ನಿವೇದಿತಾ ಜೈನ್ ಕಾಲು ಜಾರಿ ಬಿದ್ದ ಜಾಗ ಇಂದಿಗೂ ನಿ ಗೂಡ;

 | 
Gu

ಕೆಲವು ಕಲಾವಿದರೆ ಹಾಗೆ. ಎಷ್ಟು ಸಿನಿಮಾ ಮಾಡಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಮಾಡಿರುವ ಕೆಲವೇ ಕೆಲವು ಸಿನಿಮಾಗಳಿಂದ ಜನ ಮಾನಸದಲ್ಲಿ ತಮ್ಮದೆ ಛಾಪು ಮೂಡಿಸಿರುತ್ತಾರೆ. ಅವರು ನಮ್ಮನ್ನು ಅಗಲಿದ ಬಳಿಕವೂ ಅವರ ನೆನಪು ನಮ್ಮನ್ನು ಕಾಡುತ್ತದೆ. ಅಂತಹ ಕಲಾವಿದರ ಪೈಕಿ ಅತಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ ತಾರೆಯರಲ್ಲಿ ನಿವೇದಿತಾ ಜೈನ್ ಕೂಡ ಒಬ್ಬರು.

ಬಣ್ಣದ ಲೋಕದಲ್ಲಿ ಮಿಂಚಲು ಬಂದಿದ್ದ ಅವರು, ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. 16ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ನಿವೇದಿತಾ ಜೈನ್, ಮೊದಲ ಚಿತ್ರದಲ್ಲಿಯೇ ನಟಿಸಿದ್ದು ರಾಘವೇಂದ್ರ ರಾಜ್‌ಕುಮಾರ್ ಎದುರು 'ಶಿವರಂಜಿನಿ'ಯಲ್ಲಿ. ಬಳಿಕ ನಟ ಶಿವರಾಜ್‌ಕುಮಾರ್ ನಟನೆಯ 'ಶಿವ ಸೈನ್ಯ'ದಲ್ಲಿ ಜೋಡಿಯಾಗಿದ್ದರು. ಎರಡು ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು.

ನಟಿ ನಿವೇದಿತಾ ಜೈನ್ ಅಭಿನಯಿಸಿದ್ದ ಅಮೃತವರ್ಷಿಣಿ ಸಿನಿಮಾ ಬಳಿಕ ಹಲವು ಸಿನಿಮಾಗಳು ಸೋಲು ಕಂಡಿದ್ದವು. ಇದರ ಜೊತೆಗೆ ಮಾಡೆಲಿಂಗ್ ಪ್ರಪಂಚದಿಂದ ಬಂದಿದ್ದ, ಮಿಸ್ ಬೆಂಗಳೂರು ಆಗಿದ್ದ ನಿವೇದಿತಾ ಮತ್ತೆ ಅದೇ ಕ್ಷೇತ್ರದ ಕಡೆಗೆ ಹೊರಟಿದ್ದರು. ಮಿಸ್ ಇಂಡಿಯಾ ಕಿರೀಟದ ಮೇಲೆ ಕಣ್ಣಿಟ್ಟಿದ್ದ ಅವರು, ಅದಕ್ಕೆ ತಯಾರಿ ನಡೆಸುವಾಗಲೇ ಸಾವಿನ ಮನೆಯ ಕದ ತಟ್ಟಿದ್ದರು. ಆದರೆ, ಅವರ ಸಾವಿನ ಬಗ್ಗೆ ಹಲವು ಊಹಾಪೋಹಗಳು ಸುತ್ತುಕೊಂಡಿದ್ದವು. 

ಅದು ಆತ್ಮಹತ್ಯೆಯೋ.ಆಕಸ್ಮಿಕ ಸಾವೋ ಎಂಬ ಚರ್ಚೆ ಇಂದಿನವರೆಗೂ ನಡೆಯುತ್ತಲೇ ಇದೆ. 1998ರಲ್ಲಿ ಮೃತಪಟ್ಟ ನಿವೇದಿತಾ ಜೈನ್ ಅವರ ಸಾವಿನ ಚರ್ಚೆ ಇಂದಿಗೂ ಮುಗಿದಿಲ್ಲ. ಬಗೆ ಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಈ ಬಗ್ಗೆ ಅವರ ತಾಯಿಯೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಬಹಳ ದಿನಗಳ ಬಳಿಕ ನಿವೇದಿತಾ ಜೈನ್ ತಾಯಿ ಪ್ರಿಯಾ ಜೈನ್ ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್‌ನಲ್ಲಿ ಆ ದಿನ ಏನಾಯಿತು ಎನ್ನುವುದರ ಮಾಹಿತಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.