ಮದುವೆಯಾದ ಹದಿನೈದೇ ದಿನಗಳಲ್ಲಿ ಡಿವೋರ್ಸ್ ಕೊಟ್ಟ ಸೀರಿಯಲ್ ನ ಟಿ;
ಸಿನಿಮಾ ಹಾಗೂ ಧಾರಾವಾಹಿಯನಲ್ಲಿ ನಟನೆ ಮಾಡುವ ಎಲ್ಲ ಕಲಾವಿದರ ಜೀವನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಆದರೆ, ಇಲ್ಲಿ ಖ್ಯಾತ ಧಾರಾವಾಹಿ ನಟಿಗೆ ಕೆಲವು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಕೆಯ ಬೆಡ್‌ರೂಮ್ ಕಬೋರ್ಡ್‌ನಲ್ಲಿ ಕಾಂಡೋಮ್ಸ್ ಪ್ಯಾಕೆಟ್ ಲಭ್ಯವಾಗಿದೆ. ಇದನ್ನು ನೋಡಿದ ಗಂಡ ಶಾಕ್‌ಗೆ ಒಳಗಾಗಿದ್ದು, ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸಿನಿಮಾ ಹಾಗೂ ಧಾರಾವಾಹಿ ಕಲಾವಿದರ ಜೀವನ ಸಾರ್ವಜನಿಕ ಜೀವನವಾಗಿರುತ್ತದೆ. ಇವರು ಪ್ರತಿ ಹೆಜ್ಜೆಯನ್ನೂ ಕೂಡ ಜಾಗರೂಕರಾಗಿಯೇ ಇಡಬೇಕು. ಆದರೂ, ಹಲವು ನಾಯಕಿಯರು ಪ್ರೀತಿ, ಮದುವೆ, ವಿವಾಹ ವಿಚ್ಛೇದನ ಹಾಗೂ ಅನೈತಿಕ ಸಂಬಂಧ ಹೀಗೆ ಹತ್ತು ಹಲವು ಕಾರಣಗಳಿಂದ ಜೀವನದಲ್ಲಿ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಇಲ್ಲಿಯೂ ಕೂಡ ತೆಲುಗು ಧಾರಾವಾಹಿಯ ಖ್ಯಾತ ನಟಿಯೂ ಕೂಡ ಇಂತಹದೇ ಕೌಟುಂಬಿಕ ಸಮಸ್ಯೆಗೆ ಸಿಲುಕಿದ್ದಾಳೆ.
ಅದರಲ್ಲಿಯೂ ನಟಿಗೆ ಕೆಲವು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಕೆಯ ಕಬೋರ್ಡ್‌ನಲ್ಲಿದ್ದ ಕಾಂಡೋಮ್ಸ್ ನೋಡಿ ಗಂಡನೇ ಬೆಸ್ತು ಬಿದ್ದಿದ್ದಾನೆ. ತೆಲುಗು ಖ್ಯಾತ ಧಾರಾವಾಹಿ ನಟಿ ಐಶ್ವರ್ಯಾ ಅಡ್ಡಾಳ ಹೆಸರು ಮುನ್ನೆಲೆಗೆ ಬಂದಿದೆ. ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಮತ್ತು ಡಿವೋರ್ಸ್ ಕೇಳುತ್ತಿದ್ದಾಳೆ ಎಂದು ಐಶ್ವರ್ಯಾ ಪತಿ ಶ್ಯಾಮ್ ಕುಮಾರ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನಂತರ ಪತ್ನಿ ಐಶ್ವರ್ಯಾಳ ಬಗ್ಗೆ ಹಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಬಯಲಿಗೆಳೆಯುತ್ತಿದ್ದಾರೆ. ಪತ್ನಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ಯಾಮ್ ಕುಮಾರ್, ಐಶ್ವರ್ಯಾಗೆ ಬೇರೊಬ್ಬ ಗಂಡಸಿನ ಜೊತೆಗೆ ಅನೈತಿಕ ಸಂಬಂಧ ಇದೆ. ನನ್ನ ಬಳಿ 25 ಲಕ್ಷ ರೂ. ಪಡೆದುಕೊಂಡು ಈಗ ನಿನ್ನಿಂದ ಡಿವೋರ್ಸ್ ಬೇಕು ಎಂದು ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ತೆಲುಗಿನ ಪ್ರಸಿದ್ಧ ಧಾರಾವಾಹಿಗಳಾದ ತೇತಿಯ ಗಾರು, ಪಲುಕೆ ಬಂಗಾರಮಾಯೆನಾ, ಅಲ ವೈಕುಂಠಪುರಂ, ಅತ್ತಾರಿಂಟಿಕಿ ದಾರೇದಿ ಮುಂದಾದವುಗಳಿಂದ ನಟಿ ಐಶ್ವರ್ಯಾ ಅಡ್ಡಾಳ ಖ್ಯಾತಿ ಪಡೆದಿದ್ದಾಳೆ.