'ಸಂಬಳ ಜಾಸ್ತಿ ಕೇಳಿದ ಸೀರಿಯಲ್ ನ ಟಿ; ನಿರ್ಮಾಪಕ ಬೇಡಿಕೆ ಇಟ್ಟಿದ್ದೇನು ಗೊ.ತ್ತಾ

 | 
Hu

ಬಜಾರಿ ಪಾತ್ರದಲ್ಲಿ ಸುಂದರವಾಗಿ ಅಭಿನಯಿಸಿ ಮನಗೆದ್ದಿರುವ ಕಿರುತೆರೆಯ ನಟಿ ಅಭಿಜ್ಞಾ ಭಟ್ ಸೋಷಿಯಲ್ ಮೀಡಿಯಾ ಅಲ್ಲಿ ಕೂಡ ಸಕತ್ ಆಕ್ಟಿವ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಭಿಜ್ಞಾ ಇದ್ದಕ್ಕಿದ್ದಂತೆ ಸೀರಿಯಲ್‌ನಿಂದ ಹೊರ ಬಂದಿದ್ದಾರೆ .

ರಾಮಚಾರಿಯನ್ನು ಹುಚ್ಚಿಯಂತೆ ಪ್ರೀತಿಸುವ ಮಾವನ ಮಗಳು ದೀಪಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಮಚಾರಿ ಮತ್ತು ಚಾರು ನಡುವೆ ಪ್ರೀತಿ ಬೆಳೆಯುತ್ತಿದ್ದಂತೆ ದೀಪಾ ಪಾತ್ರ ಮಾಯವಾಗಿತ್ತು. ರಾಮಚಾರಿ ಸೀರಿಯಲ್‌ನಿಂದ ಹೊರ ಬಂದು ಮತ್ತೊಂದು ದೊಡ್ಡ ಪ್ರಾಜೆಕ್ಟ್‌ ಒಪ್ಪಿಕೊಂಡಿರುವ ಅಭಿಜ್ಞಾ ತಮಗೆ ಸಿಕ್ಕ ಹೊಸ ಚಾನ್ಸ್ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ.

ರಾಮಾಚಾರಿ ಸೀರಿಯಲ್‌ನಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು ಆದರೆ ದೀಪಾ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಒಂದು ದಿನ ಗೌರಿ ಶಂಕರ ಸೀರಿಯಲ್ ಮ್ಯಾನೇಜರ್ ಕರೆ ಮಾಡಿ ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದ್ದರು. ಆಯ್ಯೋ ಆಗಲ್ಲ ನಾನು MBA ಮಾಡುತ್ತಿರುವ ಸಮಯ ಇಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದರೂ ಯೋಚನೆ ಮಾಡಲು ಹೇಳಿದರು. 

ಸರಿ ಆಯ್ತು ಎಂದು ಯೋಚನೆ ಮಾಡಿ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದೆ. ಹೀರೋ ತಂಗಿ ಪಾತ್ರ ಆಗಿದ್ದರೂ ನೀವು ಎರಡನೇ ನಾಯಕಿ ಆಗಿರುತ್ತೀರಾ. ವಜ್ರಕಾಯ ಚಿತ್ರದ ಪಟಾಕ ಪಾತ್ರದಲ್ಲಿ ನೀವು ಕಾಣಿಸಿಕೊಳ್ಳುತ್ತೀರಾ ಎಂದುಬಿಟ್ಟರು. ಆಡಿಷನ್ ಮಾಡಿ ಆಯ್ಕೆ ಮಾಡುತ್ತಾರೆ ಅಂದುಕೊಂಡೆ ಆದರೆ ಆಫೀಸ್‌ಗೆ ಕರೆದು ನೇರಾ ಬಾಂಡ್ ಪೇಪರ್‌ನ ನನ್ನ ಮುಂದೆ ಇಟ್ಟುಬಿಟ್ಟರು. 

ನಾನು ಸಂಭಾವನೆ ಇಷ್ಟು ಬೇಕು ಎಂದು ಡಿಮ್ಯಾಂಡ್ ಮಾಡಿದೆ ಅದಕ್ಕೂ ಒಪ್ಪಿಕೊಂಡರು ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಅಭಿಜ್ಞಾ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.