ಕುಡಿತದ ಚಟಕ್ಕೆ ದಾಸರಾಗಿದ್ದ ನಟಿ ಡಿಸ್ಕೋ ಶಾಂತಿ ಅವರ ಬದುಕಿನ ಕಥೆ ಕೇಳಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತೆ

 | 
ರ್ರಾ

 ನಟಿ ಡಿಸ್ಕೋ ಶಾಂತಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ . ಡಿಸ್ಕೋ ಶಾಂತಿ ಸಿನಿಪ್ರಿಯರಿಗೆ ಪರಿಚಿತ ನಟಿ. ಅವರು ನಟನೆಗಿಂತ ಹೆಚ್ಚಾಗಿ ಡ್ಯಾನ್ಸರ್‌ ಆಗಿ ಗುರುತಿಸಿಕೊಂಡಿದ್ದವರು. 80ರ ದಶಕದಲ್ಲಿ ಬಹುತೇಕ ಕನ್ನಡ ಸಿನಿಮಾಗಳಲ್ಲಿ ಡಿಸ್ಕೋಶಾಂತಿ ಇದ್ದಾರೆ. 

ಡಿಸ್ಕೋ ಶಾಂತಿ ನಟಿಯಾಗಿ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರೆ, ಹೆಚ್ಚಿನ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್‌ ಆಗಿ ಮಾತ್ರ ಬಂದು ಹೋಗುತ್ತಿದ್ದರು. ಇಷ್ಟಾದರೂ  ಆಗಿನ ಕಾಲದ ಹುಡುಗರಿಗೆ ಅವರೆಂದರೆ ಬಹಳ ಇಷ್ಟ. 
ಸಿನಿಮಾಗಳ ಕ್ಯಾಬರೆ ಡ್ಯಾನ್ಸರ್‌ಗಳು ಎಂದರೆ ಕೆಲವರು ನೋಡುತ್ತಿದ್ದ ದೃಷ್ಟಿಯೇ ಬೇರೆ ಇರುತ್ತದೆ. ಇದೇ ವಿಚಾರವನ್ನು ಡಿಸ್ಕೋ ಶಾಂತಿ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಗೂ ಶ್ರೀಹರಿ ಲವ್‌ ಸ್ಟೋರಿಯನ್ನೂ ಹೇಳಿಕೊಂಡಿದ್ದಾರೆ. 

ಶ್ರೀಹರಿ ಹಾಗೂ ಡಿಸ್ಕೋ ಶಾಂತಿ ಮೊದಲು ಭೇಟಿ ಆಗಿದ್ದು ತೆಲುಗಿನ ದಾದರ್‌ ಎಕ್ಸ್‌ಪ್ರೆಸ್‌ ಸಿನಿಮ ಶೂಟಿಂಗ್‌ನಲ್ಲಿ. ಯಾರನ್ನು ಮದುವೆ ಆದರೂ ಸಿನಿಮಾದವರನ್ನು ಮಾತ್ರ ಮದುವೆ ಆಗಬಾರದು ಎಂದು ನಾನು ನಿರ್ಧರಿಸಿದ್ದೆ. ಆದರೆ ನನಗೇ ಗೊತ್ತಿಲ್ಲದೆ ನನ್ನ ಬಾಳಿಗೆ ಶ್ರೀ ಹರಿ ಬಂದರು. 

ಅದುವರೆಗೂ ಡಿಸ್ಕೋಶಾಂತಿಗೆ ಬಹಳ ಮಂದಿ ಪ್ರಪೋಸ್‌ ಮಾಡಿದ್ದರು. ಆದರೆ ಎಲ್ಲರೂ ಐ ಲವ್‌ ಯೂ ಎಂದಿದ್ದರೇ ಹೊರತು ಯಾರೂ ಮದುವೆ ಬಗ್ಗೆ ಮಾತನಾಡಿರಲಿಲ್ಲ. ಶ್ರೀಹರಿ ಮಾತ್ರ ಡಿಸ್ಕೋಶಾಂತಿಯನ್ನು ನನ್ನನ್ನು ಮದುವೆ ಆಗುತ್ತೀಯ ಎಂದು ಪ್ರಪೋಸ್‌ ಮಾಡಿದ್ದಾರೆ. ಶ್ರೀಹರಿ ಅವರ ಆ ಗುಣವೇ ಶಾಂತಿಗೆ ಬಹಳ ಇಷ್ಟವಾಗಿತ್ತು.

ಮದುವೆ ಆದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದ ಡಿಸ್ಕೋ ಶಾಂತಿ ಮಕ್ಕಳಾದ ನಂತರ ನಟನೆ ಹಾಗೂ ಡ್ಯಾನ್ಸ್‌ನಿಂದ ದೂರ ಉಳಿದರು. ಶ್ರೀಹರಿ, ಡಿಸ್ಕೋ ಶಾಂತಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹೆಣ್ಣು ಮಗು ಜನಿಸಿತ್ತಾದರೂ 4 ತಿಂಗಳ ನಂತರ ಆ ಮಗು ಅನಾರೋಗ್ಯದಿಂದ ಸಾವನ್ನಪ್ಪಿತು. ಮಗಳು ಅಕ್ಷರಾ ಹೆಸರಿನಲ್ಲಿ ಡಿಸ್ಕೋ ಶಾಂತಿ ಫೌಂಡೇಷನ್‌ ಒಂದನ್ನು ಸ್ಥಾಪಿಸಿ ಸಮಾಜಸೇವೆ ಮಾಡುತ್ತಿದ್ದಾರೆ. 

ಶ್ರೀ ಹರಿ ಸಾವಿನ ನಂತರ ಡಿಸ್ಕೋ ಶಾಂತಿ ಕುಡಿತಕ್ಕೆ ದಾಸರಾಗಿದ್ದರು.gಡಿಸ್ಕೋಶಾಂತಿ ಡಿಪ್ರೆಶನ್‌ಗೆ ಜಾರಿದ್ದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆಕೆಯನ್ನು ನೋಡಿದವರು ಇವರೇನಾ ಶಾಂತಿ ಎನ್ನುವಷ್ಟು ವೀಕ್‌ ಅಗಿದ್ದರು. ಈಗಲೂ ಆಕೆ ಪತಿ ಶ್ರೀಹರಿಯನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಲೇ ಇರುತ್ತಾರೆ. ಅವರು ಈಗಲೂ ಹೇಳುತ್ತಾರೆ ನಾನು ಇಷ್ಟು ವರ್ಷ ಬದುಕಿದಿದ್ದದ್ದೆ ಹೆಚ್ಚು ಎಂದೆನ್ನುತ್ತಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.