ತುಟಿಗೆ ತುಟಿ ಕೊಟ್ಟ ದೃ ಶ್ಯ ಜಾಲತಾಣದಲ್ಲಿ ಬಿಡುಗಡೆ
Sep 2, 2024, 10:47 IST
|
ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿದ್ದಾರೆ. ಇತರೆ ಆರೋಪಿಗಳನ್ನು ಕೂಡ ನಾನಾ ಜೈಲಿಗೆ ಕಳುಹಿಸಲಾಗಿದೆ. ʼದಾಸʼ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ʼಡಿಬಾಸ್ʼ ಎಂದು ಅಭಿಮಾನವನ್ನು ಮೆರೆಯುತ್ತಿದ್ದಾರೆ.
ಈ ನಡುವೆ ನಟ ದರ್ಶನ್ ಹಾಗೂ ಧನ್ವೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೆಲ ಸಮಯದ ಹಿಂದೆಷ್ಟೇ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಸೇರಿದಂತೆ ಇತರೆ ಸಿನಿಮಾರಂಗದ ನಟಿಯರ ಫೋಟೋ, ವಿಡಿಯೋಗಳನ್ನು ಎಐ ಟೆಕ್ನಾಲಜಿ ಬಳಸಿಕೊಂಡು ಡೀಪ್ ಫೇಕ್ ಮಾಡಲಾಗಿತ್ತು.
ಅತ್ತ ದರ್ಶನ್ ಜೈಲುವಾಸದ ವಿಚಾರ ಮತ್ತೆ ಸುದ್ದಿಯಲ್ಲಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಧನ್ವೀರ್ ಗೌಡ ಹಾಗೂ ದರ್ಶನ್ ಎಐ ಟೆಕ್ನಾಲಜಿಯ ವಿಡಿಯೋ ವೈರಲ್ ಆಗಿದೆ.ಅಕ್ಕಪಕ್ಕ ಕೂತಿರುವ ದರ್ಶನ್ ಹಾಗೂ ಧನ್ವೀರ್ ಅವರು ಲಿಪ್ ಲಾಕ್ ಮಾಡಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ನೋಡಿ ಅನೇಕರು ಶಾಕ್ ಆಗಿದ್ದಾರೆ.
ವೈರಲ್ ಆಗುತ್ತಿದ್ದಂತೆ ಈ ವಿಡಿಯೋ ಮಾಡಿದವರು ಯಾರು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದರ್ಶನ್ – ಧನ್ವೀರ್ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಎಐ ಬಹಳ ಅಪಾಯಕಾರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕಿಡಿಗೇಡಿಗಳ ಕಣ್ಣಿಗೆ ದಾಸ ಬಿದ್ದಿದ್ದು ಬೇಸರದ ಸಂಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.