ಖ್ಯಾತ ಜೈನ ಮುನಿಗಳ ಹ ತ್ಯೆಗೆ ಕಾರಣ ಬಯಲು, ಎಚ್ಚೆತ್ತುಕೊಂಡ ಎಲ್ಲಾ ಧಮೀಯ ಮುಖಂಡರು

 | 
ರಿ

 ಮುನಿಗಳು ಎಂದರೆ ಕೈ ಮುಗಿಯುವ ಸಂಸ್ಕೃತಿ ನಮ್ಮದು ಅದರಲ್ಲೂ ಜೈನ ಮುನಿಗಳು ಎಂದರೆ ಆಹಾರ ರೀತಿ ನೀತಿ ವಿಚಾರಗಳನ್ನು ಜನರಿಗೆ ತಿಳಿ ಹೇಳುವ ಕಾಯಕ ಇವರದು. ಹಾಗಿರುವಾಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿಗಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಇಂದು ಮುನಿಗಳ ಮೃತದೇಹದ ಭಾಗಗಳನ್ನು ಕೊಳವೆ ಬಾವಿಯಲ್ಲಿ ಪತ್ತೆಯಾಗಿದೆ.


ಖಟಕಬಾವಿ ಗ್ರಾಮದ ಗದ್ದೆಯ ಕೊಳವೆ ಬಾವಿಯಲ್ಲಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹ ಭಾಗಗಳು ಪತ್ತೆಯಾಗಿದೆ. ಜೈನಮುನಿಗಳ ಮೃತದೇಹವನ್ನು ಹಂತಕರು ಪೀಸ್ ಪೀಸ್ ಮಾಡಿ ಬಟ್ಟೆಯಲ್ಲಿ ಸುತ್ತಿ, ಗಂಟು ಕಟ್ಟಿ ಕೊಳವೆ ಬಾವಿಗೆ ಎಸೆದಿದ್ದರು.ಗಂಟಿಗೆ ಕಟ್ಟಿರುವ ಸೀರೆಯಲ್ಲಿ ಸಂಪೂರ್ಣ ದೇಹದ ಪೀಸ್ ಗಳನ್ನು ಪೊಲೀಸರು ಹೊರ ತೆಗೆದಿದ್ದು, ಜೈನಮುನಿಗಳ ಮೃತದೇಹದ ಭಾಗಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. 


ಜಿಲ್ಲಾಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಾಳೆ ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಭಕ್ತಾದಿಗಳ ನಿರ್ಧಾರ ಮಾಡಿದ್ದಾರೆ.ಮೂಲತಃ ರಾಯಭಾಗ ತಾಲೂಕಿನ ಖಟಕಬಾವಿ ನಿವಾಸಿಯಾಗಿದ್ದ ಆರೋಪಿ ನಾರಾಯಣ ಮಾಳಿ ಜಮೀನು ಗುತ್ತಿಗೆ ಪಡೆದು ಉಳುಮೆ ಮಾಡುತ್ತಿದ್ದ.


ಹಲವು ವರ್ಷಗಳಿಂದ ಹಿರೇಕೋಡಿ ಗ್ರಾಮದಲ್ಲಿ ನೆಲೆಸಿದ್ದ. ಜೈನಮುನಿಗಳ ಆಶ್ರಮದ ಕೂಗಳತೆ ದೂರದಲ್ಲಿ ಜಮೀನು ಲೀಸ್ ಪಡೆದು ಉಳುಮೆ ಮಾಡ್ತಿದ್ದ. ಇದೇ ವೇಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಆಪ್ತನಾಗಿದ್ದ.ಜೊತೆಗೆ ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನಮುನಿಗಳ ವಿಶ್ವಾಸ ಗಳಿಸಿದ್ದ ನಾರಾಯಣ ಮಾಳಿ, ವೈಯಕ್ತಿಕ ಕಾರಣಕ್ಕೆ ಜೈನಮುನಿಗಳ ಬಳಿ 6 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನಂತೆ. 


ಹಣ ವಾಪಸ್ ಕೇಳಿದ್ದಕ್ಕೆ ಜುಲೈ 5ರ ರಾತ್ರಿ ನಂದಿಪರ್ವತ ಆಶ್ರಮದ ಕೋಣೆಯಲ್ಲಿಯೇ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿದ್ದ ಆರೋಪಿ, ಬಳಿಕ ಹುಸೇನ್ ನನ್ನ ಕರೆ ಮಾಡಿ ಕರೆಸಿಕೊಂಡು ಮೃತದೇಹವನ್ನು ಖಟಕಬಾವಿ ಗ್ರಾಮದ ಹೊರವಲಯಕ್ಕೆ ತೆಗೆದುಕೊಂಡು ಹೋಗಿದ್ದನಂತೆ. ಅಲ್ಲಿಯೇ ಮೃತದೇಹವನ್ನು ತುಂಡು ತುಂಡು ಮಾಡಿ ಬಟ್ಟೆಯಲ್ಲಿ ಸುತ್ತಿ ಕೊಳವೆಬಾವಿಗೆ ಎಸೆದಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಭಕ್ತರ ಜೊತೆ ಜೈನ ಮುನಿಗಾಗಿ ಆರೋಪಿ ನಾರಾಯಣ ಮಾಳಿ ಹುಡುಕಾಟ ನಡೆಸಿದ್ದನಂತೆ ಎಂಬ ಮಾಹಿತಿ ಪೊಲೀಸರ ಪ ತನಿಖೆ ವೇಳೆ ಬೆಳಕಿಗೆ ಬಂದಿದೆ.


ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ