ಕೋಟ್ಯಾಂತರ ಅಭಿಮಾನಿಗಳ ತಮಿಳು ನಟ ಇನ್ನು ನೆನಪು ಮಾತ್ರ, ಒಡೋಡಿ ಬಂದ ದರ್ಶನ್ ಸುದೀಪ್ ಯಶ್

 | 
Bjj

ತಮಿಳು ಚಿತ್ರರಂಗದ ಕ್ಯಾಪ್ಟನ್ ಎಂದೇ ಫೇಮಸ್ ಆಗಿರುವ ತಮಿಳು ಚಿತ್ರರಂಗದ ಹಿರಿಯ ನಟ, ಡಿಎಂಡಿಕೆ ಪಕ್ಷದ ನಾಯಕ  ವಿಜಯಕಾಂತ್ ಡಿಸೆಂಬರ್ 28ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಕಾಂತ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಮಧ್ಯೆ ಅವರಿಗೆ ಕೊರೊನಾ ವೈರಸ್ ಕೂಡ ತಗುಲಿತ್ತು. ಇದೀಗ ವೈದ್ಯರು, ಚಿಕಿತ್ಸೆ ಫಲಕಾರಿಯಾಗದೆ ವಿಜಯಕಾಂತ್ ಮೃತಪಟ್ಟಿದ್ದಾರೆ.

ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ, ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ದರು. ನೆಚ್ಚಿನ ನಾಯಕ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ, ಅಭಿಮಾನಿಗಳು ಆಘಾತಗೊಂಡಿದ್ದಾರೆ. ಆಸ್ಪತ್ರೆ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದೆ. ವಿಜಯಕಾಂತ್ ಅವರ ಮೂಲ ಹೆಸರು ವಿಜಯರಾಜ್ ಅಲಗರ್‌ಸ್ವಾಮಿ. 1952ರ ಆಗಸ್ಟ್ 25ರಂದು ಜನಿಸಿದ ವಿಜಯಕಾಂತ್, 1979ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. 

ಇನಿಕ್ಕುಂ ಇಲಮೈ ಸಿನಿಮಾದ ಮೂಲಕ ಸಿನಿಯಾನ ಆರಂಭಿಸಿದ ವಿಜಯಕಾಂತ್, ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವುದು ವಿಶೇಷ. ಅವರ ಬಹುತೇಕ ಸಿನಿಮಾಗಳು ಭ್ರಷ್ಟಾಚಾರದ ವಿರುದ್ಧದ ಕಥೆಯನ್ನು ಹೊಂದಿರುತ್ತಿದ್ದವು. 80ರ ದಶಕದಲ್ಲಿ ವಿಜಯಕಾಂತ್ ಯಾವ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು ಎಂದರೆ, 1984ರ ಒಂದೇ ವರ್ಷ ಅವರ 18 ಸಿನಿಮಾಗಳು ತೆರೆಕಂಡಿದ್ದವು.

ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ವಿಜಯಕಾಂತ್, 2015ರಲ್ಲಿ ತೆರೆಕಂಡ ಸಗಪ್ತಂ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆ ನಂತರ ಅವರು ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. 8 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಜಯಕಾಂತ್, ವಿರುಧಗಿರಿ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದಾರೆ. 1991 ರಲ್ಲಿ ತೆರೆಕಂಡ ಕ್ಯಾಪ್ಟನ್ ಪ್ರಭಾಕರನ್ ಸಿನಿಮಾದ ನಂತರ ವಿಜಯಕಾಂತ್‌ರನ್ನು ಅಭಿಮಾನಿಗಳು ಕ್ಯಾಪ್ಟನ್ ಎಂದೇ ಕರೆಯಲು ಆರಂಭಿಸಿದರು. ಚಿತ್ರರಂಗಕ್ಕೆ ಕಾಲಿಟ್ಟ 12 ವರ್ಷಕ್ಕೇ 100 ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ವಿಜಯಕಾಂತ್‌ ಅವರದ್ದು.

2005ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಅಂದರೆ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಧುಮುಕಿದ ವಿಜಯಕಾಂತ್, 2006ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. 2006 ಮತ್ತು 2011ರಲ್ಲಿ ಬೇರೆ ಬೇರೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ವಿಜಯಕಾಂತ್ ಎರಡು ಬಾರಿ ಶಾಸಕರಾದರು. 

ಆದರೆ 2016ರ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದರು. ಆನಂತರ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಜಯಕಾಂತ್‌ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.