ಬಯಲಾಯ್ತು ಮಕರ ಜ್ಯೋತಿ ಅಸಲಿ ರಹಸ್ಯ, ಬೆಟ್ಟದ ಮೇಲೆ ಬೆ ಂಕಿ ಹಚ್ಚುವುದು ಯಾರು ಗೊತ್ತಾ

 | 
Bsh

ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿ ಪ್ರಮುಖ ವಿಶೇಷತೆ. ಇಲ್ಲಿ ಕಾಣಿಸಿಕೊಳ್ಳುವ ಮಕರ ಜ್ಯೋತಿಯನ್ನು ನೋಡಲು ಸಾವಿರಾರು ಮಾಲಾಧಾರಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.

ಮಂಡಲ ಪೂಜೆಯು ಮುಗಿದ ನಂತರ ಡಿಸೆಂಬರ್‌ 27ರಂದು ಮುಚ್ಚಿರುವ ದೇವಾಲಯದ ಬಾಗಿಲನ್ನು ಜನವರಿ 13ರಂದು ತೆರೆಯಲಾಗುತ್ತದೆ. 18 ಮೆಟ್ಟಿಲುಗಳ ಪೂಜಾ ಕಾರ್ಯ ನಡೆದ ನಂತರ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅಯ್ಯಪ್ಪ ಭಕ್ತರು ಎದುರು ನೋಡುವಂತಹ ಮಕರ ಜ್ಯೋತಿಯು ಈ ಬಾರಿ ಕಾಣಿಸಿಕೊಳ್ಳಲಿರುವುದು ಮಾತ್ರ ಜನವರಿ 15, ಬುಧವಾರದಂದು 6.30ಕ್ಕೆ. ಅಯ್ಯಪ್ಪನ ದರುಶನಕ್ಕೆ ಜನವರಿ 13 ರಿಂದ ಜನವರಿ 21ರವರೆಗೆ ಭಕ್ತರು ಇಲ್ಲಿಗೆ ಭೇಟಿ ನೀಡಬಹುದು.

ಶಬರಿಗಿರಿಯ ವಿರುದ್ಧದಿಕ್ಕಿನಲ್ಲಿರುವ ಗಿರಿಯೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಈ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ. ಮೊದಲು  ನಕ್ಷತ್ರದ ಬೆಳಕಿನಿಂದ ಅಲ್ಲಿ ಬೆಳಕು ಕಾಣುತ್ತಿತ್ತು ಈಗ ದೇವಸ್ಥಾನದ ಆಡಳಿತ ಮಂಡಳಿ ಅವರೇ ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ವೇದಿಕೆಯನ್ನು ನಿರ್ಮಿಸಿ, ಬೃಹತ್‌ ಬಾಣಲೆಗೆ ಕರ್ಪೂರವನ್ನು ಹಾಕಿ ಮೂರು ಬಾರಿ ಉರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಎಷ್ಟೇ ವಾದಗಳು- ವಿವಾದಗಳು ನಡೆದರೂ ಅಯ್ಯಪ್ಪನ ಮೇಲಿರುವ ಭಕ್ತರ ನಂಬಿಕೆಗೆ ಎಳ್ಳಷ್ಟೂ ಅಡ್ಡಿಯಾಗಿಲ್ಲ ಎನ್ನುವುದು ಕಠಿಣ ವ್ರತವನ್ನು ಪಾಲಿಸಿ, ಬರಿಗಾಲಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು, ಬೆಟ್ಟವನ್ನು ಹತ್ತಿ, ಮಕರ ಜ್ಯೋತಿಯನ್ನು ಕಂಡು ಭಕ್ತಿಯ ಪರಾಕಾಷ್ಟೆಯನ್ನು ತಲುಪಿ ' ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಉದ್ಘರಿಸುವ ಧ್ವನಿಗಳಲ್ಲಿ ಕಂಡುಬರುತ್ತದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.