ಸ್ಕೂಲ್ ಮಕ್ಕಳ ಮನರಂಜನೆಗಾಗಿ ಎದ್ದು ಬಿದ್ದು ಡ್ಯಾನ್ಸ್ ಮಾಡಿದ ಟೀಚರ್; ಕನ್ನಡಿಗರು ಫಿದಾ
ಮದುವೆ ಮನೆಯಲ್ಲಿ ಹಣ್ಣುಗಳೆಲ್ಲಾ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತದೆ.. ಹಣ್ಣುಗಳಿಗೆ ಮದುವೆ ಮಾಡಿಸುತ್ತಲೇ ಮಕ್ಕಳಿಗೆ ಕಲಿಕೆಯ ಪಾಠ ಹೇಳಿಕೊಡುತ್ತಿದ್ದಾರೆ ಟೀಚರ್. ಈಗ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿದ್ದಾರೆ ಮಕ್ಕಳ ಅಚ್ಚುಮೆಚ್ಚಿನ ವಂದನಾ ಟೀಚರ್ ಅವರಂತೆ ಇಲ್ಲೊಬ್ಬ ಟೀಚರ್ ತಾವು ಕುಣಿದು ಮಕ್ಕಳಿಗೂ ಹೆಬ್ಬೆರಳು ಕುಣಿಯುತ್ತಿದೆ ತಾನಿ ತಂದನೋ ಎಂದು ಅಭಿನಯ ಗೀತೆಯನ್ನು ಹೇಳಿಕೊಟ್ಟು ಜನರ ಮನ ಗೆಲ್ಲುತ್ತಿದ್ದಾರೆ.
ತರಗತಿಯ ತುಂಬ ಮಕ್ಕಳು. ಅವರ ಉಜ್ವಲ ಭವಿಷ್ಯಕ್ಕಾಗಿ ಕನಸು ಹೊತ್ತು ಪಾಠ ಹೇಳಿಕೊಡುವ ಶಿಕ್ಷಕರು. ಶಾಲೆ ಎಂಬ ದೇಗುಲದಲ್ಲಿ ಪ್ರತಿ ಮಗುವಿನಲ್ಲಿ ಉಜ್ವಲ ಭವಿಷ್ಯದ ಅಡಿಪಾಯ. ಕೈಹಿಡಿದು ತಿದ್ದುತ್ತಾ ‘ಅ’ ಅಕ್ಷರದ ಪ್ರಾರಂಭದಿಂದ ಅಭ್ಯಾಸದ ಮೊದಲ ಹೆಜ್ಜೆ ಇಡುತ್ತಾ, ಶಿಕ್ಷಣದ ಹಾದಿಯಲ್ಲಿ ಬಿದ್ದರೆ ಕೈಹಿಡಿದು ಮೇಲೆತ್ತಿ ಸಂತೈಸುತ್ತಾ, ಗೆದ್ದರೆ ಹುರಿದುಂಬಿಸುತ್ತಾ ಕರೆದೊಯ್ಯುತ್ತಾರೆ.
ಒಂದು ಹೊಸ ಉದ್ದೇಶದೊಂದಿಗೆ ಮಕ್ಕಳಿಗೆ ಪಾಠದ ಜತೆಗೆ ಹಾಡು-ನೃತ್ಯ-ಸಂಗೀತದ ಒಲವು ಬರುವಂತೆ ಮಾಡುತ್ತಿದ್ದಾರೆ ಈ ಶಿಕ್ಷಕಿ. ಈಗಿನ ಡಿಜಿಟಲ್ ಯುಗದಲ್ಲಿ ಕನ್ನಡ ಬಳಕೆಯೇ ಕಡಿಮೆಯಾಗುತ್ತಿದೆ. ಹಾಗಾಗಿ ಕನ್ನಡಕ್ಕೂ ಹೆಚ್ಚು ಪ್ರಾಶಸ್ತ್ಯ ಕೊಡಬೇಕು.ಎಂಬ ಯೋಚನೆ ಬಹಳ ಕಾಡತೊಡಗಿತ್ತು. ಕನ್ನಡದ ಹಾಡುಗಳಿಗೆ ಹೆಜ್ಜೆ ಸೇರಿಸಿಕೊಂಡು ನೃತ್ಯ ಮಾಡುತ್ತ ಹೋದೆ ಜೊತೆಯಾಗಿ ಮಕ್ಕಳನ್ನು ನಿಲ್ಲಿಸಿಕೊಂಡು ಮಾಡಿಸುತ್ತಾ ಹೋದೆ.
ಮಕ್ಕಳೂ ಕೂಡಾ ಹೆಚ್ಚು ಇಷ್ಪಡುತ್ತಿದ್ದಾರೆ ಎಂಬ ಆ ಒಂದು ಮಾತು ನನ್ನ ಮನ ತಣಿಸಿತು. ಅಂದೇ ನಿರ್ಧರಿಸಿದೆ ಇಂತಹ ಅನೇಕ ವಿಡಿಯೋಗಳನ್ನು ಮಾಡಿ ಮಕ್ಕಳು ನೋಡುವುದರಿಂದ ಬಹುಬೇಗ ಕನ್ನಡವನ್ನು ಕಲಿಯುತ್ತಾರೆ ಜೊತೆಗೆ ನೃತ್ಯವನ್ನು ಕೂಡ ಕಲಿಯುತ್ತಾರೆ. ಹಾಡು-ನೃತ್ಯದ ಜತೆಗೆ ಶಿಕ್ಷಣ ಬಹುಬೇಗ ತಲೆಗೆ ಹತ್ತುತ್ತದೆ ಎಂಬ ಭರವಸೆ ಗಟ್ಟಿಯಾಯಿತು.
ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡುವಂತೆ ಪೋಷಕರು ಒತ್ತಾಯಿಸಿದರು ಇದು ನನಗೊಂದು ರೀತಿಯ ಹೆಮ್ಮೆ ಎಂದು ಟೀಚರ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.