ಮುಖಮೂತಿ ಮುಚ್ಚಿ ಎತ್ತುಕೊಂಡು ಹೋದ ಪೊ.ಲೀಸರು, ಚೈತ್ರ ಕುಂದಾಪುರ ಅವಸ್ಥೆ ನೋಡಲಾಗುತ್ತಿಲ್ಲ

 | 
Hx

ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಚೈತ್ರಾ ಕುಂದಾಪುರರನ್ನು ನಿನ್ನೆ ರಾತ್ರಿ ಉಡುಪಿಯಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ವಂಚನೆ ಕೇಸಲ್ಲಿ ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಚೈತ್ರಾ ಟೀಮ್‌ನ 6 ಮಂದಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ಉಡುಪಿಯಲ್ಲಿ ಚೈತ್ರಾ ಕುಂದಾಪುರರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಹೈಡ್ರಾಮಾ ಮಾಡಿದ್ದು, ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಕಾರಿನ ಗಾಜು ಒಡೆಯಲು ಚೈತ್ರಾ ಕುಂದಾಪುರ ಯತ್ನಿಸಿದ್ದು, ಚೈತ್ರಾ ಆತ್ಮಹತ್ಯೆ ಪ್ರಯತ್ನಯನ್ನು ಸಿಸಿಬಿ ಪೊಲೀಸರು ತಡೆದಿದ್ದಾರಂತೆ. ಉಡುಪಿಯಿಂದ ಬೆಂಗಳೂರಿನತ್ತ ಚೈತ್ರಾ ಕುಂದಾಪುರನ್ನು ಸಿಸಿಬಿ ಅಧಿಕಾರಿಗಳು ಕರೆ ತಂದಿದ್ದಾರೆ. 

ತನಿಖಾ ತಂಡ ಪ್ರಕರಣದ ಐಒ ಎಸಿಪಿ ರೀನಾ ಸುವರ್ಣ ಅವರ ಎದುರು ಚೈತ್ರಾ ಕುಂದಾಪುರ ಅವರನ್ನು ಹಾಜರುಪಡಿಸಿದ್ದಾರೆ. ಈ ನಡುವೆ ಚೈತ್ರಾ ಜೊತೆಗೆ ಮತ್ತೋರ್ವ ಆರೋಪಿ ಶ್ರೀಕಾಂತ್ ಸೇರಿದಂತೆ ಮತ್ತೋರ್ವನನ್ನು ಪೊಲೀಸರು ಕರೆ ತಂದಿದ್ದರು. ಸಿಸಿಬಿ ಕಚೇರಿಗೆ ಕರೆ ತರುವ ಮುನ್ನ ಕೆಸಿ ಜನರಲ್​​ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ.
ಸಿಸಿಬಿ ಕಚೇರಿಗೆ ಕರೆತಂದ ಬಳಿಕ ಆರೋಪಿಗಳನ್ನು ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದಾರೆ. 

ಈ ವೇಳೆ ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್​​ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆ ತಂದ ಸಮಯದಲ್ಲಿ ತಮ್ಮ ವೇಲ್​​ನಿಂದ ತಮ್ಮ ಮುಖವನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಿಕೊಂಡು ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದರು. ಇನ್ನು ಚೈತ್ರಾ ಕುಂದಾಪುರ ವಂಚನೆ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದಾರೆ. 

ವಿಡಿಯೋ ಮಾಡಿ ಪ್ರತಿಕ್ರಿಯೆ ನೀಡಿದ ಧನರಾಜ್, ರಮೇಶ್‌‌ ಮಾಹಿತಿ ನೀಡಿದ್ದಾರೆ. ನಮಗೆ ಅನುಕೂಲ ಆಗುತ್ತೆ ಎಂದಿದ್ದಕ್ಕೆ ಒಪ್ಪಿಕೊಂಡಿದ್ದೆವು. ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಎಂದು ಗೊತ್ತಿರಲಿಲ್ಲ. ನಾನು ಹೇಳಿದಂತೆ ನೀವು ನಟಿಸಿ ಎಂದು ಚೈತ್ರಾ ಹೇಳಿದ್ದರಂತೆ. ನಾವು ಹಾಗೇ ಮಾಡಿದ್ವಿ ಎಂದ ರಮೇಶ್, ಧನರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.