ಮೇಲಿನ ಮನೆ ಅಂಕಲ್ ಜೊತೆ ಕೆಳಗಿನ ಮನೆ ಆಂಟಿ ಅಕ್ರಮ ಸಂಬಂಧ, ಬೆಳಕಿಗೆ ಬಂದಿದ್ದು ಹೇ.ಗೆ ಗೊ ತ್ತಾ

 | 
H

ಸ್ನೇಹಿತರೆ ನಮಸ್ಕಾರ, ಇದೊಂಥರ ಡಿಫರೆಂಟ್​ ಕಹಾನಿ. ಅದ್ಯಾವ ಗ್ಯಾಪ್​ನಲ್ಲಿ ಅದೇನ್​ ಆಯಿತೋ ಗೊತ್ತಿಲ್ಲ ಆದ್ರೆ ಪ್ರೀತಿ ಪ್ರೇಮ ಹುಟ್ಟು ಬಿಡತ್ತೆ. ಹೌದು ಇದೊಂದು ವಿಚಿತ್ರ ಲವ್ ಸ್ಟೋರಿ. ಅದು ಒಂದೇ ಕಟ್ಟಡ. ಅಲ್ಲಿ ಎರಡು ಕುಟುಂಬ ವಾಸವಿದೆ. ಇದ್ದಕ್ಕಿದ್ದಂತೆ ಮೇಲ್ಮನೆಯಲ್ಲಿದ್ದವನ ಪತಿ. ಕೆಳ ಮನೆಯಲ್ಲಿದ್ದವನ ಪತ್ನಿ ಕಾಣೆಯಾಗಿಬಿಟ್ಟಿದ್ದರು. ಇಬ್ಬರು ಕಾಣೆಯಾದ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಒಟ್ಟಿಗೆ ಮಿಸ್ ಆದವರ ಅಸಲಿ ಕಹಾನಿ ಏನು ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ. ಅದೇ ನೋಡಿ ಇಂಟರಸ್ಟಿಂಗ್ ವಿಚಾರ. 

ಇದು ಮೇಲಿನ ಮನೆ ಅಂಕಲ್, ಕೆಳಗಿನ ಮನೆ ಆಂಟಿ ಲವ್​ ಸ್ಟೋರಿ.ಇವರಿಬ್ಬರಿಗೂ ಲವ್ ಆಗಬಾರದ ವಯಸ್ಸಲ್ಲಿ ಲವ್​ ಆಗಿದೆ. ಗಂಡ-ಹೆಂಡತಿ ಮಕ್ಕಳು ಇರುವವರೇ ಹೇಳದೆ ಕೇಳದೆ ಜೂಟ್​ ಹೇಳಿದ್ದಾರೆ. ಗಂಡ-ಹೆಂಡತಿ ಕಳೆದುಕೊಂಡವರು ಒಂದೇ ಕಣ್ಣಲ್ಲಿ ಗೋಳೋ ಅಂತ ಅಳುತ್ತಿದ್ದಾರೆ. ನನ್ನ ಹೆಂಡತಿ ಒಂದು ತಿಂಗಳಿಂದ ಕಾಣ್ತಿಲ್ಲ, ಇವರ ಗಂಡನ ಜೊತೆ ಹೋಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ಮಾಡಿದ್ದಾರೆ ಮುಬಾರಕ್​ ಎನ್ನುವ ವ್ಯಕ್ತಿ. 

ಇವರ ಜೊತೆ ಇರುವವರು ಝೀನತ್ ನನ್ನ ಗಂಡ ಕಾಣ್ತಿಲ್ಲ ಸ್ವಾಮಿ ಎಂದು ಕಣ್ಣೀರಿಡುತ್ತ ನಿಂತಿದ್ದಾಳೆ. ಇವರಿಬ್ಬರ ಗಂಡ, ಹೆಂಡತಿಯೇ ಕಳೆದೊಂದು ತಿಂಗಳಿಂದ ಕಾಣೆಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ವಾಸಿಯಾಗಿದ್ದ ಈ ಬಾಳಲ್ಲಿ ಗಂಡ-ಹೆಂಡಿರ ಬಿರುಗಾಳಿಯೇ ಎದ್ದಿದೆ.
ಇದೊಂಥರ ಡಿಫರೆಂಟ್ ಕಹಾನಿ. ಇವರಿಬ್ಬರ ಸಂಸಾರ ಒಂದೇ ಬಿಲ್ಡಿಂಗ್​ನಲ್ಲಿ ವಾಸವಾಗಿತ್ತು. ಮುಭಾರಕ್​​ ಕೆಳಮನೆಯಲ್ಲಿದ್ದರೆ, ಝೀನತ್​ ಮೇಲ್ಮನೆಯಲ್ಲಿದ್ದರು. 

ಅದ್ಯಾವ ಗ್ಯಾಪ್​ನಲ್ಲಿ ಅದೇನ್​ ಆಯಿತೋ ಗೊತ್ತಿಲ್ಲ ಕೆಳಮನೆಯಲ್ಲಿದ್ದ ಹೆಂಡತಿ ಕಾಣ್ತಿಲ್ಲ ಅಂತ ಗಂಡ ಕಂಪ್ಲೈಂಟ್​ ಕೊಟ್ಟರೆ, ಮೇಲ್ಮನೆಯಲ್ಲಿದ್ದ ಗಂಡ ಕಾಣಿಸುತ್ತಿಲ್ಲ ಅಂತ ಹೆಂಡತಿ ದೂರು ಕೊಟ್ಟಿದ್ದಾರೆ. 
ಇಂಟ್ರೆಸ್ಟಿಂಗ್​ ವಿಷಯ ಎಂದರೆ ಈಕೆಯ ಗಂಡನೇ ಈತನ ಹೆಂಡತಿ ಜೊತೆ ಪರಾರಿಯಾಗಿದ್ದಾರೆ ಅನ್ನೋ ಅನುಮಾನ ವ್ಯಕ್ತಪಡಿಸ್ತಿದ್ದಾರೆ. 12 ವರ್ಷದ ಹಿಂದೆ ವಿವಾಹವಾಗಿದ್ದ ನವೀದ್ ಮತ್ತು ಝೀನತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮುಬಾರಕ್​ ಸಹ ಶಾಜಿಯಾ ಜೊತೆ 8 ವರ್ಷದ ಹಿಂದೆಯೇ ಮದುವೆಯಾಗಿದ್ದರು. 

ಇವರಿಗೂ ಸಹ ಇಬ್ಬರು ಮಕ್ಕಳು. ಒಂದೇ ಬಿಲ್ಡಿಂಗ್​ನಲ್ಲಿದ್ದವರ ನಡುವೆ ಕಣ್​ಕಣ್​ ಸಲುಗೆ ಬೆಳೆದಿದೆ. ಫೋನ್​ ನಂಬರ್​ ಸಿಗ್ತಿದ್ದಂತೆ ಚಾಟಿಂಗ್​ ಸಹ ಜೋರಾಗಿದೆ. ಇದ್ದಕ್ಕಿದ್ದಂತೆ ಕಳೆದ ತಿಂಗಳು 9 ರಂದು ಇಬ್ಬರೂ ಕಾಣೆಯಾಗಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆಯೇ ಅಕ್ರಮ ಸಂಬಂಧವಿದೆ ಅಂತ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರಿಗೆ ದೂರು ಕೊಟ್ಟು ಒಂದು ತಿಂಗಳಾದರೂ ಇಬ್ಬರ ಸುಳಿವಿಲ್ಲ. ಪೊಲೀಸರು ನಮ್ಮ ಕೇಸ್​ ಬಗ್ಗೆ ಇಂಟ್ರೆಸ್ಟ್​ ತೋರಿಸ್ತಿಲ್ಲ ಅಂತ ಆರೋಪ ಮಾಡಿದ್ದಾರೆ.ಒಟ್ಟಿನಲ್ಲಿ ಈ ಪ್ರಕರಣ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.