ಬೃಂದಾವನ ಸೀರಿಯಲ್ ಸೋತಿದ್ದೆ ಆತನಿಂದ; ಕಣ್ಣೀ ರಿಟ್ಟ ಡೈರೆಕ್ಟರ್

 | 
Hui

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಬೃಂದಾವನ ಸೀರಿಯಲ್ ಏಕಾಏಕಿ ನಿಂತುಹೋಗಿದೆ. ಕೇವಲ 170 ಎಪಿಸೋಡ್‌ಗಳಿಗೆ ಈ ಸೀರಿಯಲ್ ನಿಂತುಹೋಗಲು ಕಾರಣವೇನು? ರಾಮ್‌ಜೀ ಅವರ ಸೀರಿಯಲ್‌ಗಳು ಎಂದರೆ ಸಾವಿರ, ಮೂರು ಸಾವಿರ,  ಐದು ಸಾವಿರ ಎಪಿಸೋಡ್‌ಗಳಾದರೂ ನಿಲ್ಲುವುದಿಲ್ಲ, ಮುಂದಕ್ಕೆ ಓಡುತ್ತಲೇ ಇರುತ್ತವೆ. 

ಅಂಥದ್ರಲ್ಲಿ ಬೃಂದಾವನ ಇಷ್ಟು ಬೇಗ ವೈಂಡ್‌ಅಪ್ ಆಗಲು ಕಾರಣವೇನು? ಕೆಲವರ ಪ್ರಶ್ನೆ ಇದಕ್ಕೆ ಕಾರಣ ಬೃಂದಾವನ ಹೀರೋ ವರುಣ್ ಆರಾಧ್ಯ ಅವರೇನಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ರಾಮ್‌ಜೀ  ಈ ಬಗ್ಗೆ ಮಾತನಾಡುತ್ತ 'ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಕೆಲವರು ಈ ಸೀರಿಯಲ್‌ ಹೀರೋ ಬದಲಾವಣೆ ಬಗ್ಗೆ ಟೀಕೆ ಮಾಡಿದ್ದಾರೆ ಎಂಬುದನ್ನು ನಾನೂ ಕೇಳಿದ್ದೇನೆ. ಆದರೆ, ನನಗೇನೂ ಅದು ಕಾರಣ ಎನ್ನಿಸಿಲ್ಲ, ನಿರ್ದೇಶಕನಾಗಿರುವ ನನಗೆ ಸ್ಪಷ್ಟವಾಗಿ ಗೊತ್ತು, ಇದು ನಿಲ್ಲಲು ಟೆಕ್ನಿಕಲ್ ಕಾರಣ ಬಿಟ್ಟು ಬೇರೇನೂ ಇಲ್ಲ ಅಂತ. 

ಆದರೆ, ಈ ಸೀರಿಯಲ್‌ನಲ್ಲಿ ಹೀರೋ ಬದಲಾವಣೆ ಅನಿವಾರ್ಯವಾಗಿತ್ತು. ಕಾರಣ, ಮೊದಲು ಆಯ್ಕೆಯಾಗಿ ಶೂಟಿಂಗ್‌ನಲ್ಲಿ ಭಾಗಿಯೂ ಆಗಿದ್ದ ವಿಶ್ವನಾಥ್ ಹಾವೇರಿಗೆ ಮೈಗೆ ಹುಶಾರು ಇರಲಿಲ್ಲ. ವಿಶ್ವ ತುಂಬಾ ಒಳ್ಳೆಯ ಹುಡುಗ ಮತ್ತು ಆ ರೋಲ್‌ಗೆ ತುಂಬಾ ಆಪ್ಟ್ ಆಗುತ್ತಿದ್ದ. ಬೃಂದಾವನ ಸೀರಿಯಲ್‌ನ ಮದುವೆ ಎಪಿಸೋಡ್‌ಗಳಿಗೆ 6 ದಿನಗಳು ಡೈ ಅಂಡ್ ನೈಟ್ ಶೂಟಿಂಗ್ ಮಾಡಬೇಕಿತ್ತು. ಆದರೆ, ಆಯ್ಕೆಯಾಗಿದ್ದ ನಾಯಕ ವಿಶ್ವನಿಗೆ ಹುಶಾರು ತಪ್ಪಿಬಿಟ್ಟಿತು. 

ಅನಾರೋಗ್ಯದಿಂದ ಬಳಲುತ್ತಿರುವ ಅವನನ್ನು ಹಾಕಿಕೊಂಡು ಡೈ ಅಂಡ್ ನೈಟ್ ಸತತವಾಗಿ ಆರು ದಿನಗಳ ಕಾಲ ಶೂಟ್ ಮಾಡಲು ಸಾಧ್ಯವೇ ಇರಲಿಲ್ಲ. ಅನಾರೋಗ್ಯದಿಂದ ಅದೆಷ್ಟು ಸಣ್ಣಗಾಗಿದ್ದ ಎಂದರೆ, ಮದುವೆ ಸೀನ್‌ನಲ್ಲಿ ತೋರಿಸೋಕೆ ಅಸಾಧ್ಯ ಎನ್ನುವಂತಾಗಿದ್ದ. ಬಳಿಕ ಮಧ್ಯರಾತ್ರಿಯ ಹುಡುಕಾಟದಲ್ಲಿ ಸಿಕ್ಕವರೇ ಈ ವರುಣ್ ಆರಾಧ್ಯ. ವರುಣ್ ಅವರನ್ನು ಹಾಕಿಕೊಂಡು ಶೂಟ್ ಮಾಡಿ ಸೀರಿಯಲ್ ಪ್ರಸಾರ ಆರಂಭಿಸಲಾಯಿತು. 

ಇನ್ನು ವರುಣ್ ಆರಾಧ್ಯ ಬಗ್ಗೆ ಹೇಳಬೇಕೆಂದರೆ, ನಟನಾಗಿ ಆತನಲ್ಲಿ ಯಾವದೇ ಸಮಸ್ಯೆ ಇರಲಿಲ್ಲ. ವೈಯಕ್ತಿಕ ಸಮಸ್ಯೆಯ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರದೇ ಪರ್ಸನಲ್ ಲೈಫ್‌ ಬಗ್ಗೆ ಯಾರೇ ಆದರೂ ಮಾತನಾಡುವುದು ತಪ್ಪು. ಹುಡುಕುತ್ತಾ ಹೋದರೆ ಎಲ್ಲರ ವೈಯಕ್ತಿಕ ಬದುಕಿನಲ್ಲೂ ಒಂದಲ್ಲ ಒಂದು ಘಟನೆಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನೆಲ್ಲಾ ಕೆದಕುತ್ತಾ ಕುಳಿತರೆ ಮುಗಿಯುವುದೇ ಇಲ್ಲ. ಅಷ್ಟಕ್ಕೂ ಇನ್ನೊಬ್ಬರ ಬದುಕಿನಲ್ಲಿ ಇಣುಕಿ ನೋಡುವ ಅಗತ್ಯ ನಮಗಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.