ಪರೀಕ್ಷೆ ಪೇಪರ್ ತಿದ್ದುವಾಗ ರೀಲ್ಸ್ ಮಾಡಿದ ಟೀಚರ್; ಸಿಡಿದೆ ದ್ದ ಕನ್ನಡಿಗರು

 | 
Js

ಸರ್ವಂ ರೀಲ್ಸ್ ಮಯಂ ಎನ್ನುವಂತಾಗಿದೆ ಇಂದಿನ ಜಗತ್ತು. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ರೀಲ್ಸ್ ಹುಚ್ಚಿಗೆ ದಾಸರಾಗಿದ್ದಾರೆ. ತಮ್ಮ ಕೆಲಸವನ್ನು ಬಿಟ್ಟು ರೀಲ್ಸ್ ಮಾಡಿ ಅಪಾಯಗಳ ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಉತ್ತರ ಪತ್ರಿಕೆಯನ್ನು ಕರೆಕ್ಷನ್ ಮಾಡುವ ಬದಲು ರೀಲ್ಸ್ ನಲ್ಲಿ ಶಿಕ್ಷಕಿಯೊಬ್ಬಳು ಮಗ್ನಳಾಗಿದ್ದಾಳೆ. 

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟೀಕಿಸಿದ್ದಾರೆ. ಸೋಷಿಯಲ್ ಮೀಡಿಯಾವು ಪ್ರತಿಭೆಗಳಿಗೆ ಅದ್ಭುತ ವೇದಿಕೆಯೆನ್ನುವ ಮಾತೇನೋ ನಿಜ. ಈಗಾಗಲೇ ಅದೆಷ್ಟೋ ಜನರು ನೃತ್ಯ, ನಟನೆ, ಹಾಡು ಹೀಗೆ ನಾನಾ ರೀತಿಯ ಪ್ರತಿಭೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫಾಲ್ಲೋರ್ಸ್ ಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಆದರೆ ನಮ್ಮ ಸುತ್ತಮುತ್ತಲಿನಲ್ಲಿ ಮಾಡುವ ಕೆಲಸವನ್ನು ಬಿಟ್ಟು ರೀಲ್ಸ್ ನಲ್ಲೇ ಮುಳುಗಿರುವವರು ಇದ್ದಾರೆ. ಇಲ್ಲೊಬ್ಬ ಶಿಕ್ಷಕಿಯ ಉತ್ತರ ಪತ್ರಿಕೆ ಕರೆಕ್ಷನ್ ಮಾಡುವ ವೇಳೆಯಲ್ಲಿ ರೀಲ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಮೇಲೆ ಈಕೆಗೆ ರೀಲ್ಸ್ ಹುಚ್ಚು ಎಷ್ಟಿದೆ ಎಂದು ತಿಳಿಯುತ್ತದೆ.ಹೌದು, ಬಿಹಾರದ ಪಾಟ್ನಾ ಕಾಲೇಜು ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ ರೀಲ್ಸ್ ಮಾಡಿದ್ದಾರೆ.

ಚಪ್ರಾ ಝಿಲ್ಲಾ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಶಾಲೆಯ ಬೆಂಚ್ ಮೇಲೆ ಹಲವಾರು ಉತ್ತರ ಪತ್ರಿಕೆಗಳನ್ನು ಇರಿಸಿರುವುದನ್ನು ನೋಡಬಹುದು. ಆದರೆ ಕರೆಕ್ಷನ್ ಮಾಡುವುದರಲ್ಲಿ ಇರಬೇಕಾದ ಗಮನ ಮೊಬೈಲ್ ಕ್ಯಾಮೆರಾದ ಮೇಲಿದೆ. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೆಲಸ ಮಾಡುವುದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ ಈ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.