ತುಮಕೂರಿನ ರೀಲ್ಸ್ ಸುಂದರಿ ಇ ನ್ನಿಲ್ಲ, ಪ್ರೇಮಿಗಳ ನಡುವೆ ನಡೆದ ಆ ಕೆಲಸಕ್ಕೆ ಬ ಲಿಯಾದ ಸೋಶಿಯಲ್ ಮೀಡಿಯಾ ಸ್ಟಾರ್
Jun 25, 2025, 16:47 IST
|

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಪ್ರೇಮಿಗಳ ನಡುವೆ ಆರಂಭವಾದ ಜಗಳ, ಪ್ರೇಯಸಿಯ ದುರಂತ ಸಾವಿನಿಂದ ಅಂತ್ಯವಾಗಿದೆ. ಪ್ರಿಯಕರನ ಜೊತೆ ಜಗಳ ಮಾಡಿದ ಬಳಿಕ ಯುವತಿ ಚೈತನ್ಯ ನೇಣಿಗೆ ಶರಣಾಗಿದ್ದಾಳೆ. ತುಮಕೂರು ಗ್ರಾಮಾಂತರ ತಾಲೂಕು ಹೊಸಹಳ್ಳಿ ನಿವಾಸಿ ಚೈತನ್ಯ. ನೆನ್ನೆ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತ ಯುವತಿ ಚೈತನ್ಯ ತಾಯಿ ಜೊತೆ ವಾಸವಿದ್ದಳು.
ಚೈತನ್ಯ ತುಮಕೂರಿನ ಎಸ್.ಎಸ್.ಐ.ಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಳು. ಜೊತೆಗೆ, ಆಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮೇಕಪ್ ಆರ್ಟಿಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಳು. ಚೈತನ್ಯ ತನ್ನ ತಾಯಿ ಸೌಭಾಗ್ಯಮ್ಮ ಅವರೊಂದಿಗೆ ಡಿ.ಹೊಸಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಆಕೆ, ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನೊಂದಿಗೆ ಕಳೆದ ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಕಾರು ಚಾಲಕ. ಆದರೆ, ಅವರಿಬ್ಬರ ಪ್ರೀತಿಗೆ ಯುವತಿಯ ಮಾವ ವಿರೋಧ ವ್ಯಕ್ತಪಡಿಸಿ, ಈ ಹಿಂದೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ, ಚೈತನ್ಯ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರೀಲ್ಸ್ ವಿಡಿಯೊವೊಂದನ್ನು ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದಳು. ತಮ್ಮಿಬ್ಬರ ಸಂಬಂಧಕ್ಕೆ ಹಿರಿಯ ವಿರೋಧವಿದ್ದರೂ ರೀಲ್ಸ್ ಅಪ್ಲೋಡ್ ಮಾಡಿದ್ದನ್ನು ಪ್ರಶ್ನಿಸಲು ವಿಜಯ್ ಕುಮಾರ್ ರಾತ್ರಿ 10 ಗಂಟೆ ಸುಮಾರಿಗೆ ಚೈತನ್ಯ ಅವರ ಮನೆಗೆ ಆಗಮಿಸಿದ್ದ. ಆ ಸಂದರ್ಭದಲ್ಲಿ ಚೈತನ್ಯ ಅವರ ತಾಯಿ ಸೌಭಾಗ್ಯಮ್ಮ ರೂಮಿನಲ್ಲಿದ್ದು, ಮಗಳೊಂದಿಗೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದರು. ಚೈತನ್ಯ ಹಾಗೂ ವಿಜಯ್ ನನ್ನು ಭೇಟಿ ಮಾಡಿಸಬಾರದೆಂಬ ಉದ್ದೇಶ ಆಕೆಗಿತ್ತು.
ಇದರಿಂದ ಸಿಟ್ಟಿಗೆದ್ದ ರೂಮಿನ ಕಿಟಕಿಯ ಬಳಿಯೇ ಬಂದು ಚೈತನ್ಯ ಜೊತೆಗೆ ಮಾತಿನ ಚಕಮಕಿ ಬೆಳೆಸಿ ಜಗಳವಾಡಿದ್ದ. ಈ ಜಗಳದ ಬಳಿಕ ಚೈತನ್ಯ ಹೊರಟು ಹೋದ ಮೇಲೆ, ಚೈತನ್ಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ತಿಳಿದ ಚೈತನ್ಯ ಅವರ ಕುಟುಂಬಸ್ಥರು, ಆಕೆಯ ಸಾವಿಗೆ ವಿಜಯ್ ಕುಮಾರ್ ಕಾರಣ ಎಂದು ಆರೋಪಿಸಿ, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಜಯ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.