ಚಂದ್ರನ ಮೇಲೆ ಇಳಿಯುವ ಸ್ಪಲ್ಪ ಸಮಯದಲ್ಲೇ ಹೊತ್ತಿ ಉರಿದ ನೌಕೆ

 | 
ರಪ

ರಷ್ಯಾ ಸರಿಸುಮಾರು 50 ವರ್ಷಗಳ ಬಳಿಕ ನಡೆಸಿದ ಮೊದಲ ಚಂದ್ರಯಾನ ಯೋಜನೆ ವಿಫಲವಾಗಿದೆ. ಲೂನಾ- 25 ನೌಕೆಯು ಲ್ಯಾಂಡಿಂಗ್ ಪೂರ್ವ ಮ್ಯಾನೋವರ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಬಳಿಕ ಚಂದ್ರನ ಮೇಲೆ ಅಪ್ಪಳಿಸಿ ಛಿದ್ರವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಭಾನುವಾರ 
ಬೇಸರದಿಂದ ತಿಳಿಸಿದೆ.

25 ಜತೆಗಿನ ಸಂವಹನವು ಶನಿವಾರ ಮಧ್ಯಾಹ್ನ 2.57ರ ವೇಳೆಗೆ ಕಡಿತಗೊಂಡಿತ್ತು ಎಂದು ರಷ್ಯಾ ಹೇಳಿದೆ. ಲೂನಾ- 25ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಗೆ ಜೋರಾಗಿ ಡಿಕ್ಕಿ ಹೊಡೆದ ಬಳಿಕ ಪುಡಿಯಾಗಿದೆ ಎನ್ನುವುದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ. ನೌಕೆ ಎಲ್ಲಿ ಇದೆ ಎಂಬುದನ್ನು ಪತ್ತೆ ಮಾಡಲು ಹಾಗೂ ಸಂಪರ್ಕಿಸಲು ಆಗಸ್ಟ್ 19 ಮತ್ತು 20ರಂದು ತೆಗೆದುಕೊಂಡ ಕ್ರಮಗಳು ವಿಫಲವಾಗಿದ್ದವು. 

ನೌಕೆಯ ಲ್ಯಾಂಡರ್ ಪತನಕ್ಕೆ ಕಾರಣಗಳು ಏನು ಎಂದು ತಿಳಿಯಲು ತನಿಖೆ ಆರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಯಾವ ರೀತಿಯ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂಬ ಯಾವುದೇ ಸುಳಿವನ್ನು ಸಂಸ್ಥೆ ನೀಡಿಲ್ಲ. 1650 ಕೋಟಿ ಖರ್ಚು ಮಾಡಿ ಮಾಡಿದ ನೌಕೆ ವಿಫಲವಾಗಿದೆ. 800 ಕೆಜಿ ತೂಕದ ಲೂನಾ- 25 ಅಧ್ಯಯನ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಆಗಸ್ಟ್ 21ರಂದು ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. 

ಇದು ಸಾಧ್ಯವಾಗಿದ್ದರೆ ಚಂದ್ರನ ಅಧ್ಯಯನದಲ್ಲಿ ರಷ್ಯಾ ಚಾರಿತ್ರ್ಯಿಕ ಸಾಧನೆ ಮಾಡಿದಂತಾಗುತ್ತಿತ್ತು. ಇದುವರೆಗೂ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಗಮವಾಗಿ ಇಳಿಸುವುದು ಸಾಧ್ಯವಾಗಿಲ್ಲ. ಭಾರತದ ಇಸ್ರೋ ಜತೆಗೆ ಪೈಪೋಟಿಗೆ ಇಳಿದಿದ್ದ ರಷ್ಯಾ, ತಡವಾಗಿ ಉಡಾವಣೆಯಾದರೂ ಚಂದ್ರಯಾನ- 3ಕ್ಕಿಂತಲೂ ಬೇಗನೆ ದಕ್ಷಿಣ ಧ್ರುವದಲ್ಲಿ ಇಳಿಯುವ ಅವಸರ ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಆಗಸ್ಟ್ 10ರಂದು ಲೂನಾ 25 ನೌಕೆ ಉಡಾವಣೆಗೊಂಡಿತ್ತು. 

ಚಂದ್ರಯಾನ- 3ಗಿಂತಲೂ ಬಹಳ ವೇಗವಾಗಿ ಚಲಿಸಿದ ಲೂನಾ, ದಕ್ಷಿಣ ಧ್ರುವದ ಮೇಲೆ ಇಳಿಯುವ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಬಯಕೆ ಹೊಂದಿತ್ತು. ಆದರೆ ರಷ್ಯಾದ ಪ್ರಯತ್ನ ನುಚ್ಚುನೂರಾಗಿದೆ. ಇದೀಗ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವ ಅಪೂರ್ವ ಅವಕಾಶ ಮತ್ತೆ ಭಾರತಕ್ಕೆ ದೊರಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.