ಚಿನ್ನದ ಸೂಜಿಯಿಂದ ಶ್ರೀರಾಮನಿಗೆ ಜೀವ ಕಲೆ ಕೊಟ್ಟ ಅರ್ಚಕರು, ರಾಮನ ಕಣ್ಣುಗಳಿಂದ ಚಮತ್ಕಾರ

 | 
Hs

ರಾಮ ಮಂದಿರದಲ್ಲಿ ವಿರಾಜ ಮಾನನಾಗೋ ರಾಮಲಲ್ಲಾ ಮೂರ್ತಿಯನ್ನ ನೋಡಬೇಕೆಂಬ ಆಸೆ ನೆರವೇರಿದೆ. ಇಡೀ ದೇಶದ ಚಿತ್ತ ಗರ್ಭಗುಡಿಯಲ್ಲಿ 84 ಸೆಕೆಂಡ್‌ಗಳ ಮುಹೂರ್ತದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮೇಲೆ ನೆಟ್ಟಿದೆ. ಕೃಷ್ಣಶಿಲೆಯಿಂದ ಅರಳಿರುವ ಮೂರ್ತಿಗೆ ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ ಶಕ್ತಿ ತುಂಬಿ, ಶಿಲೆಯನ್ನು ದೇವರನ್ನಾಗಿಸುವ ರೋಮಾಂಚಕ ಕ್ಷಣವದು.

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮೋತ್ಸವ ಸಂಭ್ರಮದಿಂದ ನೆರವೇರಿದ್ದು ಈ ವೇಳೆ ಪ್ರಧಾನಿ ಮೋದಿ ಸೇರಿ ಕೇವಲ ಐವರಿಗೆ ಮಾತ್ರ ಗರ್ಭಗುಡಿ ಪ್ರವೇಶ ಇರುತ್ತದೆ. 84 ಸೆಕೆಂಡ್‌ಗಳ ಮುಹೂರ್ತದಲ್ಲಿ ರಾಮನ ಪ್ರಾಣಪ್ರತಿಷ್ಠೆ ಆಗಲಿದ್ದು ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ. 114 ಕಲಶಗಳ ವಿವಿಧ ಜಲದಿಂದ ರಾಮ ಮೂರ್ತಿಗೆ ಸ್ನಾನ ಮಾಡಿಸಲಾಗುತ್ತದೆ. ಇದು ಅಲ್ಲದೇ ಬಾಲರಾಮ ಭಕ್ತರಿಗೆ ದರ್ಶನ ನೀಡಿದ್ದಾನೆ.

114 ಕಲಶಗಳ ವಿವಿಧ ಜಲದಿಂದ ಶ್ರೀರಾಮಲಲ್ಲಾ ಮೂರ್ತಿಗೆ ಸ್ನಾನ ಬಳಿಕ ರಾಮನ ಉತ್ಸವ ಮೂರ್ತಿಗೆ ಅರಮನೆ ಪ್ರದಕ್ಷಿಣೆ ಮಾಡಿಸಲಾಗುತ್ತೆ. ತತ್ಲಾನ್ಯಾಸ, ಮಹಾನ್ಯಾಸ, ಆದಿನ್ಯಾಸ ವಿಧಿ ವಿಧಾನ ನೆರವೇರಿಸಲಾಗುತ್ತೆ. ಬಳಿಕ ಅಘೋರ ಹೋಮ ಹಾಗೂ ವ್ಯಾಹೃತಿ ಹೋಮ ನಡೆಸಲಾಗುತ್ತದೆ. ನಂತರ ಸಂಜೆ ಪೂಜೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮ ಮಾಡಲಾಗುತ್ತೆ. ಪ್ರಾಣ ಪ್ರತಿಷ್ಠಾಪನೆಯ ಮೂಲ ಅರ್ಥ ವಿಗ್ರಹಕ್ಕೆ ಜೀವ ನೀಡುವುದು. ಹಲವು ಆಚರಣೆಗಳ ಮೂಲಕ ಮೂರ್ತಿಗೆ ದೈವಿಕ ಶಕ್ತಿ ನೀಡುವ ಕಾರ್ಯ ನೆರವೇರಿದೆ ಎಂದು ಹೇಳಲಾಗಿದೆ. 

ಕೆಲವು ಜನ ರಾಮ ಮಂದಿರದ ನಿರ್ಮಾಣ ಸಹಿಸದ ಜನ ಅಭಿಜಿತ್ ಮುಹೂರ್ತ ಮಿಸ್ ಆಯ್ತು ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಎಲ್ಲವೂ ಅಂದು ಕೊಂಡಂತೆ ನೆರವೇರಿದೆ. ಮೂರು ಹಂತಗಳಲ್ಲಿ ರಾಮಾನಂದಿ ಸಂಪ್ರದಾಯದ ಪ್ರಕಾರ ನಡೆಯುವ ಕಾರ್ಯ.. ಅರ್ಚಕರು ವೇದ-ಮಂತ್ರ ಪಠಿಸಿ ಮೂರ್ತಿಯೊಳಗೆ ದೇವರನ್ನು ಆವಾಹನೆ ಮಾಡುತ್ತಾರೆ. ಮೊದಲು ನೇತ್ರೋನ್ಮಿಲನ, ಚಿನ್ನದ ಸೂಜಿಯಿಂದ ಕಣ್ಣು ತೆರೆಯುವುದು ವಿಶೇಷವಾಗಿ ನರೆವೇರಿಸುತ್ತಾರೆ. ನೇತ್ರೋನ್ಮಿಲನ ಬಳಿಕ ಕನ್ನಡಿ, ಹಸು, ಹಣ್ಣು-ಹಂಪಲು ತೋರಿಸಲಾಗುತ್ತೆ. 

ರಾಮನ ಮೂರ್ತಿಗೆ ನೈವೆೇದ್ಯ ನೀಡಿದ ಬಳಿಕ ಪ್ರಾಣಪ್ರತಿಷ್ಠಾಪನೆ ಪೂರ್ಣವಾಗುತ್ತದೆ. ಮಧ್ಯಾಹ್ನ 12 ಗಂಟೆ 33 ನಿಮಿಷದ ಹೊತ್ತಿಗೆ ಮೂರ್ತಿಯಲ್ಲಿ ದೈವಶಕ್ತಿ ತುಂಬಲಾಗುತ್ತದೆ. ನಂತರ ರಾಮಲಲ್ಲಾ ಮೂರ್ತಿಗೆ ಪೂಜೆ ಆರಂಭಿಸಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.