿಸಲು ದೈವದ ಹೆಸರು ಬಳಸಿ ವಂಚನೆ ಮಾಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅಂಕೋಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ, ಅರ್ಥನಾರೀಶ್ವರ ದೈವ ಮೈಮೇಲೆ ಬರುತ್ತದೆ ಎಂದು ಜನರನ್ನು ದೈವ ನರ್ತಕ  ನಂಬಿಸಿದ್ದಾಗಿ ಜನ ದೂರುತ್ತಿದ್ದಾರೆ.

ದೈವದ ಹೆಸರಿನಲ್ಲಿ ವಿವಾಹಿತ ಮಹಿಳೆಗೆ ತಾನೇ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಜನರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅಂಕೋಲದ ಅಂಬಾರಕೊಡ್ಲನಲ್ಲಿನ ತನ್ನ ನಿವಾಸದಿಂದ ದೈವ ನರ್ತಕ ಚಂದ್ರಹಾಸ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಕೆಂಡದಮಾಸ್ತಿ ದುರ್ಗಾ ದೇವಸ್ಥಾನ ಖಾಲಿ ಹೊಡೆಯುತ್ತಿದ್ದು, ಸಹೋದರ ಹಾಗೂ ಆತನ ತಾಯಿ ಮಾತ್ರ ಸ್ಥಳದಲ್ಲಿದ್ದರು. ಈತ ಬೆಳಗಾವಿ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಒಂದೆಡೆ ದೈವ ನರ್ತಕನ ಮಾತುಗಳು ಸಾಕಷ್ಟು ಅನುಮಾನ ಸೃಷ್ಟಿಸಿದೆ. 

ಇತ್ತ ದೈವ ನರ್ತನನಿಂದ ಅಭಯ ಪಡೆದ ಬೆಳಗಾವಿಯ ವಿವಾಹಿತ ಮಹಿಳೆ ಸಹ ನಾಪತ್ತೆಯಾಗಿದ್ದಾಳೆ. ದೈವ ನರ್ತಕ ಚಂದ್ರಹಾಸನಿಗೆ ಪತ್ನಿ ಹಾಗೂ ಓರ್ವ ಮಗಳು ಸಹ ಇದ್ದಾರೆ. ಆದರೆ ಅವರು ದೂರವಿದ್ದಾರೆ. ಇವರು ದೈವ ನರ್ತನದ ವೇಳೆ ಹೇಳಿದಂತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಹ ಇದೆ. ಆದರೆ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಅವರ ಕುಟುಂಬದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಇನ್ನು ದೈವನರ್ತಕನ ವಿರುದ್ಧ ಜನಶಕ್ತಿ ವೇದಿಕೆ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.