ಮೊದಿ ಆರೋಗ್ಯದ ಬಗ್ಗೆ ಭವಿಷ್ಯ ನುಡಿದ ಕಾಲಜ್ಞಾನಿ; ಮುಂದಿನ 2025ಕ್ಕೆ ಮೋದಿ ರಾಜಕೀಯದಿಂದ ದೂರ

 | 
Yuu

ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ, ಯಾಕೆಂದರೆ ಅವರಿಗೆ ಗಂಡಾಂತರ ಇದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಪ್ರಬಲ ಪಕ್ಷಗಳು ತಯಾರಿ ನಡೆಸುತ್ತಿರುವ ಈ ವೇಳೆ ಬ್ರಹ್ಮಾಂಡ ಗುರೂಜಿ ರಾಜಕೀಯ ಭವಿಷ್ಯ ನುಡಿದಿದ್ದಾರೆ.

ಇತ್ತೀಚಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾವೆಲ್ಲಾ ವಿಚಾರಗಳನ್ನು ಬ್ರಹ್ಮಾಂಡ ಗುರೂಜಿ ಪ್ರಸ್ತಾಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಜಯ ಸಿಗುವುದೇ? ಸಿಕ್ಕರೂ ಅವರಿಗಿರುವ ಗಂಡಾಂತರದಿಂದಾಗಿ ಆಗುವ ಸಮಸ್ಯೆಗಳೇನು? ಇವೆಲ್ಲಾದರ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು ಎಂದು ನೋಡೋಣ.

ಹನ್ನೆರೆಡು ವರ್ಷ ಮಾತ್ರ ಮೋದಿ ಅವರಿಗೆ ಶುಭ ಯೋಗವಿದೆ. ಹೀಗಾಗಿ ನರೇಂದ್ರ ಮೋದಿ ಮುಂಬರುವ ಎಲೆಕ್ಷನ್‌ ಅಲ್ಲೂ ಗೆಲ್ತಾರೆ. ಮೋದಿ ಕೆಳಗಡೆ ಒಂದಿಷ್ಟು ಜನ ಲಂಚ ತಿನ್ನದ ಜನ ಇದ್ದರು. ಕ್ಲೀನ್ ಹ್ಯಾಂಡ್‌ಗಳು ಇದ್ದವು. ಆದರೆ ಇತ್ತೀಚೆಗೆ ಅವರೇ ಬೇಕು ಅಂತ ಕರಪ್ಷನ್ ಮಾಡಿಕೊಂಡು ಬರುತ್ತಿದ್ದಾರೆ.ಯಾಕೆ ಹೀಗೆ ಮಾಡ್ತಾಯಿದ್ದಾರೆ ಅಂದರೆ- ಒಬ್ಬ ರಾಜನನ್ನು ಹಾಳಮಾಡಬೇಕು ಅಂತ ಹಲವಾರು ಜನ ಕಾಯುತ್ತಿರುತ್ತಾರೆ. 

ಅದು ವಿರೋಧ ಪಕ್ಷದವರೇ ಆಗಬೇಕು ಅಂತಿಲ್ಲ. ರಾಜನನ್ನು ಒಬ್ಬ ಮಂತ್ರಿ, ಸೈನಿಕ ಕೂಡ ಹಾಳು ಮಾಡಬಹುದು. ಇವರು ಮಾಡೋ ಕೆಟ್ಟ ಕೆಲಸಗಳಿಂದ ಮೋದಿಗೆ ಕೆಟ್ಟ ಹೆಸರು ಬರಬಹುದು. ಇಂಥಹ ಬಹಳಷ್ಟು ಗಂಡಾಂತರಗಳು ಮೋದಿಗೆ ಇವೆ. ಉದಾ: ಕೆಟ್ಟುಹೋದ ಹಣ್ಣುಗಳು ತಮ್ಮ ನಡುವೆ ಇರುವ ಚೆನ್ನಾಗಿರುವ ಹಣ್ಣುಗಳನ್ನು ಕೆಡಿಸಿಬಿಡುತ್ತವೆ. ಹೀಗೆ ಮೋದಿ ಕೆಳಗೆ ಕೆಲ ಜನ ಲಂಚ ತಿನ್ನದೇ ಇರುವವರು ಇದ್ದರು. ಆದರೆ ಅವರು ಇತ್ತೀಚಿಗೆ ಹಾಳು ಮಾಡ್ತಾಯಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.