ಸೆಲ್ಫಿ ತೆಗಯಲು ಬಂದ ಮುದ್ದಾದ ಯುವತಿಯ ತುಟಿಗೆ ಕಿಸ್ಸ್ ಕೊಟ್ಟ ಖ್ಯಾ ತ ಗಾಯಕ

 | 
ರದಜ
ಗಾಯಕ ಉದಿತ್ ನಾರಾಯಣ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಕಾನ್ಸರ್ಟ್ ವೇಳೆ ಮಹಿಳಾ ಅಭಿಮಾನಿಯ ತುಟಿಗೆ ಚುಂಬಿಸಿದ ವಿಡಿಯೋ ವೈರಲ್ ಆಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣ ಆಗಿತ್ತು. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಮಾಡಲಾಯಿತು. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವಾಗ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಅವರು ಹೇಳಿದ್ದರು. ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಕಂಚಿನ ಕಂಠದ ಗಾಯಕ ಉದಿತ್ ನಾರಾಯಣ್ ಅವರು ಸಾಕಷ್ಟು ಕಾನ್ಸರ್ಟ್​ಗಳನ್ನು ನೀಡುತ್ತಾರೆ. ಆದರೆ, ಈ ವಿಚಾರದಲ್ಲಿ ಅವರು ಸುದ್ದಿ ಆಗಿದ್ದು ಕಡಿಮೆ. ಈಗ ಅವರು ಅಭಿಮಾನಿಗಳಿಗೆ ಕಿಸ್ ಮಾಡುತ್ತಾ ಸುದ್ದಿ ಆಗುತ್ತಿದ್ದಾರೆ. ಈ ಮೊದಲು ವೈರಲ್ ಆದ ವಿಡಿಯೋದ ಸದ್ದು ತಣ್ಣಗಾಗುವ ಮೊದಲೇ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದ್ದಾರೆ.
ಉದಿತ್ ನಾರಾಯಣ್ ಅವರು ವೇದಿಕೆ ಮೇಲೆ ಹಾಡುತ್ತಿದ್ದರು. ಆಗ ಮಹಿಳಾ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಸಮಯವನ್ನು ಬಳಸಿಕೊಂಡ ಉದಿತ್ ಅವರು, ಓರ್ವ ಅಭಿಮಾನಿಯ ಕೆನ್ನೆಗೆ ಮುತ್ತಿಟ್ಟರು. ಮತ್ತೋರ್ವ ಫ್ಯಾನ್​ಗೆ ತುಟಿಗೆ ಕಿಸ್ ಮಾಡಿದ್ದಾರೆ. ‘ಉದಿತ್ ನಾರಾಯಣ್ ಅವರ ಮತ್ತೊಂದು ವಿಡಿಯೋ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಸದ್ಯ ಉದಿತ್ ನಾರಾಯಣ್ ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಅವರನ್ನು ‘ರಸಿಕರ ರಾಜ’ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಈ ರೀತಿಯ ವರ್ತನೆಗೆ ಕಡಿವಾಣ ಹಾಕಬೇಕು ಎಂದಿದ್ದಾರೆ. ಕೆಲವರು ಮೀಮ್​ಗಳನ್ನು ಮಾಡಿದ್ದು, ಗಾಡ್​ಫಾದರ್ ಆಫ್ ಇಮ್ರಾನ್ ಹಷ್ಮಿ ಎಂದೆಲ್ಲ ಬರೆದುಕೊಂಡಿದ್ದಾರೆ. ಆದರೆ ನಿಜಕ್ಕೂ ಇದು ಉತ್ತಮ ಗಾಯಕ ಎನಿಸಿಕೊಂಡಿರುವ ಇವರು ಹೀಗೆ ನಡೆದುಕೊಂಡಿರುವುದು ಬೇಸರದ ಸಂಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.